ಬೆಂಗಳೂರು: ವೀಕೆಂಡ್ ವಿದ್ ರಮೇಶ್ ಶೋನ ಸೀಸನ್-5ರ ಮೊದಲ ಅತಿಥಿಯಾಗಿ ಆಗಮಿಸಿದ್ದ ನಟಿ ರಮ್ಯಾ, ಮೆಚ್ಚುಗೆಗೆ ಪಾತ್ರವಾಗಿದ್ದಕ್ಕಿಂತ ಟ್ರೋಲ್​ಗೆ ಒಳಗಾಗಿದ್ದೇ ಹೆಚ್ಚು. ಅದರಲ್ಲೂ ಆಕೆಯ ವಿರುದ್ಧ ಕನ್ನಡಿಗರು ಕಿಡಿಕಾರಿದ್ದೂ ಕಂಡುಬಂದಿದೆ.
ಮೋಹಕತಾರೆ ಎಂದು ಕರೆಯಲಾಗುವ, ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಇಂಗ್ಲಿಷ್​ ಮೋಹದಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ವಾಹಿನಿಯ ಕನ್ನಡದ ಶೋನಲ್ಲೇ ರಮ್ಯಾ ಅದ್ಯಾಕೆ ಅಷ್ಟೊಂದು ಇಂಗ್ಲಿಷ್​ ಮಾತನಾಡಿದರು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ತೀಕ್ಷ್ಣವಾಗಿಯೇ ಟೀಕಿಸಿದ್ದಾರೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಇಡೀ ಶೋನಲ್ಲಿ ರಮ್ಯಾ ಕನ್ನಡಕ್ಕಿಂತ ಇಂಗ್ಲಿಷ್​ ಬಳಸಿದ್ದೇ ಹೆಚ್ಚು ಎಂಬುದೇ ವೀಕ್ಷಕರ ತಕರಾರು. ಹೀಗಾಗಿ ಕನ್ನಡಿಗರು ಒಂದೆಡೆ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಿಕೊಂಡರೆ, ರಾಜಕೀಯ ಕಾರಣಕ್ಕೆ ಇತರ ಪಕ್ಷಗಳ ಕಾರ್ಯಕರ್ತರೂ ಇದೇ ವಿಚಾರವನ್ನು ನೆಪವಾಗಿಸಿಕೊಂಡು ರಮ್ಯಾ ವಿರುದ್ಧ ಹರಿಹಾಯ್ದಂಥ ಪೋಸ್ಟ್​ಗಳೂ ಕಂಡುಬಂದಿವೆ.
ಕನ್ನಡಕ್ಕಿಂತ ಯಾರು ದೊಡ್ಡವರಿಲ್ಲ, ಇಂಗ್ಲೀಷ್ ಊಟದ ಜೊತೆ ಉಪ್ಪಿನಕಾಯಿ ತರ ಇರ್ಲಿ ಆದ್ರೆ ಅದೆ ಊಟ ಆಗೋದು ಬೇಡ#WeekendWithRamesh5#RamyaInWeekendWithRamesh#Ramyapic.twitter.com/DorUlTYt1f
— ಬಳ್ಳಾರಿ ರಾಯಣ್ಣ (@ballari_rayanna)March 25, 2023

ವೀಕೆಂಡ್ ವಿದ್ ರಮೇಶ್ ಶೋ ನೋಡಲು ಕುಳಿತ ಕನ್ನಡಿಗರಿಗೆ ರಮ್ಯಾ ಅತಿಯಾಗಿ ಆಡಿದ ಇಂಗ್ಲಿಷ್ ಮಾತುಗಳು ಕಿರಿಕಿರಿ ಉಂಟುಮಾಡಿವೆ. ಕನ್ನಡದ ಕಾರ್ಯಕ್ರಮವಾದರೂ ಆಕೆ ಅಲ್ಲಿ ಕನ್ನಡಕ್ಕೆ ಆದ್ಯತೆ ನೀಡದ್ದರಿಂದ ಅದು ಯಾವುದೋ ಕಂಗ್ಲಿಷ್​ ಕಾರ್ಯಕ್ರಮದಂತೆ ಅನಿಸಿತು ಎಂದೂ ಜನರು ಆಡಿಕೊಂಡಿದ್ದಾರೆ.
ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
