ಬೆಂಗಳೂರು:ನಟಿ, ಮಾಜಿ ಸಂಸದೆ ರಮ್ಯಾ ಸದ್ಯ ಬೇಸರದಲ್ಲಿದ್ದಾರೆ. ಅವರ ಮುದ್ದಿನ ನಾಯಿ ‘ಚಾಂಪ್’ ಇನ್ನಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಮುದ್ದಿನ ನಾಯಿಯ ಸಾವಿನಿಂದಾಗಿ ರಮ್ಯಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ:ಗೌಡ್ರ ಹುಡುಗನನ್ನೇ ಹುಡುಕಿ ಕೊಡಿ… ಮದ್ವೆಯಾಗ್ತೀನಿ; ಹಸೆಮಣೆ ಏರಲು ತಯಾರಾದ್ರಾ ರಮ್ಯ?
ಕಾಂಗ್ರೆಸ್​​ನ ಸ್ಟಾರ್ ಪ್ರಚಾರಕಿಯಾಗಿರುವ ರಮ್ಯಾ ಪ್ರೀತಿಯ ನಾಯಿಯ ಸಾವಿನಿಂದ ನೊಂದಿದ್ದಾರೆ. ಹೀಗಾಗಿ ಪ್ರಚಾರ ಕಾರ್ಯಕ್ರಮಗಳಿಂದ ಹಿಂದೆ ಸರಿದಿದ್ದಾರೆ. ಇಂದು ಬೆಂಗಳೂರಿನ ಬಸವನಗುಡಿ, ಜಯನಗರ, ಹೆಬ್ಬಾಳದಲ್ಲಿ ರಮ್ಯಾ ಪ್ರಚಾರ ಕಾರ್ಯ ನಿಗದಿಯಾಗಿತ್ತು. ಇದೀಗ ಮುದ್ದಿನ ‘ಚಾಂಪ್’ ನಿಧನದಿಂದ ಪ್ರಚಾರ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ.
ಇದನ್ನೂ ಓದಿ:‘ಮದುವೆ ಆದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ?’ ಪ್ರಶ್ನೆಗೆ ಬಿಜೆಪಿ ನಾಯಕಿಯ ಖಡಕ್ ಉತ್ತರ
ನಿನ್ನೆ ತಮ್ಮ ಮುದ್ದಿನ ನಾಯಿ ನಾಪತ್ತೆಯಾಗಿದ್ದು, ಅವನನ್ನು ಹುಡುಕಲು ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರಮ್ಯಾ, ಅದಾದ ಆರೇ ಗಂಟೆಗಳಲ್ಲಿ ನಾಯಿ ಸಾವಿಗೀಡಾದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ‘ಚಾಂಪ್ ಇನ್ನಿಲ್ಲ, ಅವನನ್ನು ಹುಡುಕಿದ್ದಾಗಿ ಧನ್ಯವಾದಗಳು’ ಎಂದು ಅವರು ಹೇಳಿಕೊಂಡಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × five =
Remember me
