ಬೆಂಗಳೂರು:ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿದ್ದಾರೆ. ಸಿನಿಮಾದಿಂದ ಕೊಂಚ ಬ್ರೇಕ್​ ಪಡೆದು ರೀಲ್ಯಾಕ್ಸ್​​ ಮೂಡ್​​ನಲ್ಲಿರುವ ನಟಿ ಒಲೆ ಇಲ್ಲದೆ ಬೇಯಿಸದೆ ರುಚಿಕರವಾದ ಅಡುಗೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್​​ಸ್ಟಾಗ್ರಮ್​​ನಲ್ಲಿ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ. ರಮ್ಯಾ ಕೃಷ್ಣನ್ ಮಾವಿನಕಾಯಿ ಟಾರ್ಟ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಒಲೆಯಿಲ್ಲದೆ ಅಡುಗೆ ಮಾಡುವುದನ್ನು ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ರಮ್ಯಾ ಕೃಷ್ಣನ್ ಅವರ ವಿಡಿಯೋಗೆ ಸಾಕಷ್ಟು ಲೈಕ್ಸ್ ಬರುತ್ತಿದೆ.
ವಿಡಿಯೋದಲ್ಲಿ ರಮ್ಯಾ ಕೃಷ್ಣ ಅವರು ಮಾವಿನ ಕಾಯಿಯನ್ನು ಚಿಕ್ಕದಾಗಿ ಕಟ್​​ ಮಾಡಿಕೊಂಡು ಒಂದು ಬೌಲ್​ಗೆ ಹಾಕುತ್ತಾರೆ. ನಂತರ ಇದೆ ಬೌಲ್​​ಗೆ ಉಪ್ಪು, ಖಾರದಪುಡಿ, ಮಸಾಲೆ ಪೌಡರ್​ ಹಾಗೂ ಅಡುಗೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಾರೆ. ರುಚಿಯಾದ ಉಪ್ಪಿನಕಾಯಿ ಸವಿಯಲು ಸಿದ್ಧವಾಗುತ್ತದೆ.
A post shared by Ramya Krishnan (@meramyakrishnan)

ರಮ್ಯಾ ಕೃಷ್ಣನ್ ನಟಿ ಮಾತ್ರವಲ್ಲದೆ ಖಳನಾಯಕಿಯಾಗಿಯೂ ತಮಿಳು ಸಿನಿಮಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಮಲ್ ಹಾಸನ್ ಜೊತೆ ಪಂಚ ತಂತ್ರಂ ಚಿತ್ರದಲ್ಲಿ ಮಾಗಿಯಾಗಿ ನಟಿಸಿದ್ದ ರಮ್ಯಾ ಕೃಷ್ಣನ್ ಅವರು ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಮತ್ತು ಕನ್ನಡದಂತಹ ಇತರ ಭಾಷೆಯ ಚಿತ್ರಗಳಲ್ಲಿ ಹಲವಾರು ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ.
ರಮ್ಯಾ ಕೃಷ್ಣನ್ ಅವರು ತೆಲುಗು ಚಲನಚಿತ್ರ ನಿರ್ದೇಶಕ ಕೃಷ್ಣ ವರ್ಮಾ ಅವರನ್ನು ವಿವಾಹವಾದರು ಮತ್ತು ಒಬ್ಬ ಮಗನು ಇದ್ದಾನೆ. ಮದುವೆಯ ನಂತರ ರಮ್ಯಾ ಕೃಷ್ಣನ್ ಸಿನಿಮಾದಲ್ಲಿ ಮಾತ್ರವಲ್ಲದೆ ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಲು ಆರಂಭಿಸಿದರು. ಆ ಮೂಲಕ ಸನ್ ಟಿವಿಯಲ್ಲಿ ಅವರು ನಟಿಸಿದ ತಂಗಂ ಮತ್ತು ವಂಶಂ ಧಾರಾವಾಹಿಗಳು ಭಾರೀ ಹಿಟ್ ಆದವು.
2015 ರಲ್ಲಿ ರಾಜಮೌಳಿ ನಿರ್ದೇಶಿಸಿದ ಬಾಹುಬಲಿಯಲ್ಲಿ ರಮ್ಯಾ ಕೃಷ್ಣನ್ ಅವರ ರಾಜಮಾತೆ ಶಿವಕಾಮಿದೇವಿಯ ಪಾತ್ರವು ದೊಡ್ಡ ಮಟ್ಟದಲ್ಲಿ ತಲುಪಿತು ಮತ್ತು ಅವರು ಪ್ರಶಂಸೆಯನ್ನು ಪಡೆದರು. ನಂತರ ಕ್ವೀನ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದ ರಮ್ಯಾ ಕೃಷ್ಣನ್ ಸದ್ಯ ಅದರ ಎರಡನೇ ಭಾಗದಲ್ಲಿ ನಟಿಸುತ್ತಿದ್ದಾರೆ.
ಮದುವೆ ಆಗುವ ಆಸೆ ಇಲ್ಲ…ರಾಜಕೀಯಕ್ಕೆ ಹೋಗಬೇಕು ಅನ್ನೋ ಪ್ಲ್ಯಾನ್​​ ಇದೆ; ಸೋನು ಶ್ರೀನಿವಾಸ್ ಗೌಡ

ಊಟ ಮಾಡಲು ಸಾಧ್ಯವಾಗದೆ, ನಿದ್ದೆ ಇಲ್ಲದೆ ಬಳಲುತ್ತಿದ್ದ ಖ್ಯಾತ ಸೌತ್ ನಟಿ ನಿಧನ

ಪತ್ನಿ ಗರ್ಭಿಣಿ, ಇತ್ತ ಮದ್ವೆ ಫೋಟೋ ಡಿಲೀಟ್; ಮಗು ಹುಟ್ಟೋ ಸಮಯದಲ್ಲಿ ರಣವೀರ್, ದೀಪಿಕಾ ಹೀಗ್ಯಾಕೆ ಮಾಡ್ತಿದ್ದಾರೆ?

ಡಿ ಬಾಸ್​ ಅಭಿನಯದ “ಕರಿಯ” ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:twenty − eighteen =
Remember me
