ಬೆಂಗಳೂರು:ಸ್ಯಾಂಡಲ್​​ವುಡ್​ ಡ್ರಗ್ಸ್​ ಜಾಲ ನಂಟು ಪ್ರಕರಣದಲ್ಲಿ ಸಿಲುಕಿರುವ ನಟಿ ಸಂಜನಾ ಗಲ್ರಾನಿ ಕೂದಲು ಪರೀಕ್ಷೆಯಿಂದ ಡ್ರಗ್ಸ್​ ಸೇವನೆ ಖಚಿತವಾದ ಬೆನ್ನಲ್ಲೇ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನು ತಿಳಿಸಿರುವ ಸಂಜನಾ ತಾಯಿ ರೇಷ್ಮಾ ಗಲ್ರಾನಿ, ಸದ್ಯ ಆಕೆ ಈ ಕೇಸಿನಿಂದ ಡಿಸ್ಟರ್ಬ್ ಆಗಿದ್ದಾಳೆ.. ಪದೇ ಪದೇ ಇದೇ ಕೇಸ್ ಬಗ್ಗೆ ಕೇಳಿ ಡಿಪ್ರೆಶನ್​ಗೆ ಹೋಗಿದ್ದಾಳೆ. ಹುಷಾರಿಲ್ಲದ ಕಾರಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದಿದ್ದಾರೆ.
ನನ್ನ ಮಗಳು ಏನೂ ತಪ್ಪು ಮಾಡಿಲ್ಲ. ಆದ್ರೆ ದುರಾದೃಷ್ಟದಿಂದ ಈ ತರ ಎಲ್ಲಾ ಆಗ್ತಿದೆ. ಆದ್ರೆ ನಾವು ಭಗವಾನನ್ನ ನಂಬ್ತೀವಿ ಎಂದ ರೇಷ್ಮಾ ಅವರು, ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯ ಮಾಡ್ತೀದೀವಿ. ಅವಳಿಗೆ ಹುಷಾರಿಲ್ಲದ ಕಾರಣ ನಂಗೆ ಊಟ ನೀಡೋಕೆ ಹೇಳಿದ್ಳು. ಒಂದು ಹುಡುಗಿ ಆಗಿ ಒಳ್ಳೇ ಕೆಲಸ ಮಾಡ್ತಿದ್ದಾಳೆ. ಎಲ್ಲಾ ನಮ್ಮ ಡೆಸ್ಟಿನಿ ಎಂದಿದ್ದಾರೆ.
ಇದನ್ನೂ ಓದಿ:ಇಂಧನ ಬೆಲೆ: ಮುಂಬರುವ ತಿಂಗಳಲ್ಲಿ ಕೊಂಚ ಪರಿಹಾರ ಎಂದ ಕೇಂದ್ರ ಸಚಿವ
ಸಂಜನಾಗೆ ಹುಷಾರಿಲ್ಲ ಬೇಜಾರನಲ್ಲಿ ಇದ್ದೇವೆ. ಅವಳಿಗೆ ಅಟ್ಯಾಕ್​​ ತರಾ ಆಗ್ತಿದೆ. ತುಂಬಾ ಡಿಪ್ರೆಸ್ ಆಗಿದ್ದಾರೆ. ಎಲ್ಲರೂ ಸರ್ಪೋಟ್ ಮಾಡಿ. ತಾಯಿಯಾಗಿ ದೇವರನ್ನು ಪ್ರೇಯರ್ ಮಾಡ್ತೇನೆ ಎಂದು ಸಂಜನಾ ತಾಯಿ ಭಾವುಕರಾಗಿ ನುಡಿದಿದ್ದಾರೆ.


A post shared by SANJJANAA GALRANI. (@sanjjanaagalrani)
ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾದ ಸಂಜನಾ, ಮೂರು ಗಂಟೆಗಳ ಮುಂಚೆ ಕೂಡ ಇನ್​​ಸ್ಟಾಗ್ರಾಂನಲ್ಲಿ ರೀಲ್ ಪೋಸ್ಟ್​ ಮಾಡಿದ್ದಾರೆ. ವಿಡಿಯೋ ಮಾಡೋದೇ ನನ್ನ ಕೆಲಸ.. ದಯವಿಟ್ಟು ಟ್ರೋಲ್ ಮಾಡಬೇಡಿ. ನನ್ನ ಪೋಸ್ಟ್​ ಅಥವಾ ಪರ್ಸನಾಲಿಟಿ ಇಷ್ಟ ಆಗದಿದ್ರೆ ಅನ್​ಫಾಲೋ ಮಾಡಿ ಎಂದಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​

ಮಳೆಯ ಅಬ್ಬರಕ್ಕೆ ಮನೆ ಕುಸಿತ: ಮನೆಯೊಡತಿ ಪಾರಾದದ್ದೇ ಅದೃಷ್ಟ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − four =
Remember me
