ಶಿವಮೊಗ್ಗ:ಭಾಜಪದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಇಂದು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಟಿ ಶ್ರುತಿಯ ಕೆನ್ನೆ ಹಿಂಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ನಗರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಯಲ್ಲಿ ಈ ಸನ್ನಿವೇಶ ಕಂಡುಬಂದಿದೆ. ಸಾವಿರಾರು ಜನರು ಜಮಾಯಿಸಿದ್ದ ಈ ಮೆರವಣಿಗೆಯಲ್ಲಿ ನಟಿ ಶ್ರುತಿ ಕೂಡ ಪಾಲ್ಗೊಂಡಿದ್ದು, ಪಕ್ಕದಲ್ಲಿದ್ದ ಬಿಎಸ್​ವೈ ಇದೇ ಸಂದರ್ಭದಲ್ಲಿ ಅವರ ಕೆನ್ನೆ ಹಿಂಡಿದ್ದು, ಈ ಫೋಟೋ ಎಲ್ಲೆಡೆ ಹರಿದಾಡಲಾರಂಭಿಸಿದೆ.
ಇದನ್ನೂ ಓದಿ:ಬಿಜೆಪಿ ಲಿಂಗಾಯತ ನಾಯಕರ ಸಭೆ; ಲಿಂಗಾಯತರೇ ಮುಂದಿನ ಸಿಎಂ ಅಂತ ಘೋಷಿಸಲು ಆಗ್ರಹ
ಮೆರವಣಿಗೆಗೆ ಸೇರಿಕೊಂಡ ನಟಿ ಶ್ರುತಿ ಮೊದಲು ಬಿ.ಎಸ್. ಯಡಿಯೂರಪ್ಪ ಅವರಿಗೆ ಕೈಮುಗಿದು ನಮಸ್ಕಾರ ಮಾಡಿದ್ದರು. ನಂತರ ಬಿಎಸ್​ವೈ ಅವರ ಆಶೀರ್ವಾದ ಪಡೆಯಲು ತಲೆ ಬಾಗಿಸಿದ್ದರು. ಆಗ ಆಕೆಯ ತಲೆ ನೇವರಿಸಿದ ಯಡಿಯೂರಪ್ಪ, ಕೆನ್ನೆಯನ್ನೂ ಹಿಂಡಿ, ಆತ್ಮೀಯತೆಯಿಂದ ಏನನ್ನೋ ಹೇಳಿದ್ದು ಕಂಡುಬಂತು.
ಇದನ್ನೂ ಓದಿ:ಪತಿಯ ನಿಧನ, ಬಳಿಕ ಗರ್ಭಪಾತವಾಗಿ ಮಗು ಕೂಡ ಸಾವು; ಇನ್ನು ಮಕ್ಕಳಾಗಲ್ಲವೆಂದು ಮಗುವನ್ನು ಕದ್ದ ಮಹಿಳೆಯ ಬಂಧನ
ಇದುವರೆಗೆ ಬಿಎಸ್​ವೈ ಸ್ಪರ್ಧಿಸುತ್ತಿದ್ದ ಶಿವಮೊಗ್ಗದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲಿದ್ದು, ಅದ್ಧೂರಿಯಾಗಿ ಬೃಹತ್ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಲಾಯಿತು. ಶಾಸಕ ಪಿ.ರಾಜೀವ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇಬ್ಬರ ಆಸೆಗೂ ಕೊಳ್ಳಿ ಇಟ್ಟ ದಳ್ಳುರಿ: ಮೂರ್ತಿಗೂ ಇಲ್ಲ, ರಾಜ್​ಗೂ ಇಲ್ಲ ಕಾಂಗ್ರೆಸ್ ಟಿಕೆಟ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
