ಮುಂಬೈ:ಕಿರುತೆರೆ ನಟಿ ತುನಿಷಾ ಶರ್ಮಾಗೆ ಮತಾಂತರವಾಗುವಂತೆ ಬಲವಂತ ಮಾಡಲಾಗಿತ್ತು ಎಂದು ಆಕೆಯ ತಾಯಿ ವನಿತಾ ಶರ್ಮಾ ಆರೋಪ ಮಾಡಿದ್ದರು. ಇದಕ್ಕೆ ಶೀಜಾನ್​​​ ಖಾನ್​​ ಕುಟುಂಬ ಪತ್ರಿಕಾ ಗೋಷ್ಠಿ ನಡೆಸಿ ಪ್ರತ್ಯಾರೋಪ ಮಾಡಿದ್ದಾರೆ.
ಸಹನಟ ಶೀಜಾನ್​​ ಖಾನ್​​​​ ಸಹೋದರಿ ಫಲಕ್​​ ನಾಜ್​​​​, ‘ಪರಸ್ಪರ ಹೊಂದಾಣಿಕೆಯಿಂದಲೇ ಇಬ್ಬರ ನಡುವೆ ಬ್ರೇಕಪ್​ ಆಗಿತ್ತು, ಕೆರಿಯರ್​​​ ಬಗ್ಗೆ ಗಮನ ಕೋಡೋಣ ಎಂಬ ಕಾರಣಕ್ಕೆ ಹೀಗೆ ಮಾಡಿದ್ರು. ಇಬ್ಬರ ನಡುವಿನ ವಾಟ್ಸಪ್​ ಚಾಟ್​ಗಳು ಕೂಡ ಪೊಲೀಸರ ಬಳಿ ಇವೆ. ಯಾವುದೇ ರೀತಿಯ ಜಗಳ, ಮನಸ್ತಾಪಗಳು ಇಬ್ಬರ ನಡುವೆ ಇರಲಿಲ್ಲ. ಪರಸ್ಪರ ಹೊಂದಾಣಿಕೆ, ಒಪ್ಪಿಗೆಯಿಂದಲೇ ಬ್ರೇಕಪ್​​ ಆಗಿದೆ…’ ಎಂದು ಹೇಳಿಕೆ ನೀಡಿದ್ದಾರೆ.
‘ಶೀಜಾನ್ ಖಾನ್​ ವಿರುದ್ಧದ ಎಲ್ಲ ಆರೋಪಗಳನ್ನೂ ತುನಿಷಾ ಚಿಕ್ಕಪ್ಪ ಪವನ್ ಶರ್ಮಾ ಮಾಡಿದ್ದಾರೆ. ಪ್ರತಿಯೊಂದಕ್ಕೂ ತುನಿಷಾ ಚಿಕ್ಕಪ್ಪನ ಹಸ್ತಕ್ಷೇಪದಿಂದ ಆಕೆ ರೋಸಿಹೋಗಿದ್ದರು…’ ಎಂದು ಶೀಜಾನ್​​ ಕುಟುಂಬ ದೂರಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಹಿಜಾಬ್​ ಧರಿಸಿರುವ ತುನಿಷಾ ಫೋಟೊ ಸಿನಿಮಾದ ಶೂಟಿಂಗ್​​​ಗೆ ಸಂಬಂಧಪಟ್ಟಿದ್ದಷ್ಟೆ. ಹಿಜಾಬ್​, ಲವ್​​ಜಿಹಾದ್​​, ದರ್ಗಾ ವಿಷಯಗಳೆಲ್ಲವೂ ಸುಳ್ಳು ಮತ್ತು ಆಧಾರರಹಿತವಾದದ್ದು ಎಂದೂ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
