ಬೆಂಗಳೂರು:ನಟಿ ಉಮಾಶ್ರೀ ಬಣ್ಣದ ಬದುಕಿನಲ್ಲಿ ತೊಡಗಿಕೊಂಡು ಕಲಾ ದೇವಿಯ ಸೇವೆ ಮಾಡುತ್ತಿದ್ದಾರೆ. ನಾಟಕಗಳಲ್ಲಿ ಅಭಿನಯಿಸುತ್ತ ಬೆಂಗಳೂರಿಗೆ ಬಂದ ಉಮಾಶ್ರೀ ನಟಿಯಾಗಿ ಬೆಳೆದು ಪ್ರಸಿದ್ಧರಾದರು. ಯಾವುದೇ ಪಾತ್ರ ಕೊಟ್ಟರು ಜೀವ ತುಂಬುವ ಅಪ್ರತಿಮ, ಅತ್ಯುತ್ತಮ ಕಲಾವಿದೆ ಎನ್ನುವ ಹೆಗ್ಗಳಿಕೆ ಉಮಾಶ್ರೀ ಅವರದ್ದು. ನಟಿ ಉಮಾಶ್ರೀ ಅವರು ಇಷ್ಟೊಂದು ದೊಡ್ಡ ಮಟ್ಟದ ಹೆಸರು ಹಾಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುವ ಮೊದಲು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.
ತುಮಕೂರು ಜಿಲ್ಲೆ, ತಿಪಟೂರಿನ ನೊಣವಿನಕೆರೆಯವರು ನಟಿ ಉಮಾಶ್ರೀ.  ಚಿಕ್ಕ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆಸರೆಯಲ್ಲಿ ಬೆಳದವರಂತೆ ಉಮಾಶ್ರೀ. ನಾಟಕಗಳಲ್ಲಿ ಅಭಿನಯಿಸುತ್ತ ಬೆಂಗಳೂರಿಗೆ ಬಂದ ಉಮಾಶ್ರೀ ನಟಿಯಾಗಿ ದಿನದಿನಕ್ಕೂ ಬೆಳೆದು ಪ್ರಸಿದ್ಧರಾದರು. ಸಿನಿಮಾಗಳಲ್ಲಿ ಕೂಡ ಪಾಲಿಗೆ ಬಂದ ಪಾತ್ರಗಳನ್ನು ಮಾಡಿಕೊಂಡು ಜನಮೆಚ್ಚುಗೆ ಪಡೆಯುತ್ತ, ದಿನದಿನಕ್ಕೂ ಖ್ಯಾತಿ ಉತ್ತುಂಗಕ್ಕೆ ಏರುತ್ತಲೇ ನಡೆದರು.
ಚೆಂದದ ಹುಡಗನೊಬ್ಬನ ಬಣ್ಣದ ಮಾತಿಗೆ ಮರುಳಾಗಿ ಮದುವೆ ಆಗಿಬಿಟ್ಟರು. ಚೆಂದದ ಗಂಡನೊಟ್ಟಿಗೇ ಇದ್ದರೂ ಸುಖ ಸಂಸಾರ ಅವರಿಗೆ ಸಿಗಲಿಲ್ಲ. ನಟಿ ಉಮಾಶ್ರೀ ಅವರಿಗೆ ಗಂಡ ದಿನಾಲೂ ಕುಡಿದು ಬಂದು ಹೊಡೆಯುತ್ತಿದ್ದ ಎನ್ನಲಾಗಿದೆ. ಗಂಡನೊಟ್ಟಿಗೆ ಒಂದು ದಿನವೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲೇ ಇಲ್ಲವಂತೆ. ಅಷ್ಟರಲ್ಲಾಗಲೇ ಎರಡು ತಿಂಗಳ ಬಸುರಿಯಾಗಿದ್ದ ಉಮಾಶ್ರೀಯವರನ್ನು ಬಿಟ್ಟುಹೋದ ಗಂಡ, ಬೇರೊಂದು ಹೆಂಗಸಿನ ಸಂಬಂಧ ಬೆಳೆಸಿ ಅವಳೊಟ್ಟಿಗೆ ಸಂಸಾರ ಶುರುವಿಟ್ಟುಕೊಂಡರಂತೆ. ವಿಜಯಕುಮಾರ್ ಹಾಗೂ ಗಾಯತ್ರಿ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇಬ್ಬರನ್ನು  ಉಮಾಶ್ರೀ ಒಬ್ಬಂಟಿಯಾಗಿ ಮಕ್ಕಳನ್ನು ಸಾಕಿದ್ದಾರೆ ಎನ್ನಲಾಗಿದೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ.
ನಟಿ, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಆದರೆ, ಈ ಹಂತಕ್ಕೆ ಬರುವ ಮೊದಲು ಉಮಾಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ.  ಒಂಟಿಯಾಗಿ ತನ್ನ ಇಬ್ಬರು ಮಕ್ಕಳನ್ನು ಬೆಳಸುವುದರ ಜತೆ ರಾಜಕೀಯ, ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳನ್ನು ತೊಡಗಿಸಿಕೊಂಡಿದ್ದಾರೆ. ಯಾವುದೇ ಕಷ್ಟಕ್ಕೂ ಕುಗ್ಗಿ ನಡೆಯದೆ ಜೀವನ ಸಾಗಿಸಿರುವ ನಟಿ ಉಮಾಶ್ರೀ ಅವರು ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ.
ದರ್ಶನ್​ ಬಾಳಲ್ಲಿ ಮತ್ತೆ ಸುಂಟರಗಾಳಿ; ಪತ್ನಿ vs ಪವಿತ್ರಾ ಸಂಘರ್ಷದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಡಿ ಬಾಸ್​

30 ಸಿನಿಮಾಗಳ ಹೀರೋ..​ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಟ ಈಗ ಚರ್ಚ್​ ಫಾದರ್

ಕಾರಣ,
ಲೆಜೆಂಡ್ ಕಲಾವಿದೆ ಪಟ್ಟವನ್ನು ಕೂಡ ಗಳಿಸಿರುವ ಉಮಾಶ್ರೀ ‘ಶ್ರೇಷ್ಠ ನಟಿ’ ನ್ಯಾಷನಲ್ ಅವಾರ್ಡ್‌ ಕೂಡ ಸಂದಿದೆ. ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಕೂಡ ನಟಿ ಉಮಾಶ್ರೀ ತಪ್ಪದಾಗಿಸಿಕೊಂಡಿದ್ದಾರೆ. ಆದರೆ, ಮದುವೆ ಮಾಡಿಕೊಂಡರೂ ಸಂಸಾರ ಮಾಡಲಾಗದ, ಮಕ್ಕಳಿದ್ದರೂ ಅಪ್ಪನಿಲ್ಲದೇ ಕಷ್ಟಪಟ್ಟು ಸಾಕಿದ ಉಮಾಶ್ರೀ ಗಟ್ಟಿತನ ನಿಜವಾಗಿಯೂ ಮಾದರಿ ಎನ್ನಬಹುದು. ಈಗಲೂ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿರುವ ನಟಿ ಉಮಾಶ್ರೀ ಇನ್ನೂ ಸಾಕಷ್ಟು ಎತ್ತರಕ್ಕೆ ಏರಬಲ್ಲರು. ಅವರಿಗೆ ಕಲೆ ಸಿದ್ಧಿಸಿದೆ, ಎಲ್ಲ ಯೋಗ್ಯತೆಗಳೂ ಇವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
