ಮೈಸೂರು:ನೂತನ ಸಚಿವರ ಪ್ರಮಾಣ ವಚನಕ್ಕೂ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ಗುಡುಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ನಾಲಿಗೆ ಹಾಗೂ ಮಾತು ಕಳೆದುಕೊಂಡಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದೆ. ಸಿಎಂ ಆಗುವವರೆಗೂ ಜತೆಗಿದ್ದೆ. ಅವರು ಒಂದೇ ಒಂದು ದಿನ ವಿಶ್ವನಾಥ್ ಹೆಸರು ಹೇಳಲಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಪ್ರಯತ್ನ ಪಟ್ಟೆ‌. ಅವರೂ ಸಹ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿರಿ:ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!
ರಾಜಕೀಯ ನಾಯಕರು ಸಮಯಕ್ಕೆ ಅಷ್ಟೆ. ಯಾರಿಗೂ ಕೃತಜ್ಞತೆ ಇಲ್ಲ. ನಾಗೇಶನನ್ನು ಯಾಕೆ ಸಂಪುಟದಿಂದ ತೆಗೆಯಬೇಕು? ಮುನಿರತ್ನಗೆ ಯಾಕೆ ಸಚಿವ ಸ್ಥಾನ ಕೊಡುತ್ತಿಲ್ಲ? ಯೋಗೀಶ್ವರ್‌ಗೆ ಯಾಕೆ ಕೊಡುತ್ತಿದ್ದೀರಿ? ಎಂದು ಪ್ರಶ್ನಿಸಿರುವ ವಿಶ್ವನಾಥ್​, ಯೋಗೀಶ್ವರ್​ ವಿರುದ್ಧ 420 ಕೇಸ್ ಇದೆ. ಅವನು ವಂಚಕ. ಸಾವಿರಾರು ಜನರಿಗೆ ಮೋಸ ಮಾಡಿದ್ದಾನೆ. ಅವನಿಗೆ ನೀವೇನಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ? ಎಂದು ಬಿಎಸ್​ವೈರನ್ನು ಪ್ರಶ್ನಿಸಿದರು.
ಯಾರ್ರೀ ಈ ಸೈನಿಕ? ಹುಣಸೂರು ಚುನಾವಣೆಗೆ ಬಂದು ದುಡ್ಡು ತೆಗೆದುಕೊಂಡು ಓಡಿಹೋದ. 15 ಜನರ ಭಿಕ್ಷೆ, ಮರ್ಜಿಯಲ್ಲಿ ನೀವಿದ್ದೀರಿ. ಅದನ್ನು ನೀವು ನೆನಪಿಸಿಕೊಳ್ಳಬೇಕು. 13 ವೀರಶೈವರು ಸಂಪುಟದಲ್ಲಿದ್ದಾರೆ‌. ಅಂದರೆ ಶೇ.44ರಷ್ಟು ಆಯಿತು. ಶೇ. 37ರಷ್ಟು ಒಕ್ಕಲಿಗರು ಇದ್ದಾರೆ. ೪ ಕುರುಬರು ಇದ್ದಾರೆ. ಎಲ್ಲಿದೆ ಸಾಮಾಜಿಕ ನ್ಯಾಯ? ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿರಿ:ಅಂಕಲ್​ ಅಂತ್ಯಸಂಸ್ಕಾರ ಬಿಟ್ಟು ಒಂಟಿಯಾಗಿ ಮನೆಗೆ ಬಂದ ಯುವತಿ: ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!
ಬಿಎಸ್‌ವೈ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಯಾರ್ಯಾರಿಗಿದೆ ಮಿನಿಸ್ಟರ್ ಆಗುವ ಭಾಗ್ಯ?

ನಾನು ರೇಪ್​ ಮಾಡಿಲ್ಲ ಆದ್ರೆ… ಸಚಿವರ ಸ್ಫೋಟಕ ಹೇಳಿಕೆಯಿಂದ ಗಾಯಕಿ ಆರೋಪಕ್ಕೆ ಟ್ವಿಸ್ಟ್​!

ಚಿಕ್ಕಪ್ಪಾ… ಎನ್ನುತ್ತಲೇ ಪ್ರೀತಿಯಿಂದ ತಬ್ಬಿಕೊಳ್ಳಲು ಕೈಚಾಚಿದ 5 ವರ್ಷದ ಮಗಳ ಕತ್ತನ್ನೇ ಕೊಯ್ದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
