ಬೆಂಗಳೂರು: ಉಡುಪಿ ಶ್ರೀ ಪುತ್ತಿಗೆ ಶಾಖಾ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಸೆ.1ರಿಂದ 8ರವರೆಗೆ ಶ್ರೀಕೃಷ್ಣ ಜಯಂತ್ಯಂಗ ಅಷ್ಟೋತ್ಸವ ಆಯೋಜನೆಗೊಂಡಿದೆ.ಪುತ್ತಿಗೆ ಮಠದ ಹಿರಿಯ ಯತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತ ನಿರತರಾಗಿದ್ದು, ಇದೇ ಸಂದರ್ಭದಲ್ಲಿ ಸೆ.6 ಮತ್ತು 7ರಂದು ಶ್ರೀಕೃಷ್ಣ ಜಯಂತಿ, ಶ್ರೀಕೃಷ್ಣಲೀಲೋತ್ಸವ ನಡೆಯುವುದೆಂದು ಮಠದ ಆಡಳಿತ ಮಂಡಳಿ ತಿಳಿಸಿದೆ.ಶ್ರೀಕೃಷ್ಣ ಜಯಂತ್ಯಂಗ ಅಷ್ಟೋತ್ಸದ ಅಂಗವಾಗಿ ಪ್ರತಿ ದಿನ ಸಂಜೆ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಸೆ.1ರಂದು ಎಳವೆಯಲ್ಲಿ ಸಂಸ್ಕಾರ ಅಗತ್ಯ ವಿಚಾರವಾಗಿ ಬಿ.ವಿ.ಆರತಿ ಉಪನ್ಯಾಸ ನೀಡುವರು. ಬಳಿಕ ಗೋವಿನ ಕಥೆ ನೃತ್ಯ ರೂಪಕವಿರಲಿದೆ.ಸೆ.2ರಂದು ಆರೋಗ್ಯಕ್ಕೆ ಹಿಂದೂ ಆಹಾರ ಪದ್ಧತಿ ವಿಚಾರವಾಗಿ ಡಾ.ಎಚ್​.ಎಸ್​.ಪ್ರೇಮಾ ಮಾತನಾಡಲಿದ್ದಾರೆ. ಸಂಜೆ 6.30ರಿಂದ ಯಕ್ಷಗಾನ ಫೌಂಡೇಷನ್​ ಕಲಾವಿದರಿಂದ ಕಂಸವಧೆ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.ಸೆ.3ರಂದು ಯುವ ಜನಾಂಗ ಮತ್ತು ರಾಷ್ಟ್ರೀಯತೆ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಲಿದ್ದು, ನಂತರ ತೌಳವ ಮಾಧ್ವ ಒಕ್ಕೂಟದಿಂದ ಬಾಲ ಲೀಲೆಮತ್ತು ಬಿಲ್ಲ ಹಬ್ಬಯಕ್ಷಗಾನವಿರಲಿದೆ. ಸೆ.4ರಂದು ಧರ್ಮ ಮತ್ತು ವಿಜ್ಞಾನ ಕುರಿತು ಉಪನ್ಯಾಸ, ಬಳಿಕ ವಿದುಷಿ ಜಯಶ್ರೀ ಅವರಿಂದ ಹರಿದಾಸ ವಾಣಿ ಪ್ರಸ್ತುತಗೊಳ್ಳಲಿದೆ. ಸೆ.5ರಂದು ಮಾಧ್ಯಮಗಳು ಮತ್ತು ಸನಾತನ ಧರ್ಮ ಕುರಿತು ಸೇತುರಾಮ್​ ಮಾತನಾಡಲಿದ್ದಾರೆ. ಸಂಜೆ 6.30ರಿಂದ ವಿದುಷಿ ರೇವತಿ ಕಾಮತ್​ ಅವರ ವೀಣಾವಾದನವಿರಲಿದೆ.ಸೆ.6ರ ಬೆಳಗ್ಗೆ 7ರಿಂದ ರಾತ್ರಿ 10ವರೆಗೂ ವಿವಿಧ ಭಜನಾ ತಂಡಗಳಿಂದ ಶ್ರೀಕೃಷ್ಣ ಗಾನವೈಭವ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ ವೀಣಾ ಬನ್ನಂಜೆ ಉಪನ್ಯಾಸ, ಪ್ರಯೋಗ ಮಂಟಪ ಕಲಾವಿದರು ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ಪ್ರಸ್ತುತಪಡಿಸುವರು. ಸಂಜೆ 7.30ರಿಂದ ಸುಚೇತನ್​ ರಂಗಸ್ವಾಮಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.ಸೆ.7ರಂದು ಬೆಳಗ್ಗೆ 7ರಿಂದ ರಾತ್ರಿ 10 ವರೆಗೆ ಸ್ವಾಗತಂ ಶ್ರೀ ಕೃಷ್ಣ ಸ್ತುತಿ ಪ್ರಸ್ತುತಿ ಇರಲಿದೆ. ಸೆ.8ರಂದು ಮಧ್ಯಾಹ್ನ 12ರಿಂದ ಶ್ರೀಕೃಷ್ಣವೇಷ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಗೀತಾ ಕಂಠಪಾಠ ಸ್ಪರ್ಧೆ ಮತ್ತು ಸಂಜೆ 5ರಿಂದ ನೂತನ ರಜತ ರಥ ಸಮರ್ಪಣೆಮತ್ತು ಲೀಲೋತ್ಸವ ನಡೆಯುವುದು ಎಂದು ಮಠದ ಆಡಳಿತ ಮಂಡಳಿ ವಿವರಿಸಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 16 =
Remember me
