ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು ವೈಭವದ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ನಗರದಲ್ಲಿ ನೆರೆದಿದ್ದರು.
ನಗರದ ಜೋಡುಕಟ್ಟೆಯಿಂದ, ಕೋರ್ಟ್‌ರಸ್ತೆ, ಡಯಾನ ಸರ್ಕಲ್, ತೆಂಕಪೇಟೆ ಮೂಲಕ ಸಾಗಿದ ಪರ್ಯಾಯ ಮೆರವಣಿಗೆ ಕೃಷ್ಣಮಠ ರಥಬೀದಿಗೆ ಸಾಗಿತು. ನಗರದಲ್ಲಿ ಲಕ್ಷಾಂತರ ಮಂದಿ ಜನರು ಅತ್ತಿಂದಿತ್ತ ಓಡಾಡುತ್ತ, ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಅದಮಾರು ಪರ್ಯಾಯ ವೈಭವ ಸಂಭ್ರಮಿಸಿದರು. ರಾತ್ರಿ 10 ಗಂಟೆ ವೇಳೆಗೆ ನಗರದ ವಿವಿದೆಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡು ಮಧ್ಯರಾತ್ರಿ 12, 1 ಗಂಟೆ ಸುಮಾರಿಗೆ ಮುಕ್ತಾಯಗೊಂಡಿತು.
ನಗರವೆಲ್ಲಾ ಅಲಂಕಾರಗೊಂಡು ಕಣ್ಮನ ಸೆಳೆಯುತಿತ್ತು, ನಗರದಲ್ಲಿ ಸ್ವಾಗತ ಕಮಾನು, ಗೂಡುದೀಪ, ಕೇಸರಿ ಭಗವಧ್ವಜ, ಪ್ಲಾಸ್ಟಿಕ್ ರಹಿತ ಬ್ಯಾನರ್, ಫ್ಲೆಕ್ಸ್ ರಾರಾಜಿಸುತಿದ್ದವು. ಬಣ್ಣ, ಬಣ್ಣದ ವಿದ್ಯುತ್ ದೀಪಗಳು ಪರ್ಯಾಯ ಮೆರವಣಿಗೆಗೆ ಮೆರುಗು ನೀಡಿದವು. ಭದ್ರತೆಗೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
