|ಕೀರ್ತಿನಾರಾಯಣ ಸಿ.ಬೆಂಗಳೂರು
ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್​ಎಸ್​ಆರ್​ಪಿ) ನಂಬರ್ ಅಳವಡಿಸುವಲ್ಲಿ ನಡೆಯುತ್ತಿರುವ ಗೋಲ್ಮಾಲ್​ಗೆ ಕೊನೆಗೂ ಸರ್ಕಾರವೇ ಬ್ರೇಕ್ ಹಾಕಿದೆ. 2019ರ ಏ.1ಕ್ಕಿಂತ ಮೊದಲು ರಸ್ತೆಗಿಳಿದಿರುವ ಹಳೇ ವಾಹನಗಳ ನಂಬರ್ ಪ್ಲೇಟ್​ಗಳನ್ನು ಎಚ್​ಎಸ್​ಆರ್​ಪಿ ಫಲಕಗಳಾಗಿ ಪರಿವರ್ತಿಸಲು ತೀರ್ವನಿಸಿದೆ. ಜತೆಗೆ ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಇದರೊಂದಿಗೆ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯವೋ ಅಲ್ಲವೋ ಎಂಬ ಗೊಂದಲಕ್ಕೂ ತೆರೆಬಿದ್ದಂತಾಗಿದೆ. ಹೊಸ ವ್ಯವಸ್ಥೆ ಜಾರಿ ವಿಚಾರದ ಮಾಹಿತಿಯನ್ನು ಸರ್ಕಾರ ಮಂಗಳವಾರ (ಮಾ.29) ಹೈಕೋರ್ಟ್​ಗೂ ನೀಡಿದೆ.
ಸದ್ಯ 2019 ಏ.1ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರವೇ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಕಡ್ಡಾಯ ನಿಯಮ ಜಾರಿಯಲ್ಲಿದೆ. ವಾಹನ ಉತ್ಪಾದಕರೇ ನಂಬರ್ ಪ್ಲೇಟ್​ಗಳನ್ನು ಪೂರೈಕೆ ಮಾಡಬೇಕು ಎಂದು ಜವಾಬ್ದಾರಿ ವಹಿಸಲಾಗಿದೆ. ಆದರೆ, ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಕಡ್ಡಾಯವಲ್ಲದಿದ್ದರೂ ಕೆಲವರು ಇದನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ನಂಬರ್ ಪ್ಲೇಟ್ ಹಾಗೂ ಹಾಲೋಗ್ರಾಂ ಸ್ಟಿಕ್ಕರ್​ಗಳನ್ನು ಅಳವಡಿಸಿ, ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ದಂಧೆ ಹುಟ್ಟಿಕೊಂಡಿತ್ತು.
ಹಳೇ ವಾಹನಗಳ ಮಾಲೀಕರಿಗೆ ಹೊರೆಯಾಗದಂತೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದು, ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಅಲ್ಲದೆ, ರಾಜ್ಯಾದ್ಯಂತ ನಂಬರ್ ಪ್ಲೇಟ್​ಗಳನ್ನು ಪೂರೈಸುವ ಜವಾಬ್ದಾರಿಯನ್ನು 5 ರಿಂದ 7 ಸಂಸ್ಥೆಗಳನ್ನು ಒಟ್ಟುಗೂಡಿಸಿ ಜವಾಬ್ದಾರಿ ನೀಡಲು ನಿರ್ಧರಿಸಿದೆ. ಹೊಸ ವ್ಯವಸ್ಥೆಯಿಂದ ನಂಬರ್ ಪ್ಲೇಟ್ ದಂಧೆ ನಿಯಂತ್ರಣಕ್ಕೆ ಬರಲಿದೆ.
ನಿಯಮ ಉಲ್ಲಂಘನೆ:ಹೊಸ ವಾಹನ ಖರೀದಿಯಾದ 6 ಗಂಟೆಯೊಳಗೆ ಎಚ್​ಎಸ್​ಆರ್​ಪಿ ಪ್ಲೇಟ್ ಅಳವಡಿಸಬೇಕೆಂಬ ನಿಯಮವಿದೆ.
1000 ಕೋಟಿ ರೂ.ವ್ಯವಹಾರ:ರಾಜ್ಯದಲ್ಲಿ ಒಂದೂವರೆ ಕೋಟಿ ಹಳೇ ವಾಹನಗಳಿರಬಹುದೆಂಬ ಅಂದಾಜಿದೆ. ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಿದರೆ ಅಂದಾಜು 600 ರಿಂದ 1000 ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಂಬರ್ ಪ್ಲೇಟ್​ನಲ್ಲಿ ಏನೇನಿರುತ್ತೆ?
2021ರ ಟೆಂಡರ್ ರದ್ದು
ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಪ್ಲೇಟ್ ಅಳವಡಿಸಲು 2021ರ ಅಕ್ಟೋಬರ್​ನಲ್ಲಿ ಸಾರಿಗೆ ಇಲಾಖೆ ಇ- ಟೆಂಡರ್ ಕರೆದಿತ್ತು. ಕೆಲ ಷರತ್ತು ವಿಧಿಸಿದ್ದನ್ನು ಪ್ರಶ್ನಿಸಿ, ನಂಬರ್ ಪ್ಲೇಟ್ ಮಾರಾಟಗಾರ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಆದರೀಗ ಇ-ಟೆಂಡರ್ ರದ್ದುಪಡಿಸಲಾಗಿದೆ.
ಅನುಕೂಲವೇನು?
ಸಿಎಂ ಸಭೆ ನಿರ್ಧಾರ
ಆದರೆ, ಪ್ಲೇಟ್ ಪೂರೈಕೆದಾರರ ವಿಳಂಬ ಹಾಗೂ ಶೋರೂಂ ಡೀಲರ್​ಗಳ ಉದಾಸೀನ ಧೋರಣೆಯಿಂದಾಗಿ ಹಲವು ತಿಂಗಳು ಕಳೆದರೂ ನಂಬರ್ ಅಳವಡಿಕೆ ಮಾಡುತ್ತಿಲ್ಲ. ಹೀಗಾಗಿ ಪೊಲೀಸರಿಂದ ವಾಹನ ತಪಾಸಣೆ ವೇಳೆ ಮಾಲೀಕರಿಗೆ ತೊಂದರೆಯಾಗುತ್ತಿದೆ.
ಪ್ರಕ್ರಿಯೆ:
ಪುನೀತ್ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ; ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ, ಕುಟುಂಬಸ್ಥರಿಗೆ ಸಾಂತ್ವಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
