ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದಕ್ಷಿಣ ಭಾರತದಲ್ಲಿ ಐಸಿಸ್ ಬಲಗೊಳಿಸುವುದು ಮತ್ತು ಹಿಂದು ಮುಖಂಡರ ಹತ್ಯೆಯಲ್ಲಿ ತೊಡಗಿದ್ದ ಅಲ್ ಹಿಂದ್ ಸಂಘಟನೆಯ ಮತ್ತಿಬ್ಬರು ಶಂಕಿತರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಮತ್ತೊಂದು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿಗಳಾದ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವೀರ್ ಹುಸೇನ್ ಶಾಜಿದ್ ವಿರುದ್ಧ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗಿದೆ. ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್ 12ರಂದು ಬಂಧಿಸಲಾಗಿದೆ. ಇದಲ್ಲದೆ, ದೇಶದ ವಿವಿಧೆಡೆ ನಡೆದ ಹಲವು ಉಗ್ರ ಕೃತ್ಯಗಳಲ್ಲಿ ಈ ಇಬ್ಬರ ಪಾತ್ರ ಇರುವುದಾಗಿ ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಸಿಸ್ ಮಾದರಿ ಅಲ್ ಹಿಂದ್ ಸಂಘಟನೆ ಮುಖ್ಯಸ್ಥ ಖಾಜಾ ಮೊಯಿದ್ದೀನ್, ಐಸಿಸ್ ಸಂಘಟನೆ ಬಲಗೊಳಿಸುವುದು ಮತ್ತು ಹಿಂದು ಮುಖಂಡರ ಹತ್ಯೆ ಮಾಡುವುದು ಟಾರ್ಗೆಟ್ ಮಾಡಿದ್ದ. 2019ರಲ್ಲಿ ತಮಿಳುನಾಡಿನ ಹಿಂದು ಪರ ಸಂಘಟನೆ ಮುಖಂಡ ಸುರೇಶ್ ಮತ್ತು ಎಎಸ್​ಐ ವಿಲ್ಸನ್ ಹತ್ಯೆ ಮಾಡಿದ್ದರು. ಆನಂತರ ಗುರಪ್ಪನಪಾಳ್ಯದಲ್ಲಿ ಖಾಜಾ ಆಶ್ರಯ ಪಡೆದು ನಗರದ ಮೆಹಬೂಬ್ ಪಾಷ, ಕೋಲಾರದ ಸಲೀಂ, ಮಂಡ್ಯದ ಇಮ್ರಾನ್ ಖಾನ್ ತಮಿಳುನಾಡಿನ ತೌಫಿಕ್, ಸೈಯದ್ ಅಲಿ ನವಾಜ್, ಜಾಫರ್ ಹಾಗೂ ಅಬ್ದುಲ್ ಷಾಹೀಂ ಸೇರಿ ಹಲವರನ್ನು ಒಗ್ಗೂಡಿಸಿದ್ದ. ಯುವಕರನ್ನು ಜಿಹಾದಿ ಕಡೆಗೆ ಸೆಳೆಯುತ್ತಿದ್ದ. 2020ರಂದು ತಮಿಳುನಾಡು, ಕರ್ನಾಟಕ ಮತ್ತು ದೆಹಲಿಯಲ್ಲಿ ಎನ್​ಐಎ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 18 ಮಂದಿ ಶಂಕಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು. ಈ ಕೇಸಿನಲ್ಲಿ ತಾಹಾ ಮತ್ತು ಮುಸ್ಸಾವೀರ್ ತಲೆಮರೆಸಿಕೊಂಡಿದ್ದರು. ಅಬ್ದುಲ್ ಮಥೀನ್ ತಾಹಾ, ಜಿಹಾದಿಗೆ ಒಳಗಾಗಿ ಉಗ್ರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಆನಂತರ ಮುಸ್ಸಾವೀರ್ ಸೇರಿ ಹಲವರನ್ನು ಜಿಹಾದಿ ಬೋಧನೆ ಮಾಡಿ ಐಸಿಸ್​ಗೆ ಸೇರ್ಪಡೆ ಮಾಡುತ್ತಿದ್ದ. 2018ರಲ್ಲಿ ಅಬ್ದುಲ್ ಮಥೀನ್ ತಾಹಾ, ಐಸಿಸ್ ಆನ್​ಲೈನ್ ಹ್ಯಾಂಡ್ಲರ್ ಭಾಯಿ ಅಲಿಯಾಸ್ ಲ್ಯಾಪ್​ಟಾಪ್ ಭಾಯಿ ಜತೆ ಸಂಪರ್ಕದಲ್ಲಿದ್ದ. ಗುರಪ್ಪನಪಾಳ್ಯದಲ್ಲಿ ಕುಟುಂಬ ಸದಸ್ಯರ ಸಹಯೋಗದೊಂದಿಗೆ ಅಲ್-ಹಿಂದ್ ಟ್ರಸ್ಟ್ ಸ್ಥಾಪಿಸಿದ್ದ ಮೆಹಬೂಬ್ ಪಾಷಾಗೆ ಭಾಯಿಯನ್ನು ತಾಹಾ ಪರಿಚಯಿಸಿದ್ದ. ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಉತ್ತೇಜಿಸಲು ತನ್ನ ಸಹಚರರೊಂದಿಗೆ ಅಲ್ ಹಿಂದ್ ಟ್ರಸ್ಟ್​ಗೆ ಸೇರಿದ್ದ ಖಾಜಾ ಮೊಹಿದ್ದೀನ್​ಗೆ ಆನ್​ಲೈನ್ ಹ್ಯಾಂಡ್ಲರ್ ಲಿಂಕ್ ಅನ್ನು ರವಾನಿಸಲು ಪಾಷಾ ಕಾರಣನಾಗಿದ್ದ.
ಇದಲ್ಲದೆ, ಎನ್​ಐಎ ತನಿಖೆಯ ಪ್ರಕಾರ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಆರೋಪಿ ತೌಫೀಕ್ ಮತ್ತು ಅಬ್ದುಲ್ ಶಮೀಮ್ೆ ಆಶ್ರಯ ನೀಡಿದ್ದರು. ಈ ಇಬ್ಬರು ತಮಿಳುನಾಡು ಪೊಲೀಸ್ ವಿಲ್ಸನ್ ಎಸ್​ಎಸ್​ಐ ಅನ್ನು ಕೇರಳ-ತಮಿಳುನಾಡು ಗಡಿ ಕಲಿಯಕವಿಲ್ಲೈ ಚೆಕ್​ಪೋಸ್ಟ್​ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಪಿಸ್ತೂಲ್ ಅನ್ನು ಮೆಹಬೂಬ್ ಪಾಷಾ ಪೂರೈಕೆ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿವನ ಸಮುದ್ರ ಬಳಿ ಶಸ್ತ್ರಾಭ್ಯಾಸ:ಖಾಜಾ ಮೊಯಿದ್ದೀನ್ ಸೂಚನೆಯಂತೆ ಮುಂಬೈನಲ್ಲಿ ಸಿಹಾಬುದ್ದೀನ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಖದೀರಿಸಿ ಸಹಚರರಿಗೆ ತಲುಪಿಸಿದ್ದ. ಬೆಂಗಳೂರು ಹೊರವಲಯ, ಚಾಮರಾಜನಗರದ ಗುಂಡ್ಲುಪೇಟೆ ಅರಣ್ಯ ಪ್ರದೇಶ, ಶಿವನ ಸಮುದ್ರದ ಬಳಿ ಶಂಕಿತರು ಶಸ್ತ್ರ ಅಭ್ಯಸ ನಡೆಸಿದ್ದರು. ಇಲ್ಲಿನ ಅಭ್ಯಾಸದಲ್ಲಿ ತಾಹಾ ಮತ್ತು ಮುಸ್ಸಾವೀರ್ ಕೈಜೋಡಿಸಿದ್ದರು ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಮುಡಾ ಹಗರಣ: ಹೈಕೋರ್ಟ್​ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + fifteen =
Remember me
