ಬೆಂಗಳೂರು:ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ರೈತರ ನೀರಾವರಿ ಪಂಪ್​ಸೆಟ್​ಗಳಿಗೆ 7 ತಾಸಿಗಿಂತ ಹೆಚ್ಚು ಅವಧಿಗೆ ವಿದ್ಯುತ್ ಪೂರೈಕೆ ಸಾಧ್ಯವಾಗದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲ್ಮನೆಯಲ್ಲಿ ಗುರುವಾರ ಹೇಳಿದರು.
ಶ್ರೀನಿವಾಸ ಮಾನೆ ಪ್ರಶ್ನೆಗೆ ಸಿಎಂ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕೆ.ಸಿ. ಕೊಂಡಯ್ಯ 9 ತಾಸು ವಿದ್ಯುತ್ ಪೂರೈಸಲು ಒತ್ತಾಯಿಸಿದರೆ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಾಜ್ಯದಲ್ಲಿ ಪವನ, ಸೋಲಾರ್ ಸಹಿತ ವಿವಿಧ ಮೂಲಗಳ ವಿದ್ಯುತ್ ಉತ್ಪಾದನೆ ಹೆಚ್ಚಿದೆ. ಹೆಚ್ಚುವರಿ ಲಭ್ಯತೆ ಕಾರಣಕ್ಕೆ ಶಾಖೋತ್ಪನ್ನ ನೆಲೆಯ ವಿದ್ಯುತ್ ಉತ್ಪಾದನೆ ಕಡಿತಗೊಳಿಸಲಾಗಿದೆ. ಹೆಚ್ಚುವರಿ ವಿದ್ಯುತ್​ನ್ನು ಬಳಸಿಕೊಂಡರೆ ರೈತರ ಪಂಪ್​ಸೆಟ್​ಗಳಿಗೆ ಪೂರೈಕೆ ಅವಧಿ ವಿಸ್ತರಿಸಲು ಸಾಧ್ಯವಿದೆ ಎಂದು ವಾದಿಸಿದರು.
ಸರ್ಕಾರ ಬದ್ಧ:ಯಡಿಯೂರಪ್ಪ ಪ್ರತಿಕ್ರಿಯಿಸಿ, ರೈತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಅದರೆ, ನಿರಂತರ ವಿದ್ಯುತ್ ಪೂರೈಕೆಗೆ ತಾಂತ್ರಿಕ ತೊಂದರೆಗಳಿವೆ. ಈ ಹಿನ್ನೆಲೆಯಲ್ಲಿ 7 ತಾಸು ನಿಗದಿಪಡಿಸಿದ್ದು, ಅದರಲ್ಲೂ ಕೆಲವೆಡೆ ಹಗಲು-ರಾತ್ರಿ ವಿಂಗಡಿಸಲಾಗಿದೆ. ಇನ್ನೂ 122 ಸ್ಥಳಗಳಲ್ಲಿನ ಸಮಸ್ಯೆ ಪರಿಹರಿಸಿ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ
3.65 ಲಕ್ಷ ಹೊಸ ಪರಿವರ್ತಕ, ಪ್ರಸಕ್ತ ವರ್ಷ ಈವರೆಗೆ 55,000 ಹೊಸ ಪರಿವರ್ತಕಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ವಾರ್ಷಿಕ ಬಜೆಟ್​ನಲ್ಲಿ ಪರಿವರ್ತಕಗಳ ಅಳವಡಿಕೆ, ಸಾಮರ್ಥ್ಯ ವೃದ್ಧಿಗೆ ಅನುದಾನ ಕಾದಿರಿಸಿ ಅವಶ್ಯಕತೆಗೆ ತಕ್ಕಂತೆ ಅನುಷ್ಠಾನಕ್ಕೆ ತರುತ್ತದೆ, ಇದೊಂದು ನಿರಂತರ ಪ್ರಕ್ರಿಯೆ ಎಂದು ಮಾನೆ ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ.
ಅಧಿಕ ವಿದ್ಯುತ್ ಹೊರೆ, ಅನಧಿಕೃತ ವಿದ್ಯುತ್ ಸಂಪರ್ಕ, ಬೇಸಿಗೆ ಕಾಲದಲ್ಲಿ ಎಲ್ಲ ರೈತರು ಏಕ ಕಾಲದಲ್ಲಿ ತಮ್ಮ ಪಂಪ್ ಸೆಟ್​ಗಳನ್ನು ಚಾಲನೆಗೊಳಿಸುವುದರಿಂದ ಪರಿವರ್ತಕಗಳಿಗೆ ಓವರ್ ಲೋಡ್ ಆಗುವ ಸಾಧ್ಯತೆಗಳಿರುತ್ತವೆ. ಮೋಟಾರ್​ಗಳ ಅವೈಜ್ಞಾನಿಕ ರಿವೈಂಡಿಂಗ್​ನಿಂದಲೂ ಪರಿವರ್ತಕಗಳು ವಿಫಲವಾಗುತ್ತವೆ ಎಂದು ಸಿಎಂ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ರಾತ್ರಿ ಹೊತ್ತು ಚಿರತೆ ಹಾವಳಿ ಹೆಚ್ಚಾಗಿರುವ ಕಾರಣ ಹಗಲು ವಿದ್ಯುತ್ ಪೂರೈಸಬೇಕು ಎಂಬ ಶ್ರೀಕಂಠೇಗೌಡ ಒತ್ತಾಯಕ್ಕೂ ಕೆಲವಡೆ ತಾಂತ್ರಿಕ ತೊಂದರೆಯಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಆರ್​ಟಿಇ ಅಡಿ ಎಲ್​.ಕೆ.ಜಿ ಹಾಗೂ 1ನೇ ತರಗತಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿ ನಿಗದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
