ಬೆಂಗಳೂರು: ರಾಜ್ಯದಲ್ಲಿ ಕಳೆದ 60 ವರ್ಷಗಳಲ್ಲಿಯೇ ಉತ್ತಮ ಮಳೆಯಾಗಿದ್ದು, 227 ತಾಲೂಕುಗಳ ಪೈಕಿ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಮಾತ್ರ ಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ 852 ಮಿಮೀ ಮಳೆ ಆಗುತ್ತದೆ, ಆದರೆ ಈ ಬಾರಿ 991 ಮಿಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.16 ಅಧಿಕವಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.39, ಉತ್ತರ ಒಳನಾಡಿನಲ್ಲಿ ಶೇ.36, ಕರಾವಳಿಯಲ್ಲಿ ಶೇ.12 ಹೆಚ್ಚುವರಿ ಮಳೆಯಾಗಿದ್ದರೆ, ಮಲೆನಾಡಿನಲ್ಲಿ ಶೇ.5 ಕಡಿಮೆಯಾಗಿದೆ.
ಮಳೆ ಹಾನಿ

*133 ಜೀವಹಾನಿ*5 ಜನ ನಾಪತ್ತೆ*514 ಪ್ರಾಣಿಗಳ ಸಾವು*6742 ಜನರ ರಕ್ಷಣೆ*108 ಪರಿಹಾರ ಕೇಂದ್ರಗಳ ಸ್ಥಾಪನೆ*4,94,048 ಹೆಕ್ಟೇರ್ ಬೆಳೆ ಹಾನಿ
ಮೂಲ ಸೌಕರ್ಯ ಹಾನಿ* 21173 ಕಿಮೀ ರಸ್ತೆ* 2758 ಸೇತುವೆ* 786 ಕೆರೆಗಳು*18533 ವಿದ್ಯುತ್ ಕಂಬ, 3974 ಕಿಮೀ ವಿದ್ಯುತ್ ಮಾರ್ಗ, 2023 ಟ್ರಾನ್ಸ್​ಫಾರ್ಮರ್* 2139 ಶಾಲಾ ಕಟ್ಟಡ* 1427 ಅಂಗನವಾಡಿ ಕಟ್ಟಡ* 103 ಪ್ರಾಥಮಿಕ ಆರೋಗ್ಯ ಕೇಂದ್ರ* 219 ಕುಡಿಯುವ ನೀರಿನ ಯೋಜನೆಗಳು* 118 ಶೌಚಾಲಯ
ರಾಜ್ಯದಲ್ಲಿ 2008ರ ನಂತರ ಒಟ್ಟಾರೆ ಅತ್ಯಂತ ಹೆಚ್ಚಿನ ಮಳೆಯಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 59 ವರ್ಷಗಳ ನಂತರ ಹೆಚ್ಚಿನ ಮಳೆ ಬಿದ್ದಿದೆ. ಚಿತ್ರದುರ್ಗ ಜಿಲ್ಲೆ 1960ರ ನಂತರ ಶೇ.79 ಹೆಚ್ಚಿನ ಮಳೆಯನ್ನು ಕಂಡಿದೆ.
ಇದನ್ನೂ ಓದಿ:ಕರೊನಾ ಭೀತಿಯಿಂದ ಬಾವಿಗೆ ಹಾರಿದ ಫೋಟೊಗ್ರಾಫರ್: ಶವ ಎತ್ತಲು ಹಿಂಜರಿದ ಅಗ್ನಿಶಾಮಕ ಸಿಬ್ಬಂದಿ!
ನೈರುತ್ಯ ಮುಂಗಾರು ಹಂಗಾಮಿನಲ್ಲಿ 122 ದಿನಗಳನ್ನು ಮಳೆ ದಿನಗಳೆಂದು ಗುರುತಿಸಲಾಗುತ್ತದೆ. ಈ ಬಾರಿ 50 ದಿನಗಳು ಮಳೆ ಬಂದಿದೆ. 2010ರಲ್ಲಿ 52 ದಿನಗಳು ಮಳೆ ಬಿದ್ದಿತ್ತು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 46 ದಿನಗಳ ಕಾಲ ಮಳೆ ಬಂದಿದ್ದು, 1960 ನಂತರ ಇದು ಮೊದಲು. ಈ ವಲಯದಲ್ಲಿ ಸರಾಸರಿ 32 ಮಳೆ ದಿನ ಇರುತ್ತದೆ, ಆದರೆ ಈ ಬಾರಿ 14 ದಿನ ಹೆಚ್ಚಾಗಿದೆ.
ಇದನ್ನೂ ಓದಿ:ಆರ್.ಆರ್. ನಗರ ಉಪಚುನಾವಣೆಗೆ 31 ನೋಡಲ್ ಅಧಿಕಾರಿ, 70 ಸೆಕ್ಟರ್ ಅಧಿಕಾರಿಗಳ ನಿಯೋಜನೆ : ಮಾಧ್ಯಮ ಪ್ರಕಟಿತ ದೂರುಗಳಿದ್ದರೆ 24 ಗಂಟೆಯೊಳಗೆ ತನಿಖೆ
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 36 ದಿನ ಮಳೆ ಬಂದಿದೆ. 60 ವರ್ಷಗಳಲ್ಲಿ ಮೂರನೇ ಅತಿಹೆಚ್ಚು. ಈ ವಲಯದಲ್ಲಿ ಸರಾಸರಿ 26 ದಿನ ಇರುತ್ತದೆ. ರಾಜ್ಯದಲ್ಲಿ ಸರಾಸರಿ 40 ಮಳೆ ದಿನ ಇರುತ್ತಿದ್ದವು, ಆದರೆ ಈ ಬಾರಿ 10 ದಿನಗಳ ಕಾಲ ಹೆಚ್ಚಿಗೆ ಮಳೆ ಬಂದಿದೆ. ಮಳೆನಾಡಿನಲ್ಲಿ ಸರಾಸರಿ 59 ಮಳೆ ದಿನಗಳಿರುತ್ತವೆ. ಈ ಬಾರಿ 64 ದಿನ ಆಗಿದೆ. ಕರಾವಳಿಯಲ್ಲಿ ಸರಾಸರಿ 85 ಮಳೆ ದಿನ ಇರುತ್ತವೆ, ಆದರೆ ಈ ಬಾರಿ 95 ದಿನ ಆಗಿದೆ ಎಂದು ನೈಸರ್ಗಿಕ ವಿಕೋಪ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಸೋಮವಾರದಿಂದ ಎಂದಿನಂತೆ ಎಲ್ಲ ಸೇವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
