ಬೆಂಗಳೂರು:ಹವಾಮಾನ ವೈಪರಿತ್ಯದಿಂದಾಗಿ (ತೀವ್ರ ಬಿಸಿಲು, ಕೆಲವೊಮ್ಮೆ ಮೋಡಕವಿದ ವಾತಾವರಣ, ಆಗಾಗ್ಗೆ ಸುರಿವ ಮಳೆ) ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು, ಪ್ರಮುಖವಾಗಿ ‘ಅಡೆನೊ ವೈರಸ್’ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಾಧಿಸುತ್ತಿದೆ.
ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ‘ಅಡೆನೊ ವೈರಸ್’ನಿಂದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಒಂದರಲ್ಲೇ ನಾನಾ ಸಮಸ್ಯೆಯಿಂದ ಚಿಕಿತ್ಸೆ ದಾಖಲಾಗಿರುವ ಮಕ್ಕಳಲ್ಲಿ ಶೇ.20 ಮಕ್ಕಳು ಅಡೆನೋ ವೈರಸ್ ಸೋಂಕಿಗೆ ಒಳಗಾದವರಿದ್ದಾರೆ.
ಇದು ಸೌಮ್ಯದಿಂದ ತೀವ್ರತರವಾದ ಹಂತ ತಲುಪುವ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು,ಅಸ್ತಮಾ ಸೇರಿ ಉಸಿರಾಟದ ಸಮಸ್ಯೆ ಇರುವವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಅಡೆನೊ ವೈರಸ್ ಸೋಂಕಿಗೆ ಒಳಗಾದಲ್ಲಿ ಅಂತಹರಲ್ಲಿ ಕಾಯಿಲೆ ಹೆಚ್ಚು ಗಂಭೀರವಾಗಬಹುದು.
ಸೋಂಕು ಹೇಗೆ ಹರಡುತ್ತದೆ: ಇದು ಹೆಚ್ಚು ಮಕ್ಕಳಲ್ಲಿ ಕಂಡುಬರಲಿದ್ದು, ಡೇ ಕೇರ್ ಸೆಂಟರ್‌ಗಳು, ಶಾಲೆಗಳಲ್ಲಿ ಮಕ್ಕಳು ಗುಂಪಾಗಿ ಸೇರುವ ಕಡೆ ಈ ವೈರಸ್ ಸಾಮಾನ್ಯವಾಗಿ ಹರಡಲಿದೆ. ಅಂದರೆ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಹನಿಗಳು ಗಾಳಿಯಲ್ಲಿ ಹಾರಿ ಇತರರಿಗೆ ಹರಡುತ್ತವೆ. ಇಲ್ಲವೆ ಆ ಹನಿ ಯಾವುದೇ ವಸ್ತುವಿನ ಮೇಲೆ ಬಿದ್ದಿದ್ದು, ಅದನ್ನು ಮುಟ್ಟಿದವರು ಅದೇ ಕೈಗಳಿಂದ ಮುಖ, ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ವೈರಸ್ ಸಲುಭವಾಗಿ ಹರಡುತ್ತದೆ.
ರೋಗ ಲಕ್ಷಣಗಳು: ಅಡೆನೊ ವೈರಸ್ ಕಣ್ಣುಗಳು, ಶ್ವಾಸಕೋಶ, ಕರುಳು, ಮೂತ್ರನಾಳ ಮತ್ತು ನರಮಂಡಲದ ಒಳಪದವರನ್ನು ಸೋಂಕಿಗೆ ಒಳಪಡಿಸುವ ಸಾಮಾನ್ಯ ವೈರಸ್‌ನ ಗುಂಪು. ಸಾಮಾನ್ಯ ಶೀತ ಅಥವಾ ಜ್ವರ ಆರಂಭಿಕ ಲಕ್ಷಣವಾಗಿದ್ದು, ಗಂಟಲು ಕೆರತ ಮತ್ತು ನೋವು, ಬ್ರಾಂಕೈಟಿಸ್ (ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ), ನ್ಯುಮೋನಿಯಾ (ಶ್ವಾಸಕೋಶದ ಸೋಂಕು), ಗುಲಾಬಿ ಕಣ್ಣು (ಕಾಂಜಂಕ್ವಿವಿಟಿಸ್) ತೀವ್ರವಾದ ಗ್ಯಾಸ್ಟ್ರೋ ಎಂಟರೈಟಿಸ್ (ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆ ನೋವು) ಅಡೆನೊ ವೈರಸ್‌ನ ಸಾಮಾನ್ಯ ಲಕ್ಷಣವಾಗಿದೆ. ಈ ಸೋಂಕಿತರಲ್ಲಿ ಒಣಕೆಮ್ಮು ಹೆಚ್ಚಿದ್ದು, ಔಷಧ ಸೇವಿಸಿದರೂ ದೀರ್ಘಕಾಲ ಕೆಮ್ಮು ಕಡಿಮೆ ಆಗದೆ ಗಂಟಲಿನಲ್ಲಿ ಹುಣ್ಣಿ(ಅಲ್ಸರ್)ಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಭೀರ ಹಂತದಲ್ಲಿ ಮಿದುಳು ಮತ್ತು ಬೆನ್ನುಹುರಿ ಮೇಲೆ ಪರಿಣಾಮ ಬೀರಲಿದೆ.
ಆರೈಕೆ ಹೇಗೆ: ಅಡೆನೋ ವೈರಸ್ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜತೆಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುವುದರಿಂದ ದೇಹ ನಿರ್ಜಲೀಕರಣಗೊಳ್ಳಲಿದೆ. ಹಾಗಾಗಿ ಸಾಕಷ್ಟು ದ್ರವಾಹಾರ (ನೀರು, ಹಣ್ನಿನ ರಸ) ನೀಡಬೇಕು. ಶೀತ ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆಯಂತೆ ಮೂಗಿಗೆ ಸಲೈನ್ ಸ್ಪ್ರೇ ಹನಿಗಳನ್ನು ಹಾಕಿ. ಇದರಿಂದ ಉಸಿರಾಟ ಸುಗಮವಾಗಲಿದೆ. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಿಸಿ ಹಾಗೂ ತಾಜಾ ಆಹಾರ ನೀಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ನೀಡಬಾರದು.
ಎಚ್ಚರಿಕೆ ಕ್ರಮಗಳು:* ಅಡೆನೊ ವೈರಸ್ ನಿಯಂತ್ರಣಕ್ಕೂ ಕೋವಿಡ್ ನಿಯಮ ಪಾಲಿಸಬೇಕು* ಸೋಂಕಿತರಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕು* ಕೈಗಳನ್ನು ಆಗಾಗ್ಗೆ ಸಾಬೂನು ಇಲ್ಲವೆ ಸ್ಯಾನಿಟೈಸರ್‌ನಿಂದ ಸ್ವಚ್ಚಗೊಳಿಸಬೇಕು* ಸೀನು/ಕೆಮ್ಮುವಾಗ ಮುಖವನ್ನು ಕರವಸದಿಂದ ಮುಚ್ಚಿಕೊಳ್ಳಬೇಕು* ಸೋಂಕಿತರು ಸಂಪೂರ್ಣ ಗುಣಹೊಂದುವವರೆಗೂ ಮನೆಯಲ್ಲಿರಬೇಕು* ಸೋಂಕು ಲಕ್ಷಣ ಕಂಡುಬಂದ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು* ಶುದ್ಧೀಕರಿಸಿ ಕಾಯಿಸಿ ಆರಿಸಿದ ನೀರು, ತಾಜಾ ಆಹಾರ ಸೇವಿಸಬೇಕು
“ಸಾಂಕ್ರಾಮಿಕ ರೋಗಗಳು ಹೆಚ್ಚಿದ್ದು, ಅಡೆನೊ ವೈರಸ್ ನೊಂದಿಗೆ ಇನ್‌ಲ್ೂಯೇನ್ಸ್ , ರೆಸ್ಪಿರೇಟರಿ ಸೆನ್ಸಿಟಿಯಲ್ ವೈರಸ್, ಡೆಂಘೆ ಪ್ರಕರಣಗಳೂ ವರದಿಯಾಗುತ್ತಿವೆ. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.” – ಡಾ. ನಿಜಗುಣ, ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು
“ಅಡೆನೊ ವೈರಸ್ ಸೇರಿ ವರದಿಯಾಗುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ನಿಖರ ಚಿಕಿತ್ಸೆ ಇಲ್ಲ. ಹಾಗಾಗಿ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡವರಿಗಿಂತ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.” – ಡಾ. ಲಕ್ಷ್ಮೀಪತಿ, ಮಕ್ಕಳ ತಜ್ಞರು, ಕೆ.ಸಿ.ಜನರಲ್ ಆಸ್ಪತ್ರೆ, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
