| ಪಂಕಜ ಕೆ.ಎಂ. ಬೆಂಗಳೂರುಹವಾಮಾನ ವೈಪರೀತ್ಯದಿಂದಾಗಿ (ತೀವ್ರ ಬಿಸಿಲು, ಕೆಲವೊಮ್ಮೆ ಮೋಡಕವಿದ ವಾತಾವರಣ, ಆಗಾಗ್ಗೆ ಸುರಿವ ಮಳೆ) ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು, ಪ್ರಮುಖವಾಗಿ “ಅಡೆನೊ ವೈರಸ್​’ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಾಧಿಸುತ್ತಿದೆ.
ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ “ಅಡೆನೊ ವೈರಸ್​’ನಿಂದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಒಂದರಲ್ಲೇ ನಾನಾ ಸಮಸ್ಯೆಯಿಂದ ಚಿಕಿತ್ಸೆ ದಾಖಲಾಗಿರುವ ಮಕ್ಕಳಲ್ಲಿ ಶೇ.20 ಮಕ್ಕಳು ಅಡೆನೋ ವೈರಸ್​ ಸೋಂಕಿಗೆ ಒಳಗಾದವರಿದ್ದಾರೆ.
ಇದು ಸೌಮ್ಯದಿಂದ ತೀವ್ರತರವಾದ ಹಂತ ತಲುಪುವ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು,ಅಸ್ತಮಾ ಸೇರಿ ಉಸಿರಾಟದ ಸಮಸ್ಯೆ ಇರುವವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಅಡೆನೊ ವೈರಸ್​ ಸೋಂಕಿಗೆ ಒಳಗಾದಲ್ಲಿ ಅಂತಹರಲ್ಲಿ ಕಾಯಿಲೆ ಹೆಚ್ಚು ಗಂಭೀರವಾಗಬಹುದು.
ಸೋಂಕು ಹೇಗೆ ಹರಡುತ್ತದೆ?:ಇದು ಹೆಚ್ಚು ಮಕ್ಕಳಲ್ಲಿ ಕಂಡುಬರಲಿದ್ದು, ಡೇ ಕೇರ್​ ಸೆಂಟರ್​ಗಳು, ಶಾಲೆಗಳಲ್ಲಿ ಮಕ್ಕಳು ಗುಂಪಾಗಿ ಸೇರುವ ಕಡೆ ಈ ವೈರಸ್​ ಸಾಮಾನ್ಯವಾಗಿ ಹರಡಲಿದೆ. ಅಂದರೆ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್​ ಹನಿಗಳು ಗಾಳಿಯಲ್ಲಿ ಹಾರಿ ಇತರರಿಗೆ ಹರಡುತ್ತವೆ. ಇಲ್ಲವೆ ಆ ಹನಿ ಯಾವುದೇ ವಸ್ತುವಿನ ಮೇಲೆ ಬಿದ್ದಿದ್ದು, ಅದನ್ನು ಮುಟ್ಟಿದವರು ಅದೇ ಕೈಗಳಿಂದ ಮುಖ, ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ವೈರಸ್​ ಸಲುಭವಾಗಿ ಹರಡುತ್ತದೆ.
ಆರೈಕೆ ಹೇಗೆ?:ಅಡೆನೋ ವೈರಸ್​ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜತೆಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುವುದರಿಂದ ದೇಹ ರ್ನಿಜಲೀಕರಣಗೊಳ್ಳಲಿದೆ. ಹಾಗಾಗಿ ಸಾಕಷ್ಟು ದ್ರವಾಹಾರ (ನೀರು, ಹಣ್ನಿನ ರಸ) ನೀಡಬೇಕು. ಶೀತ ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆಯಂತೆ ಮೂಗಿಗೆ ಸಲೈನ್​ ಸೆ ಹನಿಗಳನ್ನು ಹಾಕಿ. ಇದರಿಂದ ಉಸಿರಾಟ ಸುಗಮವಾಗಲಿದೆ. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಿಸಿ ಹಾಗೂ ತಾಜಾ ಆಹಾರ ನೀಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ನೀಡಬಾರದು.
ಅಡೆನೊ ವೈರಸ್​ನೊಂದಿಗೆ ಇನ್​ಫ್ಲುಯೆಂಜಾ, ರೆಸ್ಪಿರೇಟರಿ ಸೆನ್ಸಿಟಿಯಲ್​ ವೈರಸ್​, ಡೆಂ ಪ್ರಕರಣಗಳೂ ವರದಿಯಾಗುತ್ತಿವೆ. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.| ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು
ಅಡೆನೊ ವೈರಸ್​ ಸೇರಿ ವರದಿಯಾಗುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ನಿಖರ ಚಿಕಿತ್ಸೆ ಇಲ್ಲ. ಹಾಗಾಗಿ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡವರಿಗಿಂತ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ.| ಡಾ. ಲಕ್ಷ್ಮೀಪತಿ, ಮಕ್ಕಳ ತಜ್ಞರು, ಕೆ.ಸಿ.ಜನರಲ್​ ಆಸ್ಪತ್ರೆ, ಬೆಂಗಳೂರು
ಡೆಂಘಿ ಪ್ರಕರಣಗಳು ಹೆಚ್ಚಳ:ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದೊಂದು ತಿಂಗಳಲ್ಲಿ ರಾಜ್ಯದಲ್ಲಿ 1,870 ಡೆಂಘಿ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6,679ಕ್ಕೆ ಏರಿಕೆಯಾಗಿದೆ.
ಎಚ್ಚರಿಕೆ ಕ್ರಮಗಳು
ರೋಗ ಲಕ್ಷಣಗಳು:ಅಡೆನೊ ವೈರಸ್​ ಕಣ್ಣುಗಳು, ಶ್ವಾಸಕೋಶ, ಕರುಳು, ಮೂತ್ರನಾಳ ಮತ್ತು ನರಮಂಡಲದ ಒಳಪದವರನ್ನು ಸೋಂಕಿಗೆ ಒಳಪಡಿಸುವ ಸಾಮಾನ್ಯ ವೈರಸ್​ನ ಗುಂಪು. ಸಾಮಾನ್ಯ ಶೀತ ಅಥವಾ ಜ್ವರ ಆರಂಭಿಕ ಲಕ್ಷಣವಾಗಿದ್ದು, ಗಂಟಲು ಕೆರತ ಮತ್ತು ನೋವು, ಬ್ರಾಂಕೈಟಿಸ್​ (ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ), ನ್ಯುಮೋನಿಯಾ (ಶ್ವಾಸಕೋಶದ ಸೋಂಕು), ಗುಲಾಬಿ ಕಣ್ಣು (ಕಾಂಜಂಕ್ವಿವಿಟಿಸ್​) ತೀವ್ರವಾದ ಗ್ಯಾಸ್ಟ್ರೊ ಎಂಟರೈಟಿಸ್​ (ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆ ನೋವು) ಅಡೆನೊ ವೈರಸ್​ನ ಸಾಮಾನ್ಯ ಲಕ್ಷಣವಾಗಿದೆ. ಈ ಸೋಂಕಿತರಲ್ಲಿ ಒಣಕೆಮ್ಮು ಹೆಚ್ಚಿದ್ದು, ಔಷಧ ಸೇವಿಸಿದರೂ ದೀರ್ಕಾಲ ಕೆಮ್ಮು ಕಡಿಮೆ ಆಗದೆ ಗಂಟಲಿನಲ್ಲಿ ಹುಣ್ಣಿ(ಅಲ್ಸರ್​)ಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಭೀರ ಹಂತದಲ್ಲಿ ಮಿದುಳು ಮತ್ತು ಬೆನ್ನುಹುರಿ ಮೇಲೆ ಪರಿಣಾಮ ಬೀರಲಿದೆ.
ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!

ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
