ಲೋಕಸಭೆ ಚುನಾವಣೆ ಮುಗಿದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿದೆ. ಇನ್ನು, ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ, ನನೆಗುದಿಗೆ ಬಿದ್ದ ಕಾಮಗಾರಿ, ಯೋಜನೆಗಳನ್ನು ಪೂರ್ಣಗೊಳಿಸುವ ಸಮಯ. ಅಭಿವೃದ್ಧಿ ಮತ್ತು ಜನಪ್ರಿಯ ಯೋಜನೆಗಳ ವಿಷಯದಲ್ಲಿ ರಾಜಕೀಯ ಹಿತಾಸಕ್ತಿಗಳು ಅಡ್ಡಿಯಾಗಬಾರದು. ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂಬುದು ವಾಸ್ತವ. ಇದು ಜನರ ಆಶೋತ್ತರಗಳಿಗೆ ಎಸಗುವ ದ್ರೋಹ ಮಾತ್ರವಲ್ಲ, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕಿನಿಂದ ವಂಚಿಸಿದಂತೆ. ಪ್ರಗತಿಯ ಪಯಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಸಾಗಿದಾಗ ಮಾತ್ರ, ಯೋಜನೆಗಳ ಸರಿಯಾದ ಅನುಷ್ಠಾನ ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
ಎಷ್ಟೋ ಬಾರಿ ಕೇಂದ್ರ ಸರ್ಕಾರ ತನ್ನ ಪಾಲು ನೀಡಿದ ಬಳಿಕವೂ ರಾಜ್ಯಗಳು ತಮ್ಮ ಪಾಲಿನ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತವೆ ಅಥವಾ ರಾಜಕೀಯ ದುರುದ್ದೇಶದಿಂದ ಯೋಜನೆಗಳ ಅನುಷ್ಠಾನ ವೇಗವನ್ನು ತಗ್ಗಿಸುತ್ತವೆ. ರಾಜ್ಯದಲ್ಲಿ ಬಹುನಿರೀಕ್ಷೆಯಿಂದ ಆರಂಭಿಸಲಾದ ಸ್ಮಾರ್ಟ್ ಸಿಟಿ ಯೋಜನೆ ಕುಂಟುತ್ತ ಸಾಗುತ್ತಿದ್ದರೆ, ಜಲಜೀವನ ಮಿಷನ್ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಇಂಥ ಹಲವು ನಿದರ್ಶನಗಳು ಕಣ್ಮುಂದೆ ಇವೆ. ಮತ್ತೊಂದೆಡೆ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿ ಹಲವು ರಾಜ್ಯಗಳು ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಮೂಲಕ ಮಾದರಿ ಎನಿಸಿಕೊಂಡಿವೆ. ಯೋಜನೆಗಳ ಸರಿಯಾದ ಜಾರಿಯಿಂದ ಜನರಿಗೆ ಅನುಕೂಲವಾಗುವುದಷ್ಟೇ ಅಲ್ಲ, ಅವರ ಜೀವನಸ್ತರದಲ್ಲೂ ಸಕಾರಾತ್ಮಕ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಜನಧನ ಯೋಜನೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದ ಬಳಿಕ ಕೋಟ್ಯಂತರ ಫಲಾನುಭವಿಗಳಿಗೆ ಸರ್ಕಾರದ ನೆರವು ನೇರ ವರ್ಗಾವಣೆಯ (ಡಿಬಿಟಿ) ಮೂಲಕ ಅವರ ಬ್ಯಾಂಕ್ ಖಾತೆ ತಲುಪುತ್ತಿದೆ. ಅಲ್ಲದೆ, ಫಲಾನುಭವಿಗಳು ವೈಯಕ್ತಿಕವಾಗಿ ಉಳಿತಾಯದತ್ತ ಸಾಗಲು ಸಾಧ್ಯವಾಗಿದೆ ಎಂಬುದು ಗಮನಾರ್ಹ.
ಇನ್ನು, ಸ್ವಚ್ಛ ಭಾರತ ಕೂಡ ಇದೇ ಸರಣಿಯಲ್ಲಿ ಮಹತ್ವದ ಯೋಜನೆ. ಪ್ರಸಕ್ತ ಯೋಜನೆಯ ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡಲಾಗಿತ್ತು. ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸಲೆಂದು ವೈಯಕ್ತಿಕ, ಸಮುದಾಯ ಶೌಚಗೃಹ ನಿರ್ವಣ, ನೈರ್ಮಲ್ಯೀಕರಣ ಮತ್ತು ಅರಿವು ಮೂಡಿಸುವ ಚಟುವಟಿಕೆಗಳನ್ನು ನಡೆಸಲಾಗಿತ್ತು. ಪರಿಣಾಮ, ದೇಶಾದ್ಯಂತ ಕೋಟ್ಯಂತರ ಶೌಚಗೃಹಗಳು ನಿರ್ವಣಗೊಂಡಿದ್ದು, ಸ್ವಚ್ಛತೆ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದಂತಾಗಿದೆ. ಈಗ ಸ್ವಚ್ಛ ಭಾರತದ ಎರಡನೇ ಹಂತದ ಯೋಜನೆಯು ನಗರ-ಪಟ್ಟಣ ಪ್ರದೇಶಗಳನ್ನು ಕೇಂದ್ರೀಕರಿಸಿದ್ದು, ಮಾಲಿನ್ಯಮುಕ್ತಗೊಳಿಸುವ ಉದ್ದೇಶ ಹೊಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿ ರಾಜ್ಯದ ಎಲ್ಲ ನಗರ-ಪುರ, ಪಟ್ಟಣಗಳನ್ನು ಸ್ವಚ್ಛ ಭಾರತ ಮಿಷನ್ 2.0 ಕೇಂದ್ರೀಕರಿಸಿದೆ. ಸ್ವಚ್ಛ, ಸುಂದರ ವಾತಾವರಣ ನಿರ್ವಣಕ್ಕೆ ಈ ಯೋಜನೆ ಗಮನ ನೀಡಲಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಪಾಲು 2,185 ಕೋಟಿ ರೂ. ಸೇರಿ 5,072 ಕೋಟಿ ರೂ. ಅನುದಾನ ನಿಗದಿಯಾಗಿದೆ. ಪ್ರಸಕ್ತ ವರ್ಷದಲ್ಲಿ ಜಲಮೂಲಗಳಲ್ಲಿನ ತ್ಯಾಜ್ಯಗಳ ಸಂಸ್ಕರಣೆ, ಘನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮತ್ತು ವಿಂಗಡಣೆ, ಮರುಬಳಕೆ ಇತ್ಯಾದಿ ಕಾರ್ಯಚಟುವಟಿಕೆ ನಡೆಯಲಿವೆ. ನಗರಗಳ ದೃಷ್ಟಿಯಲ್ಲಿ ನಿಜಕ್ಕೂ ಇದೊಂದು ಉತ್ತಮ ಯೋಜನೆಯಾಗಿದ್ದು, ರಾಜ್ಯ ಸರ್ಕಾರವೂ ಪರಿಣಾಮಕಾರಿ ಜಾರಿಗೆ ಶ್ರಮವಹಿಸಲಿ.
ಅಂದು ಅಪ್ಪು ಮತ್ತು ಸುದೀಪ್​ ಸರ್​​ ಹಲ್ಲುಕಚ್ಚಿಕೊಂಡು ಸುಮ್ಮನಿದ್ರು: ನಿರ್ಮಾಪಕ ಉಮಾಪತಿ ಸ್ಪೋಟಕ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
