ಮೈಸೂರು:ಸ್ಯಾಂಟ್ರೋ ರವಿ ಅಲಿಯಾಸ್​ ಮಂಜುನಾಥ್​ನ ಬಂಧನ ಆಗಿಲ್ಲ. ಪೊಲೀಸ್ ಇಲಾಖೆಯವರ ಜತೆಗೂ ಆತನ ನಂಟು ಇದ್ದು, ಆ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದ ಎಡಿಜಿಪಿ ಅಲೋಕ್ ಕುಮಾರ್, ಸ್ಯಾಂಟ್ರೋ ರವಿಯನ್ನು ಬಂಧಿಸಿದ ನಂತರವೇ ನಾನು ಬೆಂಗಳೂರಿಗೆ ತೆರಳುವೆ. ಅಲ್ಲಿಯವರೆಗೂ ನಾನು ಮೈಸೂರಿನಲ್ಲೇ ಇರುವೆ ಎಂದರು.
ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಅಲೋಕ್ ಕುಮಾರ್, ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧನದ ಸಿಹಿ ಸುದ್ದಿ ಕೊಡುತ್ತೇವೆ. ಸ್ವಲ್ಪ ತಾಳ್ಮೆಯಿಂದ ಇರಿ. ಅವನು ಅಂಡಮಾನ್​ನಲ್ಲಿ ಇರಲಿ, ಬೇರೆ ಎಲ್ಲೇ ಇರಲಿ. ಅವನನ್ನು ಹಿಡಿದು ತರುತ್ತೇವೆ‌. ದೇಶದ 7 ರಾಜ್ಯಗಳಲ್ಲಿ ನಮ್ಮ ಟೀಂ ಪತ್ತೆ ಕಾರ್ಯಕ್ಕೆ ಹೋಗಿದೆ. ಅವನು ಎಲ್ಲೇ ಅಡಗಿದ್ದರೂ ಶೀಘ್ರವೇ ಬಂಧಿಸುತ್ತೇವೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜ.19ರಂದು ಬೆಂಗಳೂರು ಬರುತ್ತಾರೆ. ಅಲ್ಲಿಯವರೆಗೂ ನಾನು ಇಲ್ಲೇ ಇರುತ್ತೇನೆ. ಅಷ್ಟರೊಳಗೆ ಸ್ಯಾಂಟ್ರೋ ರವಿಯನ್ನು ಬಂಧಿಸುತ್ತೇವೆ ಎಂದರು.
ಸ್ಯಾಂಟ್ರೋ ರವಿ ಜೀವಕ್ಕೆ ಸರ್ಕಾರದಿಂದಲೇ ಅಪಾಯವಿದೆ, 12 ಜನರ ಸಿಡಿ ಕೇಸ್​ನ ಪ್ರಮುಖ ಸಾಕ್ಷಿಯೇ ಈತ: ಇಬ್ರಾಹಿಂ

ಸ್ಯಾಂಡಲ್​ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಬಂಧನ

ಎರಡ್ಮೂರು ದೊಡ್ಡದೊಡ್ಡ ತಲೆಗಳು ಉರುಳುತ್ತವೆ, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತ: ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 17 =
Remember me
