ಬೆಂಗಳೂರು:ಎಲ್ಲ ಕೆಲಸಗಳು‌ ಬೇಗ ಆದರೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತಗಳನ್ನು ತಡೆಯಲು ಸಾಧ್ಯ. ಈ ಹೆದ್ದಾರಿಯಲ್ಲಿ ಜನರು ಪ್ರತಿ ದಿನ ಸಾಯುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಕೂಡ ಸುರಕ್ಷಿತವಾಗಿ ಚಾಲನೆ ಮಾಡಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲನೆ ನಡೆಸಿದ ಬಳಿಕ ಮಂಡ್ಯದ ಹನಕೆರೆ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿದರು.
ಇದನ್ನೂ ಓದಿ:ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನೇರಳೆ ಮಾರ್ಗದ ರೈಲು ಎರಡು ಗಂಟೆಗಳ ಕಾಲ ತಾತ್ಕಾಲಿಕ ಸ್ಥಗಿತ
ಇವತ್ತು ನಾನು ಪರಿಶೀಲನೆ ಮಾಡಿದಾಗ ಜನರು ತಮ್ಮ ಸಮಸ್ಯೆ ಹೇಳಿದ್ದಾರೆ. ಕೆಲವು ಕಡೆ ಸರ್ವಿಸ್ ರೋಡ್‌ನಲ್ಲಿ ಫುಟ್‌ಪಾತ್ ಮಾಡಿಲ್ಲ. ಕೆಲವು ಕಡೆ ಅಂಡರ್ ಪಾಸ್ ಮಾಡಿಲ್ಲ. ಮತ್ತೆ ಕೆಲವು ಕಡೆ ನೀರು ನುಗ್ಗುತ್ತಿದೆ. ಇದರಿಂದ ಅಪಘಾತಗಳು ಆಗುತ್ತಿವೆ. ಸರ್ವಿಸ್ ರೋಡ್‌ನಲ್ಲಿ ತಂತಿ ಬೇಲಿಯನ್ನು ಸರಿಯಾಗಿ ಹಾಕಿಲ್ಲ. ಹೈವೇಯಲ್ಲಿ ಸರಿಯಾಗಿ ಸಿಸಿ ಕ್ಯಾಮರಾ ಅಳಡಿಕೆ ಆಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹೇಳಿದ್ದೇವೆ. ಎಲ್ಲ ಕೆಲಸಗಳು‌ ಬೇಗ ಆದರೆ ಅಪಘಾತಗಳನ್ನು ತಡೆಯಲು ಸಾಧ್ಯ. ಈ ಹೆದ್ದಾರಿಯಲ್ಲಿ ಜನರು ಪ್ರತಿ ದಿನ ಸಾಯುತ್ತಿದ್ದಾರೆ. ಸಾರ್ವಜನಿಕರು ಸುರಕ್ಷಿತ ಚಾಲನೆಯನ್ನು ಮಾಡಬೇಕು ಮತ್ತು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಹೆದ್ದಾರಿಯಲ್ಲಿ ಆಗುತ್ತಿರುವ ಅಪರಾಧಗಳನ್ನು ತಡೆಯಲು ಹೈವೇ ಗಸ್ತು ವಾಹನ ಹಾಕಿದ್ದೇವೆ. ಗಸ್ತು ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 4 ಗಸ್ತು ವಾಹನ ಹಾಕಿದ್ದೇವೆ. ಕೆಟ್ಟು ನಿಂತ ಗಾಡಿಗಳ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.
ಈ ಹೆದ್ದಾರಿಯಲ್ಲಿ ಬಹಳಷ್ಟು ಜನ ಸುಮ್ಮನೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ತಡೆಯಲು ಹೇಗೆ ಕ್ರಮ ತೆಗೆದುಕೊಳ್ಳಬೇಕೆಂದು ಗಮನ ಕೊಡುತ್ತಿದ್ದೇವೆ. ಟೋಲ್ ಬಳಿ ವಾಹನಗಳ ತಪಾಸಣೆ ಮಾಡುತ್ತೇವೆ. ಯಾವ ವಾಹನಗಳಿಗೆ ಸರಿಯಾದ ಸ್ಟಿಕ್ಕರ್​ ಇರಲ್ಲ, ಅವರ ಮೇಲೆ‌ ಕ್ರಮ ತೆಗೆದುಕೊಳ್ಳುತ್ತೇವೆ. ಅತಿಯಾದ ವೇಗದ ಮೇಲೆ‌ ಕಣ್ಣಿಡುತ್ತೇವೆ. ಅತಿ ವೇಗವಿದ್ದರೆ, ದಂಡ ಹಾಕುವ ಜೊತೆಗೆ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಅಲೋಕ್​ ಕುಮಾರ್​ ಎಚ್ಚರಿಕೆ ನೀಡಿದರು.
ಸದ್ಯಕ್ಕೆ ಹೈವೇಯಲ್ಲಿ ದ್ವಿಚಕ್ರ ವಾಹ ಓಡಾಡುತ್ತಿವೆ. ದ್ವಿಚಕ್ರ ವಾಹನ ರದ್ದು ಮಾಡಲು ಗೆಜೆಟ್ ನೋಟಿಫಿಕೇಶನ್ ಮಾಡಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 64 ಜನರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. 58 ಜನರು ರಾಮನಗರ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ. ಟೋಲ್ ಗೇಟ್ ಬಳಿ ಇನ್ಮುಂದೆ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡ್ತೀವಿ ಎಂದು ತಿಳಿಸಿದರು.
ಇದನ್ನೂ ಓದಿ:ಕರ್ನಾಟಕ ಮುಕ್ತ ವಿವಿಯಿಂದ ರಾಷ್ಟ್ರಪತಿಗಳು ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ
ಜನರು ಅವರ ಸಮಸ್ಯೆಗಳನ್ನು ಹೇಳಿದ್ದಾರೆ. ಅಪಘಾತಗಳಿಗೆ ಅತಿಯಾದ ವೇಗವೇ ಕಾರಣವಾಗಿದೆ. ಜನರಲ್ಲಿ ವಾಹನ ಚಲಿಸುವ ನೈಪುಣ್ಯತೆಯೂ ಕಡಿಮೆ ಇದೆ. ಕಾರು, ಬೈಕಿನ ಚಾಲಕರು ಅತಿಯಾದ ಆತ್ಮವಿಶ್ವಾಸದಿಂದ ಓಡಿಸುತ್ತಾರೆ. ಬೈಕ್‌ನವರು 140ರ ವೇಗದಲ್ಲಿ ವಾಹನ ಚಲಿಸುತ್ತಾರೆ. ಮಧ್ಯದಲ್ಲಿ ಬ್ರೇಕ್‌ ಹಾಕಿದಾಗ ಅಪಘಾತಗಳು ಆಗುತ್ತವೆ. ಬಹಳಷ್ಟು ಜನರಿಗೆ ವಾಹನಗಳ‌ ಮೇಲೆ ಕಂಟ್ರೋಲ್‌ ಇರಲ್ಲ. ಕಡಿಮೆ ವೇಗದಲ್ಲಿ ಹೋದರೆ ಏನು ತೊಂದರೆ ಆಗಲ್ಲ. ಆರ್‌ಟಿಓ ಅವರು ನೈಪುಣ್ಯತೆ ಇರುವವರಿಗೆ ಲೈಸೆನ್ಸ್ ಕೊಡಬೇಕು. ನೈಪುಣ್ಯತೆ ಇಲ್ಲದರಿಗೆ ಲೈಸೆನ್ಸ್ ಕೊಡಬಾರದು ಎಂದು ಕಿವಿ ಮಾತು ಹೇಳಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್​ ಕುಮಾರ್​ ಇದೇ ವೇಳೆ ಸೂಚನೆ ನೀಡಿದರು. ನೀವು ಮಾಡಿರುವ ಕೆಲ ತಪ್ಪುಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ‌. ಜನರು ನಿಮ್ಮ ಜೊತೆಗೆ ಪೊಲೀಸ್ ಇಲಾಖೆಯನ್ನು ಬೈಯ್ಯುತ್ತಾರೆ. ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು. ತಿರುವು ಇರುವ ಕಡೆ ನಾಮ ಫಲಕ ಹಾಕಬೇಕು. ಸರ್ವಿಸ್ ರಸ್ತೆಯಲ್ಲಿ ಲೋಪಗಳನ್ನು ಸರಿಪಡಿಸಿ ಮತ್ತು ಅಪಘಾತ ಪ್ರಕರಣಗಳನ್ನು ತಡೆಯುವುದು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ಕರ್ತವ್ಯ ಎಂದು ಹೇಳಿದರು.
ಹೆದ್ದಾರಿ ಪರಿಶೀಲನೆ ವೇಳೆ ಎಡಿಜಿಪಿ ಅಲೋಕ್ ಕುಮಾರ್‌ ಅವರಿಗೆ ಜನರು ದೂರು ನೀಡಿದರು. ಸರ್ವಿಸ್ ರಸ್ತೆಯನ್ನು ಸರಿಯಾಗಿ ಮಾಡಿಲ್ಲ. ಸರ್ವಿಸ್ ರಸ್ತೆಯಲ್ಲಿ ಚರಂಡಿಗಳು ಆಗಿಲ್ಲ. ಬೇಡದ ಸ್ಥಳದಲ್ಲಿ ರಸ್ತೆ ಉಬ್ಬು ಹಾಕಿದ್ದಾರೆ. ಬೇಕಾಗಿರುವ ಸ್ಥಳದಲ್ಲಿ ರಸ್ತೆ ಉಬ್ಬು ಹಾಕಿಲ್ಲ. ಇದರಿಂದ ಹೆಚ್ಚು ಅಪಘಾತಗಳು ಆಗುತ್ತಿವೆ ಎಂದು ಜನರು ದೂರಿದ್ದಾರೆ.
ಇದನ್ನೂ ಓದಿ:ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ: 5 ಕೆಜಿ ಅಕ್ಕಿ ಜತೆ ಖಾತೆಗೆ ಜಮಾ ಆಗಲಿದೆ ಹಣ
ಎಡಿಜಿಪಿ ಅಲೋಕ್ ಕುಮಾರ್ ಅವರು ಹೆದ್ದಾರಿಯನ್ನು ಪರಿಶೀಲಿಸುವ ವೇಳೆ ಮಂಡ್ಯ ಎಸ್ಪಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಾಥ್ ನೀಡಿದರು. ಮದ್ದೂರಿನ ನಿಡಘಟ್ಟದಿಂದ ಮಂಡ್ಯದವರೆಗೂ ಅಲೋಕ್​ ಕುಮಾರ್​ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಹೈವೆ ಕುರಿತು ವಾಹನ ಸವಾರರು ದೂರು ನೀಡಿದರು. ರಸ್ತೆಯ ಅಕ್ಕ-ಪಕ್ಕದಲ್ಲಿ ಕಲ್ಲು-ಮಣ್ಣುಗಳು ಬಿದ್ದಿವೆ. ಸೂಕ್ತ ಕ್ರಮವನ್ನು ಹೆದ್ದಾರಿ ಪ್ರಾಧಿಕಾರ ಕೈಗೊಂಡಿಲ್ಲವೆಂದು ಆಕ್ರೋಶ ಹೊರಹಾಕಿದರು.(ದಿಗ್ವಿಜಯ ನ್ಯೂಸ್​)
ಗಂಡನ ಮನೆಯ ವಿಚಿತ್ರ ಆಚರಣೆಗೆ ಕಣ್ಣೀರಿಟ್ಟ ನವವಿವಾಹಿತೆ: ವಿಡಿಯೋ ವೈರಲ್​ ದಾಖಲಾಯ್ತು ಕೇಸ್​

VIDEO| ಬಿಗ್​​ಬಾಸ್​ ಮನೆಯಲ್ಲೇ ಲಿಪ್​ಲಾಕ್​​; ಒಬ್ಬರನೊಬ್ಬರು ತಬ್ಬಿಕೊಂಡು ಕ್ಯಾಮೆರಾ ಮುಂದೆ ಮೈ ಮರೆತ ಸ್ಪರ್ಧಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
