ಬೆಂಗಳೂರು:ಕೆಎಸ್​ಆರ್​ಪಿ ಹೆಡ್​ ಕಾನ್ಸ್​ಟೇಬಲ್ ಆತ್ಮಹತ್ಯೆಯಿಂದ ಪೊಲೀಸ್​ ಇಲಾಖೆಯಲ್ಲಿ ಭಯದ ವಾತಾವರಣ ಉಂಟಾಗಿದ್ದು, ಕರೊನಾ ವಿರುದ್ಧ ಹೋರಾಟದಲ್ಲಿ ಎದೆಗುಂದದೆ ಹೋರಾಟ ನಡೆಸುತ್ತಿರುವ ವಾರಿಯರ್ಸ್​ಗೆ ಎಡಿಜಿಪಿ ಅಲೋಕ್​ ಕುಮಾರ್​ ಧೈರ್ಯ ತುಂಬಿದ್ದಾರೆ.​ಸದ್ಯ ಕರೊನಾದಿಂದ ಕೆಎಸ್​ಆರ್​ಪಿ ಪೊಲೀಸರು ಚಿಂತಾಕ್ರಾಂತರಾಗಿದ್ದಾರೆ. ಹೀಗಾಗಿ ಕ್ವಾರೆಂಟೈನ್​ನಲ್ಲಿರುವ ಪೊಲೀಸರಿಗೆ ಯೋಗ ಟೀಚರ್ ಆದ ಖಡಕ್ ಅಧಿಕಾರಿ ಅಲೋಕ್​ ಕುಮಾರ್​, ಕರೊನಾ ಬಂದರೆ ಧೈರ್ಯವಾಗಿ ಎದುರಿಸುವಂತೆ ಆತ್ಮಬಲ ತುಂಬಿದರು.ಇದನ್ನೂ ಓದಿ:ಸುಶಾಂತ್ ವ್ಯಕ್ತಿತ್ವ ಎಂಥದ್ದು ಎನ್ನುವುದಕ್ಕೆ ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್​ಆ್ಯಪ್ ಚಾಟ್​ ಸಾಕ್ಷಿ
ಮಾನಸಿಕವಾಗಿ ಕುಗ್ಗಬೇಡಿ, ರೋಗ ಲಕ್ಷಣಗಳು ಕಾಣಿಸಿದರೆ ಕಡೆಗಣನೆ ಕೂಡ ಮಾಡಬೇಡಿ. ಬಿಡುವಿನ ಸಮಯದಲ್ಲಿ ವಾಕಿಂಗ್, ಯೋಗ ಹಾಗೂ ಪ್ರಾಣಾಯಾಮ ಮಾಡಿ ಎಂದು ಹೇಳಿದರು. ವಿಶೇಷವಾಗಿ ಸ್ವತಃ ಅವರೇ ಪ್ರಾಣಾಯಾಮ ಹೇಗೆ ಮಾಡಬೇಕು ಎಂದು ತೋರಿಸಿದರು.
ನೂರಾರು ಕ್ವಾರಂಟೈನ್​ ಸಿಬ್ಬಂದಿಗೆ ಯೂನಿಫಾರ್ಮ್​ನಲ್ಲೇ ಯೋಗಾಭ್ಯಾಸ ಕಲಿಸಿದ ಅಲೋಕ್ ಕುಮಾರ್, ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್​ಟೇಬಲ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸರ್ಕಾರದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.(ದಿಗ್ವಿಜಯ ನ್ಯೂಸ್​)ಇದನ್ನೂ ಓದಿ:ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!
https://www.facebook.com/VVani4U/videos/589159701996892/
4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 6 =
Remember me
