ಕೋಲಾರ:ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪೊಲೀಸ್​ ಇಲಾಖೆ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಅಕ್ರಮ ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ರೌಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ.
ರಾಜ್ಯದಲ್ಲಿ 45 ಸಾವಿರ ರೌಡಿಗಳಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ. ಸತತವಾಗಿ ಈ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಕೋಲಾರದಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ:ಮಲಮಗನ ಜತೆ ಮದ್ವೆ, 2ನೇ ಮಗುವಿಗೆ ಜನ್ಮ! ಸಾಕಿದ ಪುತ್ರನನ್ನೇ ಮೋಹಿಸಿದ ಬ್ಲಾಗರ್ ಕರಾಳ ಕತೆಯಿದು…​
ವಿಧಾನಸಭಾ ಚುನಾವಣೆ‌ ಹಿನ್ನಲೆಯಲ್ಲಿ ಕೋಲಾರ ನಗರದಲ್ಲೆಡೆ‌ ಸಂಚಾರ ನಡೆಸಿದ ಎಡಿಜಿಪಿ‌ ಅಲೋಕ್ ಕುಮಾರ್, ಕೋಲಾರದ ಟ್ಲಕ್‌ ಟವರ್ ಸೇರಿದಂತೆ ಕೆಲ‌ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಯಾವುದೇ ಗಲಾಟೆಗಳಿಗೆ ಆಸ್ಪದ ನೀಡದಂತೆ ಎಸ್ಪಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ 5605 ಎಸ್ಎಸ್​ಟಿ ತಂಡವಿದೆ. 2030 ವಿಚಕ್ಷಣಾ ದಳ, 1060 ಸಿಆರ್​ಪಿಎಫ್ ತಂಡಗಳಿವೆ. ನಾಳೆ ನಾಲ್ಕು ಸಿಆರ್​ಪಿಎಫ್ ತಂಡಗಳು ಕೋಲಾರಕ್ಕೆ ಬರುತ್ತಿವೆ. ಒಟ್ಟಾರೆ 600 ಪ್ಯಾರಾಮಿಲಿಟರಿ ತಂಡಗಳಿವೆ. ಕಾನೂನು ಸುವ್ಯವಸ್ಥೆ ಹದಗೆಡುವವರ ಮೇಲೆ‌ ಬಹಳ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅಲೋಕ್​ ಕುಮಾರ್​ ಹೇಳಿದರು.(ದಿಗ್ವಿಜಯ ನ್ಯೂಸ್​)
ವರುಣಾ ಮತ್ತು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ; ಆದರೆ…!

ಅರಕಲಗೂಡಿನ ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್​ ತೊರೆದು ಬಿಜೆಪಿಗೆ ಸೇರ್ಪಡೆ; ದೆಹಲಿಯಲ್ಲಿ ಪಕ್ಷಕ್ಕೆ ಸ್ವಾಗತಿಸಿದ ನಡ್ಡಾ

1988ರ ಹಲ್ಲೆ ಪ್ರಕರಣ; ನವಜೋತ್​ ಸಿಂಗ್​ ಸಿಧು ಜೈಲಿನಿಂದ ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
