|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಸಬ್ ಇನ್​ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ವೇಳೆ ಒಎಂಆರ್ ಶೀಟ್ ತಿದ್ದಲು ಎಡಿಜಿಪಿ ಅಮೃತ್ ಪೌಲ್, ಖುದ್ದು ತನ್ನ ಬಳಿಯಿಂದ ಸ್ಟ್ರಾಂಗ್ ರೂಮ್ ಕೀಯನ್ನು ಡಿವೈಎಸ್​ಪಿ ಶಾಂತಕುಮಾರ್​ಗೆ ಕೊಟ್ಟು ಅಕ್ರಮ ಎಸಗಲು ಸಾಥ್ ಕೊಟ್ಟಿದ್ದರು. ಡೀಲ್ ಕುದುರಿಸಿದ್ದ ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ತಿದ್ದುವಂತೆ ತಿಳಿಸಿ ರಜೆ ಹಾಕಿ ಕಚೇರಿಯಿಂದ ದೂರ ಉಳಿದಿದ್ದರು. ಎಡಿಜಿಪಿ ಆಜ್ಞೆಯಂತೆ ಶಾಂತಕುಮಾರ್ ಮತ್ತು ಗ್ಯಾಂಗ್ 3 ದಿನ 9 ತಾಸಿನಲ್ಲಿ ಒಎಂಆರ್ ಶೀಟ್​ಗಳನ್ನು ತಿದ್ದಿ ಹಣ ಕೊಟ್ಟ ಅಭ್ಯರ್ಥಿಗಳ ಹೆಸರು ಆಯ್ಕೆಪಟ್ಟಿಯಲ್ಲಿ ಬರುವಂತೆ ಮಾಡಿದ್ದರು ಎಂಬ ವಿಚಾರವನ್ನು ಸಿಐಡಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ.
ಅಮೃತ್ ಪೌಲ್ ಮತ್ತು ಸಹಚರರು ಒಳಸಂಚು ರೂಪಿಸಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದರು. ಅರಮನೆ ರಸ್ತೆ ಸಿಐಡಿ ಪ್ರಧಾನ ಕಚೇರಿ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ಲ್ಲಿ 2021ರ ಅಕ್ಟೋಬರ್ 7, 8 ಮತ್ತು 16ರಂದು ಪ್ರತಿದಿನ ಬೆಳಗ್ಗೆ 6.30ರಿಂದ 9.30ರವರೆಗೆ ಒಎಂಆರ್ ಶೀಟ್​ಗಳನ್ನು ತಿದ್ದಿದ್ದಾರೆ. ಮೂರು ದಿನಗಳಲ್ಲಿ 9 ತಾಸು ಅಕ್ರಮ ಕೂಟ ಸೇರಿ ಅಂದಾಜು 16 ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ತಿದ್ದಿರುವುದು ಚಾರ್ಜ್​ಶೀಟ್​ನಲ್ಲಿ ಬೆಳಕಿಗೆ ಬಂದಿದೆ.
545 ಎಸ್​ಐ ನೇಮಕಾತಿಗೆ 2021ರ ಅಕ್ಟೋಬರ್ 3ರಂದು ರಾಜ್ಯದ 91 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲ ಒಎಂಆರ್ ಶೀಟ್​ಗಳನ್ನು ಸಿಐಡಿ ಪ್ರಧಾನ ಕಚೇರಿಗೆ ರವಾನೆ ಮಾಡಲಾಗಿತ್ತು. ಅದಾಗಲೇ ಅಮೃತ್ ಪೌಲ್ ಮತ್ತು ಅವರ ಗ್ಯಾಂಗ್ ಒಳಸಂಚು ರೂಪಿಸಿ ಕೆಲ ಅಭ್ಯರ್ಥಿಗಳಿಗೆ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂ. ವಸೂಲಿ ಮಾಡಿದ್ದರು. ಅದರಂತೆ ಪೌಲ್, ತನ್ನ ಬಳಿಯಿದ್ದ ಸ್ಟ್ರಾಂಗ್ ರೂಮ್ ಕೀಯನ್ನು ಶಾಂತಕುಮಾರ್​ಗೆ ಒಪ್ಪಿಸಿದ್ದರು. 3-4 ದಿನಗಳ ಕಾಲ ಕಚೇರಿಗೆ ಬಾರದೆ ರಜೆ ಹಾಕಿದ್ದರು.
ಈ ಕೀ ಬಳಿಸಿಕೊಂಡು ನೇಮಕಾತಿ ವಿಭಾಗದ ಸಿಬ್ಬಂದಿ ಶ್ರೀನಿವಾಸ್, ಬೆಳಗ್ಗೆ 6.30ಕ್ಕೆ ಸ್ಟ್ರಾಂಗ್ ರೂಮ್ ಪ್ರವೇಶ ಮಾಡಿ ಒಎಂಆರ್ ಶೀಟ್ ಇಟ್ಟಿದ್ದ ನೀಲಿ ಬಣ್ಣದ ಒನ್​ಟೈಮ್ ಗಮ್ಮಿಂಗ್ ಕವರ್ ಕಟ್ ಮಾಡಿ ತಮಗೆ ಬೇಕಾದ ಅಭ್ಯರ್ಥಿಗಳ ಉತ್ತರ ಪತ್ರಿಕೆ ತೆಗೆದುಕೊಳ್ಳುತ್ತಾರೆ. ಶಾಂತಕುಮಾರ್ ನೀಡಿದ್ದ ಸರಿ ಉತ್ತರವನ್ನು ನೋಡಿಕೊಂಡು ಅಭ್ಯರ್ಥಿಗಳು ಖಾಲಿ ಬಿಟ್ಟಿದ್ದ ಒಎಂಆರ್ ಶೀಟ್​ನಲ್ಲಿ ತುಂಬಿರುತ್ತಾರೆ. 2021ರ ಅಕ್ಟೋಬರ್ 7ರಂದು 2 ಕಿಟ್ ಬಾಕ್ಸ್, ಅ.8ರಂದು 2 ಕಿಟ್ ಬಾಕ್ಸ್ ಮತ್ತು ಅ.16ರಂದು 3 ಕಿಟ್ ಬಾಕ್ಸ್ ತೆರೆದು ಅಕ್ರಮ ಎಸಗಿದ್ದರು. ಈ ಮೂರು ದಿನಗಳು ನೇಮಕಾತಿ ವಿಭಾಗದ ಎಫ್​ಡಿಎ ಡಿ. ಹರ್ಷ, ಸಿಐಡಿ ಪ್ರಧಾನ ಕಚೇರಿ ಹೊರಗೆ ನಿಂತು ಮೇಲಾಧಿಕಾರಿಗಳ ಚಲನವಲನಗಳ ಮೇಲೆ ನಿಗಾ ವಹಿಸುತ್ತಿದ್ದರು.
ಸ್ಕಾ್ಯನಿಂಗ್​ವರೆಗೂ ಅಕ್ರಮ:ಒಎಂಆರ್ ಶೀಟ್ ಸಂಗ್ರಹಿಸಿದ್ದ ಕಿಟ್ ಬಾಕ್ಸ್ ಮತ್ತು ಒನ್ ಟೈಮ್ ಲಾಕ್​ಗಳನ್ನು ತೆಗೆದಿರುವುದು ಗೊತ್ತಾಗಬಾರದು ಎಂದು ಆರೋಪಿಗಳು ಎಚ್ಚರ ವಹಿಸಿದ್ದರು. 2021ರ ಅಕ್ಟೋಬರ್ 29 ಮತ್ತು 30ರಂದು ನಡೆದ ಒಎಂಆರ್ ಶೀಟ್​ಗಳ ಮೌಲ್ಯಮಾಪನಕ್ಕೆ (ಸ್ಕಾ್ಯನಿಂಗ್) ಆರೋಪಿ ಶ್ರೀಧರ್, ಖುದ್ದು ತಾನು ತೆಗೆದಿದ್ದ ಬಾಕ್ಸ್​ಗಳನ್ನು ತೆಗೆದುಕೊಂಡು ಆಂಟಿಸಿದ್ದ ಡಬಲ್ ಸೈಡ್ ಗಮ್ ಟೇಪ್ ಅನ್ನು ಯಾರಿಗೂ ತೋರಿಸದೆ ಏಕಾಏಕಿ ಕತ್ತರಿಸಿ ಸಾಕ್ಷ್ಯ ನಾಶ ಮಾಡುತ್ತಾರೆ. ಇದರಿಂದ ಉಳಿದವರಿಗೆ ಅನುಮಾನ ಬರುವುದಿಲ್ಲ. ಈ ಎಲ್ಲ ಸಾಕ್ಷ್ಯಗಳನ್ನು ಅಂದೇ ಆರೋಪಿಗಳು ನಾಶ ಮಾಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಸಿ ಕ್ಯಾಮರಾ ಬ್ಯಾಕಪ್ ನಾಶ:ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ೆ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಶ್ರೀಧರ್​ಗೆ ವಹಿಸಲಾಗಿತ್ತು. ಆ ಮೂರು ದಿನಗಳು ಬೆಳಗ್ಗೆ 6.30ರಿಂದ 9.30ರವರೆಗೆ ಸಿಸಿ ಕ್ಯಾಮರಾ ಆಫ್ ಮಾಡಿದ್ದ. ಅಲ್ಲದೆ, ಬೆಳಗ್ಗೆ 6ರಿಂದ 10 ಗಂಟೆವರೆಗೆ ದೃಶ್ಯಾವಳಿಗಳ ಬ್ಯಾಕಪ್ ಸಂಗ್ರಹಿಸಿಡುವ ಬದಲು ನಾಶಪಡಿಸಿ, ಸಾಕ್ಷ್ಯಾಧಾರಗಳನ್ನು ಸಿಗದಂತೆ ಮಾಡಿದ್ದರು ಎಂಬುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.
ನರೇಂದ್ರ ಮೋದಿ ಹುಟ್ಟಿದ್ದೆ ಈ ದೇಶವನ್ನ ಹಿಂದೂರಾಷ್ಟ್ರ ಮಾಡೋಕೆ: ಶಾಸಕ ಯತ್ನಾಳ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eleven =
Remember me
