| ಚಿದಂಬರ ಕಾಕತ್ಕರ್ ಮಂಗಳೂರುಕಾಲವನ್ನು ಅಳೆಯಲು ಮಾನವ ಏನೇನೋ ವ್ಯವಸ್ಥೆ ಮಾಡಿಕೊಂಡಿದ್ದರೂ ಅದು ಅಳತೆಗೆ ಸಿಗದೆ ನುಣುಚಿಕೊಳ್ಳುತ್ತಿರುತ್ತದೆ. ಗ್ರೆಗೊರಿಯನ್ ಕ್ಯಾಲೆಂಡರ್ ಆಧರಿಸಿದರೆ ನಾಲ್ಕು ವರ್ಷಕ್ಕೊಮ್ಮೆ ಒಂದು ದಿನ ಹೆಚ್ಚಿಸಬೇಕು. ಚಾಂದ್ರಮಾನ ಅನುಸರಿಸಿದರೆ ಅಂದಾಜು ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಸೇರಿಸಬೇಕು. ಆದರೆ, ಇದನ್ನೆಲ್ಲ ನಮ್ಮಂಥ ಜನಸಾಮಾನ್ಯರು ಯಾಂತ್ರಿಕವಾಗಿ ಒಪ್ಪಿಕೊಂಡು ಅನುಸರಿಸುತ್ತೇವೆಯೇ ಹೊರತು ಯಾಕೆ? ಎಂದು ಯೋಚಿಸುವುದು ಕಮ್ಮಿ.
ವ್ಯಾವಹಾರಿಕವಾಗಿ ನಾವೆಲ್ಲರೂ ಅನುಸರಿಸುವ ಸೌರಮಾನ ಆಧಾರದ ಗ್ರೆಗೊರಿಯನ್ ಕ್ಯಾಲೆಂಡರಿನ ಅಧಿಕ ವರ್ಷ ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟವಲ್ಲ. ಭೂಮಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಪೂರೈಸಲು ಸುಮಾರು 365.25 ದಿನ ತೆಗೆದುಕೊಳ್ಳುತ್ತದೆ. ಆದರೆ, ವರ್ಷಕ್ಕೆ 365.25 ದಿನ ಎನ್ನುವಂತಿಲ್ಲವಲ್ಲ. ಆದ್ದರಿಂದ ನಾಲ್ಕು ವರ್ಷಗಳಲ್ಲಿ ಈ ವ್ಯತ್ಯಾಸ ಒಂದು ದಿನ ಆಗುವವರೆಗೆ ಕಾದು ಫೆಬ್ರವರಿಯಲ್ಲಿ 28ರ ಬದಲಿಗೆ 29 ದಿನ ಮಾಡಿ ಅದನ್ನು ಅಧಿಕ ವರ್ಷ ಅನ್ನಲಾಗುತ್ತದೆ. ಆದರೆ, ಹೀಗೆ ಸೇರಿಸಿದ್ದು ಬೇಕಾದ್ದಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹೀಗೆ ಸ್ವಲ್ಪ ಸ್ವಲ್ಪ ಹೆಚ್ಚು ಸೇರಿಸಿದ್ದು 100 ವರ್ಷಗಳಾಗುವಾಗ ಭರ್ತಿ ಒಂದು ದಿನ ಆಗುತ್ತದೆ. ಆದ್ದರಿಂದ 100ನೇ ವರ್ಷ 4ರಿಂದ ನಿಶ್ಶೇಷವಾಗಿ ಭಾಗಿಸಲ್ಪಡುವ ನಿಯಮದಂತೆ ಅಧಿಕ ವರ್ಷವಾಗಿರಬೇಕಾದರೂ ಆ ವರ್ಷ ಫೆಬ್ರವರಿಯಲ್ಲಿ 28 ದಿನಗಳೇ ಇರುತ್ತವೆ. ಆದರೆ, ಈ ನಿಯಮ ಅನುಸರಿಸಿದಾಗ 400ನೆಯ ವರುಷ ತಲುಪುವಷ್ಟರಲ್ಲಿ ಮತ್ತೆ ಒಂದು ದಿನದ ಕೊರತೆ ಆಗಿ ಅದು ಅಧಿಕ ವರ್ಷವಾಗಬೇಕಾಗುತ್ತದೆ. ಹೀಗಾಗಿ, ಕ್ರಿ.ಶ. 100, 200, 300 ಅಧಿಕ ವರ್ಷಗಳಾಗಿರಲಿಲ್ಲ. ಆದರೆ ಕ್ರಿ.ಶ. 400 ಅಧಿಕ ವರ್ಷವಾಗಿತ್ತು. ಹಾಗೆಯೇ ಮುಂದಿನ ಕ್ರಿ.ಶ. 800, 1200 ,1600 ಇತ್ಯಾದಿ. ಅಂದರೆ ಶತಮಾನ ವರ್ಷಗಳು 4ರಿಂದ ನಿಶ್ಶೇಷವಾಗಿ ಭಾಗಿಸಲ್ಪಟ್ಟರೆ ಅಲ್ಲ, 400ರಿಂದ ನಿಶ್ಶೇಷವಾಗಿ ಭಾಗಿಸಲ್ಪಟ್ಟರೆ ಮಾತ್ರ ಅಧಿಕ ವರ್ಷ. ಇತ್ತೀಚೆಗೆ ನಾವು ಕಂಡ 2ಓ ಎಂಬ ಅಭಿಧಾನ ಹೊಂದಿದ್ದ 2000ನೆಯ ಇಸವಿ ಈ ನಿಯಮದಂತೆ ಅಧಿಕ ವರ್ಷವೇ ಆಗಿತ್ತು. ಆದರೆ, ಮುಂಬರುವ 2100ರ ಫೆಬ್ರವರಿಯಲ್ಲಿ ಇಪ್ಪತ್ತೆಂಟೇ ದಿನಗಳಿರುತ್ತವೆ.
ಆದರೆ, ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಕಾಲವನ್ನು ಗಣಿಸುವ ಚಾಂದ್ರಮಾನ ಪದ್ಧತಿಯ ಲೆಕ್ಕಾಚಾರ ಇಷ್ಟು ಸರಳ ಅಲ್ಲ. ಕಡಲಿನ ಉಬ್ಬರವಿಳಿತ ಹೊರತುಪಡಿಸಿ ಪ್ರಕೃತಿಯ ಎಲ್ಲ ಆಗು ಹೋಗುಗಳೂ ಸೂರ್ಯನ ಚಲನೆಯನ್ನು ಆಧರಿಸಿರುವುದರಿಂದ ಪ್ರಾಕೃತಿಕ ಘಟನೆಗಳೊಂದಿಗೆ ತಾಳಮೇಳ ಬೇಕಾದರೆ ಇಲ್ಲಿ ಹೆಚ್ಚು ಹೊಂದಾಣಿಕೆ ಮಾಡಬೇಕಾಗುತ್ತದೆ. ಭೂಮಿಯ ಸುತ್ತ ಚಂದ್ರನ ಚಲನೆಯೂ ಅರ್ಥೈಸಿಕೊಳ್ಳಲು ಕ್ಲಿಷ್ಟಕರವಾದದ್ದು.
ಚಂದ್ರನು 360 ಡಿಗ್ರಿ ಕ್ರಮಿಸಿ ಭೂಮಿಯ ಸುತ್ತ ಬರಲು ಸುಮಾರು 27.322 ದಿನಗಳು ಬೇಕಾಗುತ್ತವೆ. ಇದನ್ನು ಖಜಿಛಛ್ಟಿಛಿಚ್ಝ ತಿಂಗಳು ಅನ್ನುತ್ತಾರೆ. ಆದರೆ ಸೂರ್ಯನ ಸುತ್ತ 360 ಡಿಗ್ರಿ ಕ್ರಮಿಸಿ ಸುತ್ತು ಬರಲು 12 ತಿಂಗಳು ತೆಗೆದುಕೊಳ್ಳುವ ಭೂಮಿಯು ಈ ಒಂದು ತಿಂಗಳಲ್ಲಿ ತನ್ನನ್ನು ಸುತ್ತುವ ಚಂದ್ರನ ಸಮೇತ ತನ್ನ ಪಥದಲ್ಲಿ ಅಂದಾಜು 30 ಡಿಗ್ರಿ ಮುಂದೆ ಸಾಗಿರುತ್ತದೆ. ಆದ್ದರಿಂದ ತನ್ನ ಪೂರ್ಣ ಪ್ರದಕ್ಷಿಣೆ ಮುಗಿಸಲು ಚಂದ್ರ 30 ಡಿಗ್ರಿ ಹೆಚ್ಚು ಪಯಣಿಸಬೇಕಾಗುತ್ತದೆ. ಇದಕ್ಕೆ 2.208 ಹೆಚ್ಚುವರಿ ದಿನಗಳು ಬೇಕಾಗುತ್ತವೆ. ಅಂದರೆ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ಸ್ಥಾನಕ್ಕೆ ಬರಲು ಚಂದ್ರನಿಗೆ 29.53 ದಿನಗಳು ಬೇಕಾಗುತ್ತವೆ. ಇದನ್ನು ಖಢ್ಞಟಛಜ್ಚಿ ತಿಂಗಳು ಅನ್ನುತ್ತಾರೆ. ಈ ಲೆಕ್ಕದಲ್ಲಿ 12 ಚಾಂದ್ರಮಾನ ತಿಂಗಳುಗಳ ವರ್ಷಕ್ಕೆ ಸುಮಾರು 354 ದಿನಗಳಾಗುತ್ತವೆ. ಇದು ಗ್ರೆಗೊರಿಯನ್ ವರ್ಷಕ್ಕಿಂತ ಅಂದಾಜು 11 ದಿನ 6 ಗಂಟೆಗಳಷ್ಟು ಕಮ್ಮಿ. ಹೀಗೆ ಋತುಮಾನ ಚರ್ಯುಗಳಿಂದ ಸ್ವಲ್ಪ ಸ್ವಲ್ಪವೇ ಹಿಂದೆ ಸರಿಯುವ ಚಾಂದ್ರಮಾನ ಗಣನೆ 3 ವರ್ಷಗಳಲ್ಲಿ 33 ದಿನಗಳಷ್ಟು ಹಿಂದೆ ಬೀಳುತ್ತದೆ.
ಹೀಗಾದರೆ ಪ್ರಕೃತಿಯೊಂದಿಗಿನ ತಿಂಗಳು ಮತ್ತು ಋತುಗಳ ತಾಳ ಮೇಳ ತಪ್ಪುತ್ತದಲ್ಲವೆ? ಆದರೆ, ಹೀಗಾಗದಂತೆ ತಿಂಗಳುಗಳ ದಿನಗಳನ್ನು ಹೆಚ್ಚು ಮಾಡುವಂತಿಲ್ಲ. ಹುಣ್ಣಿಮೆಯ ದಿನ ಪೂರ್ಣ ಚಂದ್ರ ಕಾಣಿಸಲೇಬೇಕು, ಅಮಾವಾಸ್ಯೆಯ ದಿನ ಮರೆಯಾಗಲೇಬೇಕು. ಇದಕ್ಕಾಗಿ ಚಾಂದ್ರಮಾನದ ತಿಂಗಳುಗಳನ್ನು ಸೌರಮಾನದ ಸಂಕ್ರಾಂತಿಯೊಂದಿಗೆ ತಳುಕು ಹಾಕಲಾಯಿತು. ಸಾಮಾನ್ಯವಾಗಿ ಪ್ರತಿ ಚಾಂದ್ರಮಾನ ತಿಂಗಳಲ್ಲಿ ಒಂದು ಸಂಕ್ರಾಂತಿ ಇದ್ದು ಮೊದಲು ತಿಂಗಳ ಆರಂಭದಲ್ಲಿ ಇದ್ದದ್ದು ಸಮಯ ಕಳೆದಂತೆ ತಿಂಗಳ ಕೊನೆ ಭಾಗದತ್ತ ಸಾಗುತ್ತಾ ಹೋಗಿ ಮೂರನೆಯ ವರ್ಷದ ಒಂದು ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲ ಎಂದಾಗುತ್ತದೆ. ಈ ತಿಂಗಳನ್ನು ಆ ವರ್ಷದ ಅಧಿಕ ಮಾಸವೆಂದು ಘೊಷಿಸಿ ನಂತರದ ತಿಂಗಳನ್ನು ಅದೇ ಹೆಸರಿನ ನಿಜ ಮಾಸವೆಂದು ಪರಿಗಣಿಸಲಾಗುತ್ತದೆ. ವೇಗವಾಗಿ ನಡೆಯುವ ಪತಿ ಮತ್ತು ನಿಧಾನ ಗತಿಯ ಪತ್ನಿ ಜತೆಯಲ್ಲಿ ಸಾಗುವಾಗ ನಡುವಿನ ಅಂತರ ಬಹಳ ಜಾಸ್ತಿ ಆದರೆ ಪತ್ನಿ ಬರುವವರೆಗೆ ಪತಿ ನಿಲ್ಲುವ ರೀತಿಯ ವಿದ್ಯಮಾನ ಇದು.
ಶ್ರಾವಣವು ಅಧಿಕಮಾಸವಾಗಲಿರುವ ಈ ಶೋಭಕೃತ್ ಸಂವತ್ಸರದ ಸಂಕ್ರಾಂತಿ ವಿವರಗಳ ಪಟ್ಟಿಯಲ್ಲಿ ಕೃಷ್ಣ ಪಕ್ಷದಲ್ಲಿರುವ ಸಂಕ್ರಾಂತಿ ಬರುಬರುತ್ತಾ ಮುಂದಕ್ಕೆ ಜರುಗಿ ಶ್ರಾವಣದಲ್ಲಿ ಸಂಕ್ರಾಂತಿಯೇ ಇಲ್ಲದಂತಾದುದನ್ನು ಗಮನಿಸಬಹುದು. ಹೀಗಾಗಿ, ಇದು ಅಧಿಕ ಮಾಸವೆನಿಸುತ್ತದೆ. ಅಧಿಕ ಮಾಸದ ನಂತರ ಸಂಕ್ರಾಂತಿ ಶುಕ್ಲ ಪಕ್ಷಕ್ಕೆ ಸ್ಥಾನಾಂತರ ಹೊಂದುತ್ತದೆ. ಇದು ಹೀಗೇ ತಿಂಗಳಿಗೋ ಎರಡು ತಿಂಗಳಿಗೋ ಒಂದೊಂದು ತಿಥಿಯಷ್ಟು ಮುಂದೆ ಹೋಗುತ್ತಾ ಮತ್ತೆ ಮೂರು ವರ್ಷ ಆಗುವಾಗ ಇನ್ನೊಮ್ಮೆ ಅಧಿಕ ಮಾಸ ಬಂದು ಚಕ್ರ ಮುಂದುವರಿಯುತ್ತದೆ.
ಸೂರ್ಯ ಚಂದ್ರ ಗ್ರಹಣಗಳ ಕಾಲದಲ್ಲಿ ಪ್ರತ್ಯಕ್ಷವಾಗಿ ಒರೆ ಹಚ್ಚಲ್ಪಟ್ಟು ಶುದ್ಧ ಪುತ್ಥಳಿ ಚಿನ್ನ ಎಂದು ಸಾಬೀತಾಗುತ್ತಾ ಬಂದಿರುವ ಪಂಚಾಂಗ ರಚನೆಯ ಸಿದ್ಧ ಸೂತ್ರಗಳನ್ನು ರಚಿಸಿದ ನಮ್ಮ ಪೂರ್ವಜರ ಜ್ಞಾನಕ್ಕೆ ಮತ್ತು ಆ ಸೂತ್ರಗಳನ್ನು ಅರಗಿಸಿಕೊಂಡು ಆಧುನಿಕ ಸ್ಪರ್ಶದೊಂದಿಗೆ ಈಗಲೂ ಕರಾರುವಾಕ್ಕಾದ ಪಂಚಾಂಗಗಳನ್ನು ರಚಿಸುತ್ತಿರುವ ವಿದ್ವಾಂಸರ ಜಾಣ್ಮೆಗೆ ನಾವು ತಲೆ ಬಾಗಲೇಬೇಕು.
ಕ್ಷಯ ಮಾಸ:ಅಧಿಕ ಮಾಸ ಇದ್ದಂತೆ ಬಲು ಅಪರೂಪಕ್ಕೊಮ್ಮೆ ಕ್ಷಯ ಮಾಸ ಎಂಬ ವಿದ್ಯಮಾನವೂ ಘಟಿಸುವುದುಂಟು. ಒಂದು ಚಾಂದ್ರಮಾನ ಮಾಸದಲ್ಲಿ ಒಂದೂ ಸಂಕ್ರಾಂತಿ ಇಲ್ಲದಿದ್ದರೆ ಅದು ಅಧಿಕ ಮಾಸವಾಗುವಂತೆ ಒಂದು ತಿಂಗಳಲ್ಲಿ ಎರಡು ಸಂಕ್ರಾಂತಿಗಳು ಬಂದರೆ ಅದು ಕ್ಷಯ ಮಾಸವೆನ್ನಿಸಿ ಅದನ್ನು ನಂತರದ ತಿಂಗಳಿನೊಂದಿಗೆ ವಿಲೀನಗೊಳಿಸಲಾಗುತ್ತದೆ. 1963-64ರ ಶೋಭಕೃತ್ ಸಂವತ್ಸರದಲ್ಲಿ ಹೀಗಾಗಿತ್ತು. ಆ ವರ್ಷ ಮಾರ್ಗಶಿರ ಮಾಸವೇ ಇರಲಿಲ್ಲ. 1982-83ನೇ ಸಾಲಿನ ದುಂದುಭಿ ಸಂವತ್ಸರದಲ್ಲೂ ಪುಷ್ಯ ಮಾಸ ಕ್ಷಯವಾಗಿತ್ತು. ಮುಂದಿನ ಕ್ಷಯ ಮಾಸ 2124ನೇ ಇಸವಿಯಲ್ಲಂತೆ.
ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಮುಂದುವರಿಕೆ!; ಇಲ್ಲಿದೆ ವಿವರ..
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four − 3 =
Remember me
