ಬೆಂಗಳೂರು:ಡ್ರಗ್ಸ್​ ಜಾಲ ಬಗೆದಷ್ಟೂ ಆಳವಾಗುತ್ತಿದೆ. ಸ್ಯಾಂಡಲ್​ವುಡ್​ ನಟಿ ರಾಗಿಣಿ ಈಗಾಗಲೇ ಅರೆಸ್ಟ್​ ಆಗಿದ್ದಾರೆ. ಹಾಗೇ ಸಿಸಿಬಿ A-1, A-2 ಎಂದು ಆರೋಪಿಗಳ ಪಟ್ಟಿಯನ್ನು ಮಾಡಿದ್ದು, ಅದರಲ್ಲಿ A 6(ಆರೋಪಿ-6) ಆದಿತ್ಯ ಆಳ್ವ.
ಡ್ರಗ್ಸ್​ ಜಾಲದಲ್ಲಿ ಪ್ರಭಾವಿ ರಾಜಕಾರಣಿಗಳ ಮಕ್ಕಳೂ ಸೇರಿದ್ದಾರೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಅದಕ್ಕೀಗ ಸಾಕ್ಷಿಯೆಂಬಂತೆ ಆದಿತ್ಯ ಆಳ್ವ ಹೆಸರು ಕೇಳಿಬಂದಿದೆ. ಈ ಆದಿತ್ಯ ಆಳ್ವ, ಮಾಜಿ ಸಚಿವ, ದಿವಂಗತ ಜೀವರಾಜ್​ ಆಳ್ವ-ನಂದಿನಿ ಆಳ್ವ ಅವರ ಪುತ್ರ. ಹಾಗೇ ಬಾಲಿವುಡ್​ ನಟ ವಿವೇಕ್​ ಓಬೆರಾಯ್​ ಅವರ ಪತ್ನಿಯ ತಮ್ಮ. ಅಂದ್ರೆ ಮೈದುನ.
ಈತನ ಸ್ನೇಹಿತರೂ ಡ್ರಗ್ಸ್​ ಸಪ್ಲೈ, ಸೇವನೆಯಲ್ಲಿ ಪಾಲುದಾರರಾಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಎಫ್​ಐಆರ್​ನಲ್ಲಿ ಸದ್ಯ ಆದಿತ್ಯ ಹೆಸರು ಉಲ್ಲೇಖವಾಗಿದೆ. ಆದಿತ್ಯ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಸಿಸಿಬಿ ಮುಂದಾಗಿದೆ.
VIDEO: ವೈರಲ್ ಆಗಿದೆ ಪೀಯುಷ್ ಚಾವ್ಲ ಎಸೆತದಲ್ಲಿ ಧೋನಿ ಸಿಡಿಸಿದ ಸಿಕ್ಸರ್…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
