ಬೆಂಗಳೂರು:ಕಾಮಗಾರಿ ಠೇವಣಿಗೆ ವಂತಿಗೆಯಡಿ ಕೆಲಸಗಳ ನಿರ್ವಹಣೆ ಏಕರೂಪಗೊಳಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆಎನ್‌ಎನ್‌ಎಲ್) 19 ಅಂಶಗಳ ಮಾರ್ಗಸೂಚಿ ಹೊರಡಿಸಿದೆ.
ವಿವಿಧ ಇಲಾಖೆ, ಸಂಸ್ಥೆಗಳು ತಮಗೆ ಲಭ್ಯ ಅನುದಾನವನ್ನು ಠೇವಣಿ ವಂತಿಗೆ ರೂಪದಲ್ಲಿ ನಿಗಮಕ್ಕೆ ನೀಡಿ, ವಿವಿಧ ಕಾಮಗಾರಿಗಳ ಅನುಷ್ಠಾನ ಹಾಗೂ ನಿರ್ವಹಣೆಗೆ ಕೋರಿಕೆ ಸಲ್ಲಿಸುತ್ತವೆ.
ಅಲ್ಲದೆ, ಪ್ರಕೃತಿ ವಿಕೋಪ ಮತ್ತು ತುರ್ತು ಕಾಮಗಾರಿ ಸಂದರ್ಭದಲ್ಲಿ ಬೇರೆ ಇಲಾಖೆಗಳ ಅಪೇಕ್ಷೆ ಪ್ರಕಾರ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು, ಈ ಕಾಮಗಾರಿಗಳ ನಿರ್ವಹಣೆಯಲ್ಲಿ ಏಕರೂಪತೆಗೆ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇತರೆ ಇಲಾಖೆ/ ಸಂಸ್ಥೆಗಳು ಅನುದಾನ ನೀಡಿ ಕಾಮಗಾರಿ ನಿರ್ವಹಣೆಗೆ ಕೋರಿದ ಸಂದರ್ಭದಲ್ಲಿ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿದ ಅಂಶ ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿಗಮದ ವಿವಿಧ ಶ್ರೇಣಿ ಇಂಜಿನಿಯರ್‌ಗಳು, ಅಧಿಕಾರಿಗಳಿಗೆ ಎಂಡಿ ಸೂಚಿಸಿದ್ದಾರೆ.
ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿದ ಅಂಶಗಳ ಪ್ರಕಾರ ಸಂಬಂಧಿಸಿದ ಇಲಾಖೆಗಳೊಡನೆ ಕರಾರು ಮಾಡಿಕೊಳ್ಳಬೇಕೆಂಬ ನಿಬಂಧನೆ ವಿಧಿಸಲಾಗಿದೆ.
ಕಾಮಗಾರಿ ಅನುಷ್ಠಾನದಲ್ಲಿ ಮೂಲ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿ ಗುತ್ತಿಗೆ ಶೇಕಡ ವರ್ಕ್‌ಸ್ಲಿಪ್ ಹಾಗೂ ಎಐಆರ್‌ಎಲ್ ಉಂಟಾದರೆ ಆಗುವ ಹೆಚ್ಚುವರಿ ಮೊತ್ತಕ್ಕೆ ಉಪಯೋಗಿ ಇಲಾಖೆಯ ಅನುಮೋದನೆ ಪಡೆಯುವುದು ಕಡ್ಡಾಯ.
ಠೇವಣಿ ವಂತಿಗೆ ಕಾಮಗಾರಿಗಳಿಗೆ ಸಂಬಂಧಿಸಿದ ಇಲಾಖೆ/ ಸಂಸ್ಥೆಗಳಿಂದ ಆಡಳಿತಾತ್ಮಕ ಅನುಮತಿ ಪಡೆಯುವುದು ಕಡ್ಡಾಯ. ಯಾವುದೇ ಅಪೂರ್ಣ ಅನುದಾನದ ಕಾಮಗಾರಿಗಳನ್ನು ನಿಗಮವು ಕೈಗೊಳ್ಳುವಂತಿಲ್ಲ.
ಕಾರ್ಯಗತಗೊಳಿಸಬೇಕಾದ ಕಾಮಗಾರಿಗಳ ಸ್ವರೂಪ ಮತ್ತು ಅಂದಾಜು ಪಟ್ಟಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವುದು ಸೇರಿ ಒಟ್ಟು 19 ಅಂಶಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
