ಮಂಗಳೂರು:ಚಹಾ ಪ್ರಿಯರೇ ಎಚ್ಚರ! ಕಡಿಮೆ ದರದಲ್ಲಿ ಕಲಬೆರಕೆ ಚಹಾ ಪುಡಿಯನ್ನು ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಕಡಿಮೆ ದರ, ಆಕರ್ಷಕ ಬಣ್ಣಕ್ಕೆ ಮೈಮರೆತು ಅನೇಕ ಹೋಟೆಲ್, ಕ್ಯಾಂಟೀನ್ ಮಾಲೀಕರು ಇದನ್ನು ಖರೀದಿಸುತ್ತಾರೆ. ಈ ಕಳಪೆ ಚಹಾ ಪುಡಿ ವಹಿವಾಟು ನ್ಯಾಯಯುತ ವಾಗಿ ಚಹಾ ಪುಡಿ ವ್ಯಾಪಾರ ಮಾಡುವವರಿಗೆ ಹೊಡೆತ ನೀಡಿದೆ.
ಎಲ್ಲೆಲ್ಲಿದೆ ದಂಧೆ?:ತಮಿಳುನಾಡಿನ ವಿರುಧುನಗರದಿಂದ ರಾಜ್ಯಕ್ಕೆ ನಕಲಿ ಟೀಪುಡಿ ಪೂರೈಕೆಯಾಗುತ್ತದೆ. ಬೆಂಗ ಳೂರು ಕಡೆಯಿಂದ ಹಲವು ಬ್ರ್ಯಾಂಡ್ ಹೆಸರಿನಲ್ಲಿ ಕಲಬೆರಕೆ ಟೀ ಪೌಡರ್ ಕರಾವಳಿಗೆ ಬರುತ್ತದೆ. ಉಡುಪಿ, ದಕ್ಷಿಣ ಕನ್ನಡದ ಬಂಟ್ವಾಳ, ವಿಟ್ಲ, ಕೇರಳದ ಗಡಿಭಾಗಗಳಲ್ಲಿ ವಿತರಣೆಯಾಗುತ್ತಿದೆ. ಆಕರ್ಷಕ ಹೆಸರುಗಳಲ್ಲಿ ಲಭ್ಯವಾಗುತ್ತಿವೆ. ಹಿಂದೆ ಸಣ್ಣ ಪ್ರಮಾಣದಲ್ಲಷ್ಟೇ ಅಲ್ಲಲ್ಲಿ ವಿತರಣೆ ಯಾಗುತ್ತಿತ್ತು. ಇತ್ತೀಚೆಗೆ 6 ತಿಂಗಳಿಂದ ಬೃಹತ್ ಪ್ರಮಾಣದ ದಂಧೆಯಾಗಿ ಮಾರ್ಪಡುತ್ತಿದೆ ಎನ್ನುತ್ತವೆ ಮೂಲಗಳು. ಈ ರೀತಿಯ ಕಳಪೆ ಟೀ ಪುಡಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಸರಬರಾಜಾಗುತ್ತಿರುವ ಶಂಕೆ ಇದೆ.
ಕಂಪನಿ ಲೇಬಲ್ ಹಾಕಿದ:ವ್ಯಾನ್​ಗಳಲ್ಲಿ ಇಂತಹ ಚಹಾ ಪುಡಿ ಮಾರಾಟ ಮಾಡುವುದಿಲ್ಲ. ಸಬ್ ವಿತರಕರ ಮೂಲಕ ಬೇರೆ ಆಹಾರವಸ್ತುಗಳ ಲೈನ್​ಸೇಲ್ ಜತೆಯಲ್ಲೇ ಈ ಟೀ ಪೌಡರ್ ಪೊಟ್ಟಣಗಳು ಸಣ್ಣಪುಟ್ಟ ಹೋಟೆಲ್ ಸೇರುತ್ತವೆ. ಅಂಗಡಿಗಳಿಗೆ ಇವು ವಿತರಣೆಯಾಗುವುದು ಕಡಿಮೆ. ಯಾಕೆಂದರೆ ಜನರು ಇದರಲ್ಲಿರುವ ಕಲಬೆರಕೆ ವಿಚಾರ ಅರಿತುಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಕಡಿಮೆ ದರದಲ್ಲಿ ಕಲರ್​ಫುಲ್ ಟೀ ಪಡೆಯುವ ಹಂಬಲದಲ್ಲಿ ಲಾಭದ ಉದ್ದೇಶದ ಕೆಲ ಹೋಟೆಲ್, ಕ್ಯಾಂಟೀನ್​ಗಳೇ ಇಂತಹ ಕಲಬೆರಕೆ ಟೀ ವಿತರಕರ ಟಾರ್ಗೆಟ್.
ಬಣ್ಣ ಸೇರಿಸುವಂತಿಲ್ಲ:ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಚಹಾ ಪುಡಿಗೆ ಬಣ್ಣ ಸೇರಿಸುವಂತಿಲ್ಲ. ಅಸಲಿ ಚಹಾ ಪುಡಿಯನ್ನು ತಣ್ಣೀರಿಗೆ ಹಾಕಿ ನೋಡಿದರೆ ಅದು ಬೇಗನೆ ಬಣ್ಣ ಬಿಡಲಾರದು. ಚಹಾ ಪುಡಿಗೆ ನೀರು ಮಿಶ್ರಗೊಳಿಸಿ ಬಿಸಿ ಮಾಡಿದಾಗ ಮಾತ್ರ ನಸುವಾಗಿ ಬಣ್ಣ ಬಿಡುತ್ತದೆ. ಆದರೆ ಈ ಕಲಬೆರಕೆ ಚಹಾ ಪುಡಿಯನ್ನು ತಣ್ಣೀರಿಗೆ ಹಾಕಿ ನೋಡಿದರೆ, ತುಣುಕುಗಳು ಬಣ್ಣ ಕಳೆದುಕೊಳ್ಳುತ್ತಿರುವುದನ್ನು ಕಾಣಬಹುದು.
ಹೇಗೆ ಕಲಬೆರಕೆ?:ಸಾಮಾನ್ಯವಾಗಿ ಕೆ.ಜಿ.ಗೆ 170ರಿಂದ 180 ರೂ.ಗೆ ಚಹಾ ಪುಡಿ ವಿತರಣೆಯಾಗುತ್ತದೆ. ಆದರೆ ಕಲಬೆರಕೆ ಮಾಡುವವರು ಕಳಪೆ ಗುಣಮಟ್ಟದ ಟೀ ಪೌಡರನ್ನು ಕೆಲ ಎಸ್ಟೇಟ್​ಗಳಿಂದ 80-100 ರೂ.ಗೆ ಪಡೆಯುತ್ತಾರೆ, ಅದಕ್ಕೆ ಒಂದಷ್ಟು ಪರ್ಷಿಯನ್ ಬ್ಲೂ, ಬಿಸ್ಮಾರ್ಕ್ ಬ್ರೌನ್, ಇಂಡಿಗೋದಂತಹ ಬಣ್ಣ ಮಿಶ್ರ ಮಾಡುತ್ತಾರೆ. ಸೇವಿಸುವವರಿಗೆ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.
ಯಾವುದೇ ಆಹಾರ ವಸ್ತುವಿಗೆ ನಿಗದಿತ ಮಿತಿಗಿಂತ ಜಾಸ್ತಿ ಬಣ್ಣ, ರಾಸಾಯನಿಕ ಸೇರಿಸುವಂತಿಲ್ಲ, ಚಹಾ ಪುಡಿಯ ಕಲಬೆರಕೆ ಕುರಿತ ಮಾದರಿಗಳನ್ನು ಸಂಗ್ರಹಿಸಿ ನಮ್ಮ ಲ್ಯಾಬ್​ನಲ್ಲಿ ಪರೀಕ್ಷೆಗೊಳಪಡಿಸುತ್ತೇವೆ. ದೂರುಗಳಿದ್ದರೆ ನೀಡಬಹುದು.
|ಡಾ.ಪ್ರವೀಣ್, ಆಹಾರ ಸುರಕ್ಷತಾಧಿಕಾರಿ, ದ.ಕ ಜಿಲ್ಲೆ
ಈ ದಂಧೆಯ ಮಾಹಿತಿ ಪಡೆದ ‘ವಿಜಯವಾಣಿ’ ಕಲಬೆರಕೆ ಚಹಾ ಪೌಡರಿನ ವಾಸ್ತವ ಪರಿಶೀಲಿಸಿದೆ. ಗಾಜಿನ ಲೋಟಕ್ಕೆ ಈ ಕಳಪೆ ಚಹಾ ಪುಡಿ ಹಾಕಿ ಪರೀಕ್ಷಿಸಿದಾಗ ಕೆಲವೇ ಕ್ಷಣದಲ್ಲಿ ಪುಡಿಯ ತುಣುಕು ಬಣ್ಣ ಕಳೆದುಕೊಂಡವು. ಇನ್ನೊಮ್ಮೆ ಗುಣಮಟ್ಟದ ಚಹಾ ಪೌಡರ್ ಹಾಕಿದಾಗ ಬಣ್ಣ ಬದಲಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twenty =
Remember me
