ಚಿಕ್ಕಬಳ್ಳಾಪುರ: ರಾಜಕೀಯ ಪಕ್ಷಗಳಲ್ಲಿನ ನಾಯಕರ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಲಹೆ ನೀಡಿದ್ದಾರೆ. ಸುಖವಾಗಿ ಬಾಳುವುದನ್ನು ಬಿಟ್ಟು ನಾಯಕರಿಗಾಗಿ ನೀವು ಏಕೆ ಬಟ್ಟೆ ಹರಿದು ಹೊಡೆದುಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಪ್ರದೀಪ್ ಈಶ್ವರ್, ದೆಹಲಿಯಲ್ಲಿ ಡಾ ಕೆ.ಸುಧಾಕರ್ ಚೆನ್ನಾಗಿಯೇ ಇರುತ್ತಾರೆ. ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಬಾಳುತ್ತಾರೆ. ಇದರ ನಡುವೆ ಬೆಂಬಲಿಗರು ಮತ್ತು ಕಾರ್ಯಕರ್ತರು ಏಕೆ ಹೊಡೆದುಕೊಳ್ಳಬೇಕು? ಬಟ್ಟೆ ಹರಿದುಕೊಂಡ ರೀತಿಯಲ್ಲಿ ಏಕೆ ವರ್ತಿಸಬೇಕು? ಎಂದು ಪ್ರಶ್ನಿಸಿದ್ದಾರೆ. ನೆಮ್ಮದಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ನಾಯಕರು ಬಂದಾಗ ಜೈಕಾರ ಹಾಕಿ, ನಾಯಕರಿಗಾಗಿ, ಪಾರ್ಟಿಗಾಗಿ ಕೆಲಸ ಮಾಡಿ, ಬಳಿಕ ನಿಮ್ಮ ನಿಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ, ಹೆಂಡತಿ ಮಕ್ಕಳನ್ನು ನೋಡಿಕೊಳ್ಳಿ ಎಂದಿದ್ದಾರೆ.ಲೋಕಸಭಾ ಚುನಾವಣೆ ಫಲಿತಾಂಶದ ಘೋಷಣೆಯ ಬಳಿಕ ನನ್ನ ಮನೆಗೆ ಕಲ್ಲು ತೂರಿದ ಘಟನೆ ನಡೆಯಿತು. ನಕಲಿ ಲೆಟರ್ ಹೆಡ್‌ನಲ್ಲಿ ನನ್ನ ರಾಜೀನಾಮೆ ಸಲ್ಲಿಕೆಯ ಗೊಂದಲ ಸೃಷ್ಟಿಸಲಾಯಿತು. ಅಲ್ಲಲ್ಲಿ ಗಲಾಟೆಯ ಪ್ರಕರಣಗಳು ವರದಿಯಾದವು. ಆದರೂ ಪ್ರತಿಕ್ರಿಯಿಸಲು ಹೋಗಲಿಲ್ಲ. ತಾಳ್ಮೆಯನ್ನು ತೋರಲಾಯಿತು. ಹಾಗೆಯೇ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ತೆಗಳಲು ಬಿಡಲಿಲ್ಲ. ಒಂದು ವೇಳೆ ಪ್ರತಿಕ್ರಿಯೆ ತೋರಿದ್ದಲ್ಲಿ ಮತ್ತಷ್ಟು ಗಲಾಟೆಗಳಾಗುತ್ತಿದ್ದವು. ಇದರ ಅವಶ್ಯಕತೆ ಇಲ್ಲ ಎಂದಿದ್ದಾರೆ.ಎಂದಿಗೂ ಎದುರಾಳಿಗಳ ಪೈಕಿ ಯಾರನ್ನಾದರೂ ಟೀಕಿಸಲು ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಬಿಡುವುದಿಲ್ಲ. ಬದಲಿಗೆ ಟಾರ್ಗೆಟ್ ಮಾಡಿ, ಖುದ್ದು ನಾನೇ ಅಖಾಡಕ್ಕೆ ಇಳಿಯುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
