|ವೇಣುವಿನೋದ ಕೆ.ಎಸ್.ಮಂಗಳೂರು
ತಾಲಿಬಾನ್ ಆಡಳಿತ ಶುರುವಾದ ಬಳಿಕವೂ ಅಫ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯಕ್ಕೆ ಕಲಿಯಲು ಆಗಮಿಸುವ ಪ್ರಕ್ರಿಯೆ ಮುಂದುವರಿದಿದೆ. ಈ ಬಾರಿ ಮಂಗಳೂರು ವಿವಿ ವ್ಯಾಪ್ತಿಯ ಸ್ನಾತಕೋತ್ತರ ಪದವಿ, ಸ್ನಾತಕಪೂರ್ವ ಪದವಿ ಹಾಗೂ ಪಿಎಚ್.ಡಿಗಾಗಿ ಒಟ್ಟು 28 ಅಪ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ತಾಲಿಬಾನ್ ಆಡಳಿತದಿಂದಾಗಿ ಇವರೆಲ್ಲರೂ ಭಾರತದಲ್ಲೇ ಬಾಕಿಯಾಗಿದ್ದರು. ಇದರಲ್ಲಿ 12 ವಿದ್ಯಾರ್ಥಿಗಳು ಬೆಂಗಳೂರು ವಿವಿಯವರು. ಅಲ್ಲಿ ಪಿಎಚ್.ಡಿ ವೇಕೆನ್ಸಿ ಭರ್ತಿಯಾದ ಹಿನ್ನೆಲೆಯಲ್ಲಿ ಅವರನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿ (ಐಸಿಸಿಆರ್) ಹಾಗೂ ಯುಜಿಸಿ ಕೋರಿಕೆ ಮೇರೆಗೆ ಮಂಗಳೂರು ವಿವಿಯಲ್ಲಿ ಸೇರಿಸಿಕೊಳ್ಳಲಾಗಿದೆ.
ಈ ಬಗ್ಗೆ ವಿಜಯವಾಣಿಗೆ ವಿವರ ನೀಡಿದ ಮಂಗಳೂರು ವಿವಿ ಕುಲಪತಿ ಪೊ›.ಪಿ.ಎಸ್.ಯಡಪಡಿತ್ತಾಯ, ವಿವಿಯ ಧನಾತ್ಮಕ ವಾತಾವರಣ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಯುಜಿಸಿ ಕೇಳಿಕೊಂಡಿತ್ತು. ಇದಕ್ಕಾಗಿ ಯುಜಿಸಿ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆ ಮಾಡಿದೆ. ಅದರಂತೆ ಪ್ರತಿ ಪಿಎಚ್.ಡಿ ಮಾರ್ಗದರ್ಶಕರಿಗೆ ಇಬ್ಬರ ಬದಲು ನಾಲ್ವರನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ಬಾರಿ ಅಫ್ಘಾನಿಸ್ತಾನದ 21 ವಿದ್ಯಾರ್ಥಿಗಳನ್ನು ಪಿಎಚ್.ಡಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಮಂಗಳೂರು ವಿವಿಯಲ್ಲಿ ಅಪ್ಘಾನಿಸ್ತಾನದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 32ಕ್ಕೇರಿದೆ. ಯೆಮೆನ್ ಮೂಲದ 3, ಚೀನಾದ ಓರ್ವ ವಿದ್ಯಾರ್ಥಿ ಮಂಗಳೂರು ವಿವಿಯಲ್ಲಿ ಪ್ರವೇಶ ಪಡೆದಿದ್ದಾರೆ.
ವಿಶೇಷ ಅನುಮತಿ:ಪ್ಘಾನಿಸ್ತಾನದಲ್ಲಿ ತಾಲಿಬಾನಿ ಬಿಕ್ಕಟ್ಟು ಉಂಟಾದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನದ ಐಸಿಸಿಆರ್ ಭಾರತದಲ್ಲೇ ಕಲಿತ ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದು ವರಿಸಲು ಅವಕಾಶ ನೀಡಿದೆ. ಅದರಂತೆ ಮಂಗಳೂರು ವಿವಿಯಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಅರ್ಜಿ ಹಾಕಿದ್ದರು.
ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
