ಬೆಂಗಳೂರು:ಇಂದು ಮದರ್ಸ್​ ಡೇ.. ಹಲವರು ಇಂದು ತಮ್ಮ ಅಮ್ಮನೊಂದಿಗೆ ಈ ದಿನವನ್ನು ನಾನಾ ರೀತಿಯಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ರಾವ್ ಕೂಡ ಇಂದು ತಮ್ಮ ಅಮ್ಮನೊಂದಿಗೆ ಕೆಲ ಕ್ಷಣವನ್ನು ವಿಶೇಷವಾಗಿ ಕಳೆದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಭಾಸ್ಕರ್ ರಾವ್, ಈ ಸಲದ ಚುನಾವಣೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಕಾಂಗ್ರೆಸ್​ನ ಜಮೀರ್ ಅಹ್ಮದ್ ಖಾನ್ ಎದುರು 53,953 ಮತಗಳ ಅಂತರದಿಂದ ಸೋತಿದ್ದಾರೆ.
ಇದನ್ನೂ ಓದಿ:ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನವಾದ ಇಂದು ಅವರು ತಾಯಿಯ ಬಳಿಗೆ ತೆರಳಿ, ಫೋಟೋ ಸಮೇತ ಹೀಗೊಂದು ಬರಹ ಪೋಸ್ಟ್ ಮಾಡಿಕೊಂಡಿದ್ದಾರೆ. “ಚುನಾವಣಾ ಫಲಿತಾಂಶದ ನಂತರ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ… ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ, ತಾಯಿಯ ಆತ್ಮೀಯತೆ ಅಮೂಲ್ಯ.. ಅವಳು ನನಗೆ ಉತ್ತಮ ನಾಳೆಯ 🙏 ಭರವಸೆಯನ್ನು ತುಂಬುತ್ತಾಳೆ” ಎಂದು ಭಾಸ್ಕರ್ ರಾವ್​ ಹೇಳಿದ್ದಾರೆ.
Came to seek Mother’s blessing after Election Results… Even if the world rejects you, Mother’s warmth is priceless ..She fills me with hope for a great tomorrow 🙏pic.twitter.com/15m4JCn6Vo— Bhaskar Rao (@Nimmabhaskar22)May 14, 2023
Came to seek Mother’s blessing after Election Results… Even if the world rejects you, Mother’s warmth is priceless ..She fills me with hope for a great tomorrow 🙏pic.twitter.com/15m4JCn6Vo
ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
