ಬೆಂಗಳೂರು:ನಾಲ್ಕು ವರ್ಷಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳ ನಡೆಯಲಿದ್ದು, ಟಿಕೆಟ್​ ಖರೀದಿಗಾಗಿ ರಾಯಲ್​ ಚಾಲೆಂಜರ್ಸ್​ ಅಭಿಮಾನಿಗಳು ಟಿಕೆಟ್​ ಖರೀದಿಗಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಏಪ್ರಿಲ್ 2ರಂದು ಹಾಗೂ ಏಪ್ರಿಲ್​ 10 ರಂದು ನಡೆಯುವ ಎರಡು ಪಂದ್ಯಗಳಿಗಾಗಿ ಟಿಕೆಟ್ ಖರೀದಿಗೆ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಏಪ್ರಿಲ್ 2 ರಂದು ಆರ್​ಸಿಬಿ‌ ಹಾಗೂ ಮುಂಬೈ ನಡುವೆ ನಡೆಯಲಿದೆ ಮತ್ತು ಏಪ್ರಿಲ್ 10 ರಂದು ಆರ್​ಸಿಬಿ‌ ಹಾಗೂ ಲಖನೌ ನಡುವೆ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯದ ಟಿಕೆಟ್ ದರ 2300 ರೂ.ನಿಂದ ಆರಂಭವಾಗಲಿದೆ. ಆನ್​​​ಲೈನ್​ನಲ್ಲಿಯೂ ಟಿಕೆಟ್​ ದರ 2,300 ರೂ. ಇದೆ. ಬೆಳಗ್ಗೆ 10.30ರಿಂದ ಟಿಕೆಟ್ ವಿತರಣೆ ಆರಂಭವಾಗಲಿದೆ. ರಾತ್ರಿಯೇ ಸ್ಟೇಡಿಯಂ ಬಳಿ‌ ಬಂದು ಅಭಿಮಾನಿಗಳು ನಿಂತಿದ್ದಾರೆ. ಕಿಲೋಮೀಟರ್​ಗಟ್ಟಲೆ ಯುವಕ ಹಾಗೂ ಯುವತಿಯರು ಟಿಕೆಟ್​​ಗಾಗಿ ಸಾಲಿನಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಮಹಡಿಯಿಂದ ಬಿದ್ದು ಗಗನಸಖಿ ಸಾವು ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ
ಗೇಟ್ ನಂಬರ್ 18ರಲ್ಲಿ ಎರಡು ಪಂದ್ಯದ ಟಿಕೆಟ್ ಮಾರಾಟವಾಗಲಿದೆ. ಒಬ್ಬರಿಗೆ ಒಂದು ಟಿಕೆಟ್ ಮಾತ್ರ ವಿತರಣೆ ಮಾಡಲಾಗುತ್ತಿದೆ. ಬಹಳ ವರ್ಷಗಳ ನಂತರ ಇದೀಗ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳು ನಡೆಯಲಿದ್ದು, ಅಭಿಮಾನಿಗಳ ಪಾಲಿಗೆ ಖುಷಿ ತಂದಿದೆ.
ಅಭಿಮಾನಿಗಳ ಆಕ್ರೋಶಐಪಿಎಲ್​ ಮ್ಯಾನೇಜ್ಮೆಂಟ್ ಗೇಟ್​ ನಂಬರ್​ 18 ಅಥಾವ 19 ಅಂತ ಮಾಹಿತಿ ನೀಡಿದೆ. ಆದರೆ, ಟಿಕೆಟ್​ಗಾಗಿ ಸಾಲುಗಟ್ಟಿ ನಿಂತಿರುವ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ. ಗೇಟ್ 19ರಲ್ಲಿ ಏಪ್ರಿಲ್ 10ರಂದು ನಡೆಯುವ ಲಖನೌ ಮತ್ತು ಆರ್​ಸಿಬಿ ಪಂದ್ಯದ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಗೇಟ್ ನಂಬರ್ 18ರಲ್ಲಿ ಆರ್​ಸಿಬಿ-ಮುಂಬೈ ಪಂದ್ಯದ ಟಿಕೆಟ್‌ ನೀಡಲಾಗ್ತಿದೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ. ರಾತ್ರಿಯೇ ಬಂದು ಸಾಲಿನಲ್ಲಿ ನಿಂತಿದ್ದೇವೆ. ಈಗ ನಮಗೆ ಬೇಕಾದ ಪಂದ್ಯದ ಟಿಕೆಟ್ ನೀಡ್ತಿಲ್ಲ ಎಂದು ಆಯೋಜಕರ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.(ದಿಗ್ವಿಜಯ ನ್ಯೂಸ್)
ಮದ್ಯದ ಬಾಟಲಿ ಮೇಲೆ 10 ರೂ. ಹಸುವಿನ ಸೆಸ್​! ಈ ರಾಜ್ಯದ ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ

ಆಸ್ಕರ್​ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬೆನ್ನಲ್ಲೇ ಅಮಿತ್​ ಷಾ ಭೇಟಿ ಮಾಡಿದ ರಾಮ್​ ಚರಣ್!​

ಯೂಕ್ರೇನ್​-ರಷ್ಯಾ ಯುದ್ಧ: ವ್ಲಾಡಿಮಿರ್​ ಪುತಿನ್​ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದ ಐಸಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 15 =
Remember me
