ಬೆಂಗಳೂರು:ಲಾಕ್​ಡೌನ್ ನಿರ್ಬಂಧ ತೆರವುಗೊಳಿಸಿ ಕೇಂದ್ರ ಸರ್ಕಾರ ಜೂ.8ರಿಂದ ದೇವರ ದರ್ಶನಕ್ಕೆ ಅವಕಾಶ ನೀಡಿದ್ದು, ಕರೊನಾ ಹರಡುವಿಕೆ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವೂ ಧಾರ್ವಿುಕ ಕೇಂದ್ರಗಳಿಗೆ ಸೂಚನೆ ನೀಡಿದೆ.
ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಸೂಚಿತ ದೇವಾಲಯಗಳು-ಸಂಸ್ಥೆಗಳಲ್ಲಿ ಭಕ್ತರು- ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಎಲ್ಲ ದೇವಾಲಯಗಳಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಪ್ರತಿ ದಿನ ದೇವಾಲಯದ ಒಳ-ಹೊರ ಆವರಣಗಳಲ್ಲಿ ಸೋಂಕುನಿವಾರಕ ಸಿಂಪಡಿಸಬೇಕು. ದೇವಾಲಯಗಳಿಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯವಿದ್ದಲ್ಲಿ ದೇವಾಲಯದ ಆರ್ಥಿಕತೆ ಗಮನದಲ್ಲಿಟ್ಟುಕೊಂಡು 2 ತಿಂಗಳ ಅವಧಿಗೆ ನೇಮಿಸಿಕೊಳ್ಳಬಹುದು. ಹೆಚ್ಚುವರಿ ಸೆಕ್ಯುರಿಟಿ ಗಾರ್ಡ್​ಗಳ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸಬೇಕು. ದೇವಾಲಯದ ಅಧಿಕಾರಿ-ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಅರ್ಚಕರು, ಆಗಮಿಕರು, ಪರಿಚಾರಕರು ಮತ್ತಿತರ ಒಳಾಂಗಣ ಸಿಬ್ಬಂದಿ ದೇವಾಲಯದ ಒಳಾಂಗಣ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತರು ದೇವಾಲಯ ಪ್ರವೇಶಿಸುವ ದ್ವಾರಗಳಲ್ಲಿ ಸ್ಯಾನಿಟೈಸರ್ ನೀಡಬೇಕು ಮತ್ತು ಕಡ್ಡಾಯವಾಗಿ ದೇಹದ ಉಷ್ಣತೆ ತಪಾಸಣೆ ಮಾಡಬೇಕು. ದೇಹದ ಉಷ್ಣತೆ ಹೆಚ್ಚಾಗಿರುವುದು ಕಂಡುಬಂದಲ್ಲಿ ಅಂಥವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಮಾಸ್ಕ್ ಅಥವಾ ಬಾಯಿ-ಮೂಗು ಮುಚ್ಚುವಂತೆ ಕರವಸ್ತ್ರ ಕಡ್ಡಾಯವಾಗಿ ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸುವುದು. ಈ ಬಗ್ಗೆ ಸೂಚನಾ ಫಲಕದ ಮೂಲಕ ಭಕ್ತರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.
ದೇವಾಲಯಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ದೈಹಿಕ ಅಂತರ (1 ಮೀಟರ್) ಕಾಪಾಡುವ ಸಿಟ್ಟಿನಲ್ಲಿ ದೇವಾಲಯದಲ್ಲಿ ಅಗತ್ಯ ವ್ಯವಸ್ಥೆ ಮಾಡಬೇಕು. ದೇವಾಲಯದ ಶೌಚಾಲಯಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕು ಹಾಗೂ ಕೋವಿಡ್ ವೈರಾಣು ತಡೆಗಟ್ಟಲು ಅಗತ್ಯ ಕ್ರಮಗಳನ್ನು ದೇವಾಲಯದ ಅಧಿಕಾರಿಗಳು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಜೂ.15ರವರೆಗಿಲ್ಲ ಯಲ್ಲಮ್ಮ ದರ್ಶನ
ಬೆಳಗಾವಿ: ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಕರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಹೀಗಾಗಿ ಭಕ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜೂ. 15ರ ವರೆಗೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.
ಮಹಾಬಲೇಶ್ವರನ ದರ್ಶನ ಸದ್ಯಕ್ಕಿಲ್ಲ
ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ದರ್ಶನ ಇನ್ನಷ್ಟು ವಿಳಂಬ ಆಗುವ ಸಾಧ್ಯತೆ ಇದೆ. ಶ್ರೀರಾಮಚಂದ್ರಾಪುರ ಮಠದ ನಿರ್ವಹಣೆಯಲ್ಲಿರುವ ಮಂದಿರದ ಆಡಳಿತ ಮಂಡಳಿ ಭಕ್ತರ ಹಿತದೃಷ್ಟಿಯಿಂದ ಕರೊನಾ ಸಂಬಂಧದ ಎಲ್ಲ ಸುರಕ್ಷತಾ ಕ್ರಮಗಳ ತರುವಾಯ ಹಂತಹಂತವಾಗಿ ಮಂದಿರವನ್ನು ಭಕ್ತರಿಗೆ ಮುಕ್ತವಾಗಿಸುವ ಸಿದ್ಧತೆಯಲ್ಲಿದೆ. ಇದರಿಂದ ಜೂ.1ರಂದು ಮಂದಿರ ತೆರೆಯುವ ಸಾಧ್ಯತೆ ಕಡಿಮೆ ಇದೆ.
ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್, ಮಾಲ್ ‌ಓಪನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
