ಚಾಮರಾಜನಗರ:ರಾಜಕೀಯ ಅಸ್ತ್ರವಾಗಿ ಹೊರಹೊಮ್ಮಿದ್ದ ನಂದಿನಿ ಹಾಲಿನ ವಿಚಾರ ಇತರ ಕೆಲವು ವಿಚಾರಗಳ ಮಧ್ಯಪ್ರವೇಶದಿಂದ ಕಳೆದ ಕೆಲವು ದಿನಗಳಿಂದ ಹಿನ್ನೆಲೆಗೆ ಸರಿದಿತ್ತು. ಆದರೆ ಇದೀಗ ನಂದಿನಿ ಪರ ಪ್ರಿಯಾಂಕ ಗಾಂಧಿ ಬ್ಯಾಟಿಂಗ್ ಮಾಡಿದ್ದು, ಅದು ಮತ್ತೆ ಮುನ್ನೆಲೆಗೆ ಬಂದಿದೆ.
ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ನಂದಿನಿ ನಮ್ಮ ಹೆಮ್ಮೆ ಎಂದು ನಂದಿನಿ ಪಾರ್ಲರ್ ಒಂದರ ಮುಂದೆ ತಮ್ಮೊಂದಿಗೆ ಕಾಂಗ್ರೆಸ್ ನಾಯಕರು ನಿಂತಿದ್ದ ಫೋಟೋ ಟ್ವೀಟ್ ಮಾಡಿದ್ದರು. ಈಗ ಅವರ ಸಹೋದರಿ ಕೂಡ ನಂದಿನಿ ನಮ್ಮ ಹೆಮ್ಮೆ ಎನ್ನುವ ಮೂಲಕ ಅದನ್ನು ರಾಜಕೀಯ ಅಸ್ತ್ರವಾಗಿ ಮತ್ತೆ ಚಾಲ್ತಿಯಲ್ಲಿ ಇರಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ:ಮಗಳ ಮೃತದೇಹದ ಜತೆಗೆ ಐದು ದಿನಗಳನ್ನು ಕಳೆದ ತಾಯಿ!
ಕರ್ನಾಟಕದ ನಂದಿನಿ ನಮ್ಮದು, ಆದರೆ ಬಿಜೆಪಿಯವರು ಗುಜರಾತ್​ನ ಅಮುಲ್‌ ಹಾಲು ತರಲು ಹೊರಟಿದ್ದಾರೆ. ಯಾಕೆ ಎಂದು ಕೇಳಿದರೆ ಕರ್ನಾಟಕದಲ್ಲಿ ಹಾಲು ಕಡಿಮೆಯಾಗಿದೆ ಎನ್ನುತ್ತಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಹಾಲು ಹೆಚ್ಚಾಗಿ ಸರ್ಕಾರಿ ಶಾಲಾ ಮಕ್ಕಳಿಗೂ ಬಿಸಿಹಾಲು ಕೊಟ್ಟಿದ್ದೆವು. ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟಿದ್ದೆವು. ಆದರೆ ಈಗ ಗುಜರಾತಿ ಅಮುಲ್ ಹಾಲು ತಂದು ನಂದಿನಿಯನ್ನು ಮುಗಿಸಲು ಹೊರಟಿದ್ದಾರೆ ಎಂದು ಪ್ರಿಯಾಂಕ ಆರೋಪಿಸಿದರು. ಅಲ್ಲದೆ ನಾವು ಅಧಿಕಾರಕ್ಕೆ ಬಂದರೆ ನಂದಿನಿ ಸಂಸ್ಥೆ ಇನ್ನು ಗಟ್ಟಿಯಾಗಿ ಮಾಡುತ್ತೇವೆ ಎಂದರು.
Karnataka’s Pride – NANDINI is the best!pic.twitter.com/Ndez8finup— Rahul Gandhi (@RahulGandhi)April 16, 2023
Karnataka’s Pride – NANDINI is the best!pic.twitter.com/Ndez8finup
ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + one =
Remember me
