ಚಿತ್ರದುರ್ಗ:ನಗರದ ಖಾಸಗಿ ಆಸ್ಪತ್ರೆ ರೋಗಿಯೊಬ್ಬರಲ್ಲಿ ಚರ್ಮದ ಬ್ಲಾಕ್ ಫಂಗಸ್ ಕಾಣಿಸಿದ್ದ ಪ್ರಕರಣದ ಬೆನ್ನಲ್ಲೇ, ಚಿತ್ರದುರ್ಗದಲ್ಲಿ ರೋಗಿಯೊಬ್ಬರ ಕೆಳದವಡೆಯಲ್ಲಿ ಬ್ಲಾಕ್ ಫಂಗಸ್ ಇರುವುದನ್ನು ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯದ ವೈದ್ಯರು ಪತ್ತೆ ಮಾಡಿದ್ದಾರೆ.
ಸಾಮಾನ್ಯವಾಗಿ ಈ ಬ್ಲಾಕ್ ಫಂಗಸ್ ಮೇಲಿನ ದವಡೆಯಲ್ಲಿ ಕಾಣಿಸುತ್ತದೆ ಹಾಗೂ ಶೇ.3 ರೋಗಿಗಳಲ್ಲಿ ಮಾತ್ರ ಕೆಳದವಡೆಯಲ್ಲಿ ಈ ರೋಗ ಕಂಡು ಬರುತ್ತದೆ. ಹಲ್ಲು ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ತಪಾಸಣೆ ಮಾಡಿದ ಮಹಾವಿದ್ಯಾಲಯದ ಮುಖ ದವಡೆ ಮತ್ತು ಬಾಯಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ನಾಗರಾಜಪ್ಪ, ಡಾ.ತನ್ವೀರ್ ಅಹಮದ್ ಹಾಗೂ ಡಾ.ಮಧುಮತಿ ಪಾಟೀಲ್ ಅವರಿಗೆ, ರೋಗಿಯ ಕೆಳದವಡೆಯಲ್ಲಿ ಬ್ಲಾಕ್ ಫಂಗಸ್ ಇರುವುದು ಗೊತ್ತಾಗಿದೆ.
ಈ ಪ್ರಕರಣ ಚಿತ್ರದುರ್ಗದಲ್ಲಿ ಮೊದಲನೆಯದಾಗಿದ್ದು, ರೋಗಿಗೆ ವೈದ್ಯರ ತಂಡ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಗೌರಮ್ಮ ತಿಳಿಸಿದ್ದಾರೆ. ಕೋವಿಡ್ ನಂತರದಲ್ಲಿ ಕರ್ನಾಟಕದಲ್ಲಿ ಕೆಳದವಡೆಯಲ್ಲಿ ಈ ರೋಗದ ಒಂದೆರಡು ಪ್ರಕರಣಗಳು ಪತ್ತೆಯಾಗಿವೆ. ಆದರೆ ಚಿತ್ರದುರ್ಗದಲ್ಲಿ ಇದೆ ಮೊದಲನೆಯದೆಂದು ವೈದ್ಯರ ತಂಡದಲ್ಲಿದ್ದ ಡಾ.ಮಧುಮತಿ ಪಾಟೀಲ್ ತಿಳಿಸಿದ್ದಾರೆ.
ನಗರದ ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರಲ್ಲಿ ಕಳೆದ ಜೂ.1ರಂದು ಚರ್ಮದ ಬ್ಲಾಕ್ ಫಂಗಸ್ ರೋಗ ಇರುವುದನ್ನು ಅಲ್ಲಿಯ ವೈದ್ಯರು ಪತ್ತೆ ಹಚ್ಚಿದ್ದು, ಆ ಪ್ರಕರಣ ದೇಶದಲ್ಲೇ ಮೊದಲೆನ್ನಲಾಗಿತ್ತು.
ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
