ಕರಜಗಿ (ಕಲಬುರಗಿ):ರಾಜ್ಯ ಮಾತ್ರವಲ್ಲ ದೇಶದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​ ಬದ್ಧ ವೈರಿಗಳಂತಿವೆ. ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಆದರೆ, ಅಫಜಲಪುರ ತಾಲೂಕು ಪಂಚಾಯಿತಿ ಮಾತ್ರ ಇದಕ್ಕೆ ತದ್ವಿರುದ್ಧ.
ಈ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ದೋಸ್ತಿಯಾಗಿ ಅಧಿಕಾರಕ್ಕೇರಿವೆ. ಇದೀಗ ಬಿಜೆಪಿ ಪ್ರತಿನಿಧಿಸುವ ಅಧ್ಯಕ್ಷೆಯನ್ನು ಕಾಂಗ್ರೆಸ್​ ಉಪಾಧ್ಯಕ್ಷ ಮದುವೆಯಾಗಿದ್ದು, ತಾಪಂನಲ್ಲಿ ಇನ್ಮುಂದೆ ಪತಿ-ಪತ್ನಿ ದರ್ಬಾರ್​ ನಡೆಯಲಿದೆ.
ಅಫಜಲಪುರ ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ್​ ಜತೆ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಇಂದು(ಸೋಮವಾರ) ಸಪ್ತಪದಿ ತುಳಿದಿದ್ದಾರೆ. ಲಾಕ್​ಡೌನ್​ ಹಿನ್ನೆಲೆ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ಸರಳ ಮದುವೆ ಆಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರವೇ ದಾಪಂತ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿರಿಲೇಡೀಸ್ ಜತೆ ಸೆಕ್ಸ್ ಜಾಬ್​! ಕೆಲಸಕ್ಕೆ ಸೇರಿದ ಟೆಕ್ಕಿ ಕಥೆ ಏನಾಯ್ತು?
ತಾಪಂ ಅಧ್ಯಕ್ಷೆಯನ್ನು ಉಪಾಧ್ಯಕ್ಷ ವಿವಾಹವಾದ ಅಪರೂಪದ ಘಟನೆ ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’, ‘ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ’ ಎಂಬ ಮಾತನ್ನು ನೆನಪಿಸುತ್ತದೆ.
ಈ ಅಪರೂಪದ ಮದುವೆಗೆ ಮಾಶಾಳ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್​, ಪ್ರಮುಖರಾದ ತುಕಾರಾಮ ಪಾಟೀಲ್​, ಮಹಾದೇವ ಗೌಡ ಕರೂಟಿ, ಹಾಜಿಮಲಂಗ್​ ಮುತವಲಿ, ಮಲಿಕ್​ಸಾಬ್​ ಕೋರಬು, ಇರ್ಫಾನ್​ ಜಮಾದಾರ, ಗಿರಿಮಲ್ಲಯ್ಯ ಸ್ವಾಮಿ ಸಾಕ್ಷಿಯಾದರು.
ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × three =
Remember me
