ಬೆಂಗಳೂರು:ವಿವಿಧ ಬೇಡಿಕೆ ಮುಂದಿಟ್ಟು ಕೆಲವು ಶಾಸಕರು ಪ್ರತ್ಯೇಕ ಸಭೆ ನಡೆಸಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬೆನ್ನಿಗೇ ಹಿರಿಯ ಶಾಸಕ ಮುರುಗೇಶ್ ನಿರಾಣಿ, ರಾಮದಾಸ್ ಮತ್ತು ಉಮೇಶ್ ಕತ್ತಿ ಸಭೆ ನಡೆಸಿದ್ದಾರೆಂಬ ವಿಚಾರ ಆಡಳಿತ ಪಕ್ಷದಲ್ಲಿ ಸಂಚಲನ ಮೂಡಿಸಿತು.
ಈ ಬೆಳವಣಿಗೆಗೆ ಪೂರಕವಾಗಿ ಈ ಮೂವರು ಮುಖಂಡರು ಒಟ್ಟಿಗೆ ಕುಳಿತಿರುವ ಫೋಟೋ ಹರಿದಾಡಿದೆ. ಆದರೆ, ತಕ್ಷಣವೇ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ, ನಾನು ಮೊನ್ನೆ ನಡೆದ ಸಭೆಯಲ್ಲಿ ಭಾಗವಹಿಸಲಿಲ್ಲ. ಇದು 2 ತಿಂಗಳ ಹಿಂದೆ ನಡೆದ ಮಾತುಕತೆ. ಕರೊನಾ ಬರುವುದಕ್ಕೆ ಮೊದಲು ಈ ಮಾತುಕತೆ ನಡೆದಿದೆ. ನಾವೆಲ್ಲ ಸ್ನೇಹಿತರು, ಹೀಗಾಗಿ ರಾಮದಾಸ್ ಮತ್ತು ಕತ್ತಿಯವರು ನನ್ನ ನಿವಾಸಕ್ಕೆ ಬಂದಿದ್ದಾರೆ. ಇದು ಯಡಿಯೂರಪ್ಪ ವಿರುದ್ಧದ ಸಭೆಯಲ್ಲ ಎಂದು ಸ್ಪಷ್ಟಪಡಿಸಿದರು. ಮೊನ್ನೆಯ ಸಭೆಯಲ್ಲಿ ನಾನು ಭಾಗವಹಿಸಿದ್ದು ಸಾಬೀತಾದರೆ ರಾಜೀನಾಮೆ ಕೊಡಲು ಸಿದ್ಧ ಎಂದರು.
ಮೊನ್ನೆಯ ಸಭೆಯಲ್ಲಿ ಪಾಲ್ಗೊಂಡವರ ಪೈಕಿ ಒಬ್ಬರು ಫೋಟೋ ಹರಿದಾಡುವಂತೆ ಮಾಡಿರಬಹುದು. ಸರ್ಕಾರದಲ್ಲಿ ನಿರಂತರ ಗೊಂದಲ ಸೃಷ್ಟಿಸಿ ಚರ್ಚೆಯಲ್ಲಿರಬೇಕೆಂಬ ಯೋಜನೆ ಸಿದ್ಧವಾಗಿದೆ ಎಂಬ ಮಾತೂ ಬಿಜೆಪಿಯಲ್ಲೇ ಇವೆ. ಮುಂದಿನ ಬುಧವಾರ, ಗುರುವಾರ ಮತ್ತೊಮ್ಮೆ ಸಭೆ ಸೇರಲು ಅತೃಪ್ತರೆಲ್ಲ ದಿನ ನಿಗದಿ ಮಾಡಿಕೊಂಡಿದ್ದಾರೆ, ಮತ್ತಷ್ಟು ಅತೃಪ್ತರನ್ನು ಒಟ್ಟು ಮಾಡುವ ಬಗ್ಗೆಯೂ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
