ವಿಜಯಪುರ:ಕಳೆದ ಎರಡು ಮೂರು ದಿನಗಳಿಂದ ಸದ್ದು ಮಾಡುತ್ತಿರುವ ಭೂಕಂಪನದಿಂದಾಗಿ ವಿಜಯಪುರ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲಿ ಇಂದು ಕೂಡ ಭೂಕಂಪನ ಉಂಟಾಗಿದ್ದು, ಈಗಾಗಲೇ ಆತಂಕದಲ್ಲಿರುವ ಜನರಲ್ಲಿನ ನಡುಕವನ್ನು ಹೆಚ್ಚಿಸಿದೆ.
ಸೋಮವಾರ ಸಂಜೆ 4.26ರ ಸುಮಾರಿಗೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿದೆ. ಭೂಮಿಯ 10 ಕಿಲೋಮೀಟರ್​ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡಳಿತ ವರದಿ ನೀಡಿದೆ.
ಆ.20ರಂದು ಸಂಜೆ 8.16 ರ ಸುಮಾರಿಗೆ 3.5ರಷ್ಟು ತೀವ್ರತೆ ದಾಖಲಾಗಿತ್ತು. ಆ. 21ರಂದು ಸಹ ಭೂಮಿ ಕಂಪಿಸಿದ್ದು 3.1ರಷ್ಟು ತೀವ್ರತೆ ದಾಖಲಾಗಿತ್ತು. ಅಲ್ಲದೆ, ಕಳೆದ ತಿಂಗಳಲ್ಲಿ ಕೂಡ ಕಂಪನ ಉಂಟಾಗಿತ್ತು. ಮಾತ್ರವಲ್ಲ, 9 ತಿಂಗಳ ಹಿಂದೆಯೂ ಮತ್ತೆ ಮತ್ತೆ ಭೂಕಂಪ ಸಂಭವಿಸಿತ್ತು. ಹೀಗೆ ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಜನರು ಆತಂಕದಲ್ಲಿದ್ದಾರೆ.
ವಿಜಯಪುರದಲ್ಲಿ ಮತ್ತೆ ಭೂಕಂಪ; ಜನರಲ್ಲಿ ಮರುಕಳಿಸಿದ ಆತಂಕ..

ರಾಮಾಯಣ ಯಾತ್ರೆ ಎರಡನೇ ರೈಲು ರದ್ದು: ಕಾರಣವಿದು..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × four =
Remember me
