|ದೇವರಾಜ್ ಕನಕಪುರಬೆಂಗಳೂರು/ಭರತ್ ಶೆಟ್ಟಿಗಾರ್ಮಂಗಳೂರು
ದ್ವಿತೀಯ ಪಿಯು ಫಲಿತಾಂಶದಲ್ಲಿ ಹೆಚ್ಚಿನ ಅಂಕ ಬಂದಿದ್ದರೂ, 965 ವಿದ್ಯಾರ್ಥಿಗಳು ಇದನ್ನು ತಿರಸ್ಕರಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಇದರಲ್ಲಿ 631 ಹೊಸ ವಿದ್ಯಾರ್ಥಿಗಳು ಹಾಗೂ 284 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಫಲಿತಾಂಶ ತಿರಸ್ಕರಿಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಜು.30 ಕೊನೆಯ ದಿನವಾಗಿತ್ತು.
ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿದ್ದ ರಾಜ್ಯ ಸರ್ಕಾರ, ಪರೀಕ್ಷೆ ಇಲ್ಲದೆಯೇ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಿತ್ತು. ಇದಕ್ಕೆ ಪ್ರತ್ಯೇಕ ಫಾಮೂಲ ರಚಿಸಿತ್ತು. ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುನಲ್ಲಿ ತಲಾ ಶೇ.45 ಅಂಕಗಳು ಹಾಗೂ ದ್ವಿತೀಯ ಪಿಯು ಶೈಕ್ಷಣಿಕ ಚಟುವಟಿಕೆ ಶೇ.10 ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳು ಮತ್ತು ವಿಷಯವಾರು ಗರಿಷ್ಠ ಶೇ.5 ಕೃಪಾಂಕಗಳನ್ನು ನೀಡಿ ಫಲಿತಾಂಶ ನೀಡಿತ್ತು. ಆ.19ರಿಂದ ಸೆ.3ರವರೆಗೆ ಪರೀಕ್ಷೆ ನಡೆಸಲು ವೇಳಾಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.
ಫೇಲ್ ಆದ್ರೆ ಫೇಲ್:ಫಲಿತಾಂಶ ತೃಪ್ತಿಕರವಾಗಿಲ್ಲವೆಂದು ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಇಲಾಖೆ ಒಂದು ಸ್ಪಷ್ಟ ಸೂಚನೆ ನೀಡಿದೆ. ಇಲಾಖೆ ನೀಡಿರುವ ಫಲಿತಾಂಶ ತೃಪ್ತಿದಾಯಕ ಇಲ್ಲವೆಂದರೆ, ಮುಚ್ಚಳಿಕೆ ಬರೆದುಕೊಟ್ಟು ಆನಂತರ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಈ ರೀತಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಹಾಲಿ ನೀಡಿರುವ ಫಲಿತಾಂಶವನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ. ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದು ಅಂಕ ಪಡೆಯಬೇಕು. ಈ ಪರೀಕ್ಷೆಯಲ್ಲಿ ಎಷ್ಟು ಅಂಕಗಳಿಸುತ್ತಾರೋ ಅಷ್ಟು ಅಂಕಗಳನ್ನು ಮಾತ್ರ ಇಲಾಖೆ ನೀಡಲಿದೆ. ಫೇಲ್ ಆದರೂ ಫೇಲ್ ಅಷ್ಟೇ. ಪರೀಕ್ಷೆ ತೆಗೆದುಕೊಳ್ಳಲು ಬಯಸಿರುವ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ ಗಮನಿಸಿದಾಗ ಉತ್ತರ ಕರ್ನಾಟಕದ ಜಿಲ್ಲೆಗಳೇ ಹೆಚ್ಚಿವೆ. ಬಳ್ಳಾರಿ-297 ಮೊದಲ ಸ್ಥಾನದಲ್ಲಿದೆ. ಕಲಬುರಗಿ-168 ಹಾಗೂ ವಿಜಯಪುರ-96 ವಿದ್ಯಾರ್ಥಿಗಳಿದ್ದಾರೆ. ಇನ್ನೂ ಅತಿ ಕಡಿಮೆ ಎಂದಾಗ ಚಾಮರಾಜನಗರ-1, ಚಿಕ್ಕೋಡಿ-3, ಮಂಡ್ಯ-4 ಈ ರೀತಿ ಒಂದಂಕಿಗಳನ್ನು ಹೊಂದಿದೆ.
ಎಲ್ಲರಿಗೂ ಉತ್ತಮ ಅಂಕ:ಇಲಾಖೆ ಫಲಿತಾಂಶ ಬಹುತೇಕರಿಗೆ ಸಮಾಧಾನ ತಂದಿದೆ. 600ಕ್ಕೆ 600 ಅಂಕಗಳಿಸುವ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ 2,239ಕ್ಕೆ ಏರಿಕೆಯಾಗಿತ್ತು. 2021ರ ಪಿಯು ಪರೀಕ್ಷೆಗೆ 6,66,497 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಎಲ್ಲ ವಿದ್ಯಾರ್ಥಿಗಳಿಗೂ ಉತ್ತಮ ಅಂಕ ಲಭಿಸಿದೆ. ಅಲ್ಲದೆ, ಒಂದು ವೇಳೆ ಪರೀಕ್ಷೆ ಬರೆದು ಕಡಿಮೆ ಅಂಕ ಸಿಕ್ಕರೆ ಅದೇ ಅಂತಿಮ ಎನ್ನುವ ಸೂಚನೆ ಇರುವುದು ಹೆಚ್ಚಿನವರಲ್ಲಿ ಭಯಕ್ಕೆ ಕಾರಣವಾಗಿದೆ. ಮೇಲಾಗಿ, ಇನ್ನು ಸಿಇಟಿ, ನೀಟ್ ಮತ್ತಿತರ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕಿರುವುದರಿಂದ ಪಿಯು ಪರೀಕ್ಷೆ ಬರೆಯಲು ಮುಂದಾದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ಲೆಕ್ಕಾಚಾರದ ಕಾರಣವೂ ಇದೆ.
ಕೆಲವರ ನಿರೀಕ್ಷೆ ಹುಸಿ:ಎಸ್ಸೆಸ್ಸೆಲ್ಸಿವರೆಗೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿಗೆ ಉತ್ತರ ಬರೆದು ಉತ್ತೀರ್ಣರಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಯಲ್ಲಿ ವಿವರವಾಗಿ ಉತ್ತರ ಬರೆಯಬೇಕಾದ ಅನಿವಾವಾರ್ಯತೆ ಎದು ರಾಗುತ್ತದೆ. ಸಾಮಾನ್ಯವಾಗಿ ಪಿಯು ಪ್ರಥಮ ವರ್ಷದಲ್ಲಿ ಮೌಲ್ಯಮಾಪನ ಕಟ್ಟುನಿಟ್ಟಾಗಿರುತ್ತದೆ. ವಿದ್ಯಾರ್ಥಿಗಳು ಉದಾಸೀನ ಮಾಡಬಾರದೆಂದು ಕಡಿಮೆ ಅಂಕ ನೀಡಿರುತ್ತಾರೆ. ಆದರೆ ದ್ವಿತೀಯ ಪಿಯುಸಿಯಲ್ಲಿ ಅಂಕ ಉತ್ತಮ ಪಡಿಸಿಕೊಳ್ಳುತ್ತಾರೆ. ಅಂತಹ ಓದಿ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಇದ್ದವರು, ಕೆಲವು ವಿಷಯಗಳಲ್ಲಿ ಕಡಿಮೆ ಅಂಕ ಪಡೆದಿದ್ದಾರೆ. ಅಂತಹವರು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ ಎನ್ನುವುದು ಪಪೂ ಕಾಲೇಜು ಪ್ರಾಂಶುಪಾಲರೊಬ್ಬರ ಮಾತು.
ರಾಜ್ಯದಲ್ಲಿ 17,469 ಖಾಸಗಿ ವಿದ್ಯಾರ್ಥಿಗಳಿಗೆ ಆ.19ರಿಂದ ಪರೀಕ್ಷೆ ಆರಂಭವಾಗಲಿದ್ದು, ಇದೇ ವೇಳೆ ಫಲಿತಾಂಶ ತಿರಸ್ಕರಿಸಿ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಯಲಿದೆ.
|ಶೈಲಜಾ ಜಗದೀಶನ್ಉಪ ನಿರ್ದೇಶಕಿ, ಪರೀಕ್ಷಾ ವಿಭಾಗ, ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 7 =
Remember me
