ರಾಮನಗರ:ಇದು ರಾಜಧಾನಿ ಬೆಂಗಳೂರು ಮೈಸೂರು ನಡುವೆ ಸಂಚರಿಸುವವರು ಇನ್ನು ನಾಲ್ಕು ದಿನಗಳ ಕಾಲ ಗಮನದಲ್ಲಿ ಇರಿಸಿಕೊಳ್ಳಬೇಕಾದಂಥ ಸಂಗತಿ. ಅಷ್ಟಕ್ಕೂ ಈ ನಾಲ್ಕು ದಿನಗಳಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವುದಿದ್ದರೆ ಸೂಕ್ತ ಮುಂಜಾಗ್ರತೆ ವಹಿಸುವುದು ಒಳಿತು. ಈ ಕುರಿತು ರಾಮನಗರ ಎಸ್​ಪಿ ಅವರೇ ಮುನ್ನೆಚ್ಚರಿಕೆಯ ಮಾತನ್ನು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಉಂಟಾದಂಥ ಭಾರಿ ಮಳೆ-ಪ್ರವಾಹ ಮತ್ತೆ ಸಂಭವಿಸುವ ಸುಳಿವಿನ ಹಿನ್ನೆಲೆಯಲ್ಲಿ ಈ ಮುನ್ಸೂಚನೆಯನ್ನು ನೀಡಲಾಗಿದೆ. ನಾಳೆ ಅಂದರೆ ಭಾನುವಾರದಿಂದ ಬುಧವಾರದವರೆಗೆ ಈ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ.
ಸದ್ಯ ಮಳೆ ವಾತಾವರಣ ಇರದಿದ್ದರೂ ನಾಲ್ಕು ದಿನಗಳ ಹಿಂದೆ ಉಂಟಾಗಿದ್ದ ಪರಿಸ್ಥಿತಿ ಮುಂದಿನ ನಾಲ್ಕು ದಿನಗಳಲ್ಲಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರುಕಳಿಸುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮಾಹಿತಿ ನೀಡುವ ಜತೆಗೆ ಇತರ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನಾಳೆ ಭಾನುವಾರದಿಂದ ಬುಧವಾರದವರೆಗೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಸತತ ಎರಡು ಗಂಟೆ ಅತಿಯಾಗಿ ಮಳೆ ಬಂದರೆ ಮತ್ತೆ ಪ್ರವಾಹ ಉಂಟಾಗಬಹುದು. ಒಂದು ವೇಳೆ ಭಾರಿ ಮಳೆ ಬಂದರೆ ಬದಲಿ ಮಾರ್ಗ ಮಾಡುತ್ತೇವೆ. ಆಗ ಬೆಂಗಳೂರಿನಿಂದ ಬರುವವರು ಕನಕಪುರ ಹಾಗೂ ಕುಣಿಗಲ್ ಮಾರ್ಗವಾಗಿ ಸಂಚರಿಸಬೇಕಾಗುತ್ತದೆ. ಮೈಸೂರು ಕಡೆಯಿಂದ ಬರುವವರಿಗೆ ಮೈಸೂರು ಮತ್ತು ಮಂಡ್ಯ ಎಸ್​​ಪಿಯಿಂದ ಮಾಹಿತಿ ಪಡೆಯುತ್ತೇವೆ. ಈ ಮೂರು ಜಿಲ್ಲೆಗಳ ಎಸ್​ಪಿ ಕಚೇರಿ ಮಾಹಿತಿ ಮೇರೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್​ ಸಂತೋಷ್ ಬಾಬು ತಿಳಿಸಿದ್ದಾರೆ.
ಸ್ಮಶಾನ ಇಲ್ಲದ್ದಕ್ಕೆ ಗ್ರಾಮ ಪಂಚಾಯತ್ ಚಾವಡಿ ಮೇಲೇ ಸಂಸ್ಕಾರಕ್ಕೆ ಸಿದ್ಧತೆ; ಕೊನೇಲಿ ಆಗಿದ್ದೇ ಬೇರೆ..

ಕಾರು ಅಪಘಾತಕ್ಕೆ ದಂಪತಿ ಬಲಿ; ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಗನೂ ಇಂದು ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
