ಬೆಂಗಳೂರು:ಕರೊನಾ ಸೋಂಕಿನ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಕರೊನಾ ಸೋಂಕು ಹೆಚ್ಚಾಗಿರುವ ಕರ್ನಾಟಕವೂ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು. ಇದರ ಬೆನ್ನಿಗೆ ಮತ್ತೆ ಲೋಕಲ್ ಲಾಕ್​ಡೌನ್ ಶುರುವಾಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ನಿಜಕ್ಕೂ ಪ್ರಧಾನಿ ಹೇಳಿದ್ದೇನು?
ಕರ್ನಾಟಕಕ್ಕೆ ಕೊಟ್ಟ ಮೂರು ಸಲಹೆಗಳಿವು
1ಸೋಂಕು ಹೆಚ್ಚಿರುವ 9 ಜಿಲ್ಲೆಗಳಿಗೆ ವಿಶೇಷ ಯೋಜನೆ ರೂಪಿಸಿ, ನಿರ್ವಹಣೆಗಾಗಿ ಜಿಲ್ಲೆಗೆ ವಿಶೇಷ ಕಾರ್ಯಪಡೆ ರಚಿಸಿ, ಅಗತ್ಯವಿದ್ದರೆ ಲೋಕಲ್ ಲಾಕ್​ಡೌನ್ ಪರಿಗಣಿಸಿ
2
ಕರೊನಾ ನಿಯಂತ್ರಣಕ್ಕಾಗಿ ಎಸ್​ಡಿಆರ್​ಎಫ್ ನಿಧಿಯಲ್ಲಿ ಶೇ.50 ಅನುದಾನ ಬಳಸಿಕೊಳ್ಳಿ
3
ಸೋಂಕಿನ ನಿಖರ ಫಲಿತಾಂಶಕ್ಕಾಗಿ ಆರ್​ಟಿಪಿಸಿಆರ್ ಟೆಸ್ಟ್​ಗಳನ್ನು 3 ಪಟ್ಟು ಹೆಚ್ಚಿಸಿ
ಕರ್ನಾಟಕದಲ್ಲೂ ಒಂಭತ್ತು ಜಿಲ್ಲೆಗಳಲ್ಲಿ ಕರೋನಾ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಆ ಜಿಲ್ಲೆಗಳಲ್ಲಿ ಈಗ ತೆಗೆದುಕೊಂಡಿರುವ ಕ್ರಮಗಳು ಸಾಕೇ ಅಥವಾ ಇನ್ನೂ ಹೆಚ್ಚಿನ ನಿಗಾ ಅವಶ್ಯವೇ ಎಂಬಿತ್ಯಾದಿ ಸಂದೇಹಗಳನ್ನು ನಿವಾರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೂ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ನ್ಯಾಯಾಂಗ ತನಿಖೆಗೆ ನಕಾರ: ಕರೊನಾ ಉಪಕರಣ ಖರೀದಿ ಪ್ರಕರಣ
ಇದಲ್ಲದೇ ಏಳೂ ರಾಜ್ಯಗಳಿಗೆ ಅನ್ವಯವಾಗುವಂತೆ 12 ಮಾರ್ಗದರ್ಶಿ ಸೂತ್ರಗಳನ್ನು ಅವರು ನೀಡಿದ್ದಾರೆ.ಪೂರ್ಣವರದಿಗೆ ಈ ಕೊಂಡಿ ಕ್ಲಿಕ್ಕಿಸಿ–ಕರೊನಾ ನಿಯಂತ್ರಣಕ್ಕೆ ಮೋದಿ 12 ಸಲಹೆ
ಕರೊನಾ ಹೆಚ್ಚಿರುವ ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ನವದೆಹಲಿ ರಾಜ್ಯಗಳ ಮುಖ್ಯಮಂತ್ರಿ ಅವರೊಂದಿಗೆ ಮೋದಿ ವಿಡಿಯೋ ಸಂವಾದ ನಡೆಸಿದರು. ಕರೊನಾ ನಿಯಂತ್ರಣಕ್ಕೆ ಏನೇನು ಬಿಗಿ ಕ್ರಮ ಕೈಗೊಳ್ಳಬೇಕು, ಆರ್ಥಿಕ ಚಟುವಟಿಕೆಗಳನ್ನು ಬಿಗಿ ಕ್ರಮ ಹಾಗೂ ಆಸ್ಪತ್ರೆಗಳ ಖಾತ್ರಿ ಮಾಡಿಕೊಂಡು ಹಂತಹಂತವಾಗಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.
‘ಮಕ್ಕಳೇ ನಿಮಗೆ ಕಾರ್ ಗೆಲ್ಲೋ ಆಸೆ ಇದ್ಯಾ: 10, 12ನೇ ತರಗತಿಯಲ್ಲಿ ರಾಜ್ಯಕ್ಕೇ ಟಾಪರ್ ಆಗಿ!’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
