ರಾಯಚೂರು:ಸದ್ಯ ದೇಶದಲ್ಲಿ ಕರೊನಾ ಸೋಂಕು ಹೆಚ್ಚುತ್ತಿದೆ. ಹಾಗಾಗಿ ಮತ್ತೊಮ್ಮೆ ಲಾಕ್​ಡೌನ್​ ಮಾಡುವುದು ಅನಿವಾರ್ಯ ಎಂಬ ಮಾತೂ ಕೇಳಿಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್​ ಅನಿವಾರ್ಯ ಎಂದೂ ಹೇಳಲಾಗುತ್ತಿದೆ.
ಈ ಮಧ್ಯೆ ಇಂದು ಸರಣಿ ಟ್ವೀಟ್​ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಲಾಕ್​ಡೌನ್​ ತೆಗೆದ ಮೇಲೆ ಕರೊನಾ ಸೋಂಕು ಹೆಚ್ಚಾಗಿದೆ. ಹಾಗಾಗಿ ಇನ್ನೂ 20 ದಿನ ದೇಶದಲ್ಲಿ ಲಾಕ್​ಡೌನ್ ಹೇರಬೇಕು. ಜನರ ಆರೋಗ್ಯ ಮುಖ್ಯವೇ ಹೊರತು, ಆರ್ಥಿಕತೆ ಅಲ್ಲ ಎಂದಿದ್ದಾರೆ.
ಆದರೆ ಮತ್ತೆ ಲಾಕ್​ಡೌನ್​ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಹೇಳಿದ್ದಾರೆ. ಈ ಹಿಂದೆ ಸುಮಾರು ದಿನಗಳ ಕಾಲ ಲಾಕ್​​ಡೌನ್ ಆಗಿತ್ತು. ಅದಾದರೂ ಕರೊನಾ ಸೋಂಕು ಹೆಚ್ಚುತ್ತಲೇ ಇರುತ್ತದೆ. ಕರೊನಾ ತಡೆಗೆ ಲಾಕ್​ಡೌನ್​ಕ್ಕಿಂತ ಜನರ ಸಹಕಾರ ಮುಖ್ಯ ಎಂದಿದ್ದಾರೆ.ಇದನ್ನೂ ಓದಿ:ದೆಹಲಿ ಗಲಭೆಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದ ಜಾಮಿಯಾ ವಿವಿಯ ಗರ್ಭಿಣಿ ವಿದ್ಯಾರ್ಥಿನಿಗೆ ಜಾಮೀನು…
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಕಾನೂನು ಮಾಡಿ, ಲಾಕ್​ಡೌನ್​, ಸೀಲ್​ಡೌನ್ ಮಾಡುವುದರಿಂದ ಕರೊನಾ ತಡೆಯಲು ಸಾಧ್ಯವಿಲ್ಲ. ಜನರು ಕೂಡ ಸರ್ಕಾರದ ಜತೆಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ಕರೊನಾ ನಿಯಂತ್ರಣ ಆಗುತ್ತದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ದೇವಸ್ಥಾನದ ಎದುರು ನಿಂತಿದ್ದೇನೆ, ನಾನು ಒಂದು ರೂಪಾಯಿಯನ್ನು ಮುಟ್ಟಿಲ್ಲ: ಬಿ.ವೈ. ವಿಜಯೇಂದ್ರ ಪ್ರಮಾಣ
ಹಾಗೇ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಯವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದವರು ವಿರೋಧ ಮಾಡಬೇಕು ಎಂದು ಎಲ್ಲದನ್ನೂ ವಿರೋಧಿಸಬಾರದು. ಎಚ್​.ಡಿ.ಕುಮಾರಸ್ವಾಮಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅವರೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಎಂದು ಟಾಂಗ್​ ನೀಡಿದರು.ಲಾಕ್​ಡೌನ್ ಮಾಡಿದರೆ ನೌಕರರಿಗೆ ಸಂಬಳ ಹೇಗೆ ನೀಡಬೇಕು? ಪ್ರತಿತಿಂಗಳೂ 5-6 ಸಾವಿರ ಕೋಟಿ ರೂ.ಸಂಬಳ ನೀಡಬೇಕು. ಪ್ರತಿನಿತ್ಯ ಜನರ ಜೀವನ ನಡೆಯಬೇಕು. ಅದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
