ಬೆಂಗಳೂರು:ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಶುಕ್ರವಾರ ನಡೆದ ಎರಡನೇ ದಿನದ ಸಿಇಟಿಯಲ್ಲೂ ‘ಔಟ್ ಆಫ್ ಸಿಲಬಸ್’ ಪ್ರಶ್ನೆಗಳ ರಾದ್ಧಾಂತ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ಭೌತಶಾಸ್ತ್ರ ಪರೀಕ್ಷೆಯಲ್ಲಿ 10 ಪ್ರಶ್ನೆಗಳು ಹಾಗೂ ಮಧ್ಯಾಹ್ನ ರಸಾಯನಶಾಸ್ತ್ರದಲ್ಲಿ 12ರಿಂದ 15 ಪ್ರಶ್ನೆಗಳು ಪಠ್ಯಕ್ರಮದ ಹೊರತಾಗಿದ್ದವು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ರಸಾಯನಶಾಸ್ತ್ರದ 20 ಪ್ರಶ್ನೆಗಳು ಪಠ್ಯಕ್ರಮಕ್ಕೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ. ಈ ಮೂಲಕ ಒಟ್ಟು ಸಿಇಟಿಯಲ್ಲಿ ಜೀವಶಾಸ್ತ್ರ-10, ಗಣಿತ-11, ಭೌತಶಾಸ್ತ್ರ- 10 ಮತ್ತು ರಸಾಯನಶಾಸ್ತ್ರದಲ್ಲಿ 15 ಸೇರಿ ಒಟ್ಟು 46 ಪ್ರಶ್ನೆಗಳು ನಿಗದಿತ ಪಠ್ಯದಿಂದಾಚೆಗೆ ನೀಡಲಾಗಿದೆ ಎಂದು ದೂರಿದ್ದಾರೆ.
ಒಟ್ಟಾರೆ ಈ ಬಾರಿಯ ಸಿಇಟಿ ಅವ್ಯವಸ್ಥೆಯ ಗೂಡಾಗಿದೆ. ಪರೀಕ್ಷಾ ಪ್ರಾಧಿಕಾರದ ಎಡವಟ್ಟು ಮತ್ತು ನಿರ್ಲಕ್ಷ್ಯ ಮುಂದುವರಿದಿದೆ. 3.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನ್ಯಾಯಯುತ ಕ್ರಮ ಕೈಗೊಳ್ಳಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.
27ರವರೆಗೆ ಆಕ್ಷೇಪಣೆ ಅವಕಾಶ:ಶುಕ್ರವಾರ ನಡೆದ ಪರೀಕ್ಷೆಗಳಿಗೆ ಶೇ.92ರಷ್ಟು ಮಂದಿ ಹಾಜರಾಗಿದ್ದಾರೆ. ಏ.18 ಮತ್ತು 19ರಂದು ನಡೆದಿರುವ ಪರೀಕ್ಷೆಗಳಲ್ಲಿನ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಏ.27ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ವಿಷಯ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ನಮೂದಿಸಿ ಕೆಇಎಗೆ ಇ-ಮೇಲ್ ಉಞಚಜ್ಝಿ kಛಿಚ್ಠಜ್ಚಛಿಠಿ24ಃಜಞಚಜ್ಝಿ.ಟಞ ಕಳುಹಿಸಬೇಕು ಎಂದು ಕೆಇಎ ತಿಳಿಸಿದೆ.
ಪಿಯು ಪರೀಕ್ಷೆ ಆಧಾರದಲ್ಲಿ ರ್ಯಾಂಕ್ ನೀಡಿ:ಈ ಬಾರಿ ಗೊಂದಲದ ಗೂಡಾಗಿರುವ ಸಿಇಟಿಯನ್ನು ರದ್ದುಗೊಳಿಸಿ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಪರಿಗಣಿಸಿ ವೃತ್ತಿಪರ ಕೋರ್ಸ್​ಗಳ ಸೀಟು ಹಂಚಿಕೆ ಮಾಡಬೇಕು ಎಂದು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಮಿತಿ ಅಧ್ಯಕ್ಷ ಬಿ.ಎನ್. ಯೋಗಾನಂದ, ಪಠ್ಯಕ್ರಮ ಹೊರತುಪಡಿಸಿ ಕೇಳಲಾಗಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡಿದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಸಿಇಟಿಗೆ 3.5 ಲಕ್ಷ ವಿದ್ಯಾರ್ಥಿಗಳಿಂದ ತಲಾ 600 ರೂ.ಗಳಂತೆ ಅಂದಾಜು 21 ಕೋಟಿ ರೂ. ಶುಲ್ಕವಾಗಿ ಪಡೆಯಲಾಗಿದೆ. ಮರುಪರೀಕ್ಷೆ ನಡೆದರೆ ಈ ಹಣಕ್ಕೆ ಯಾರು ಹೊಣೆ? ಕೈ ಬಿಟ್ಟ ಪಠ್ಯಗಳ ಪ್ರಶ್ನೆ ಸೇರಿಸಿದ್ದು ಯಾರು? ಇದರಿಂದ ಯಾರಿಗೆ ಲಾಭ? ಎಂದು ಪ್ರಶ್ನಿಸಿದ್ದಾರೆ.
ಇಬ್ಬರು ವಿದ್ಯಾರ್ಥಿಗಳಿಗೆ ಒಂದೇ ನೋಂದಣಿ:ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಅರುಣ್ ಮತ್ತು ವೃಷಭ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಒಂದೇ ನೋಂದಣಿ ಸಂಖ್ಯೆ ನೀಡಿರುವುದರಲ್ಲಿ ಪ್ರಾಧಿಕಾರದ ತಪ್ಪೇನೂ ಇಲ್ಲ. ಇದರಲ್ಲಿ ಅರುಣ್ ಎಂಬ ವಿದ್ಯಾರ್ಥಿಯದ್ದೇ ಲೋಪ ವೆಂದು ಕಂಡುಬಂದಿದೆ. ಶಿವಮೊಗ್ಗದ ಅರುಣ್ ಮೊದಲು ಕಲಬುರಗಿ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡಿದ್ದ. ಬಳಿಕ ಕಾಲೇಜಿನ ಮೂಲಕವೇ ಪರೀಕ್ಷಾ ಕೇಂದ್ರ ಬದಲಾವಣೆಗೆ ಕೋರಿಕೆ ಸಲ್ಲಿಸಿ, ಶಿವಮೊಗ್ಗ ಕೇಂದ್ರ ಬಯಸಿದ್ದ. ಆದರೆ, ಹೊಸ ಪ್ರವೇಶಪತ್ರ ಡೌನ್​ಲೋಡ್ ಮಾಡಿಕೊಳ್ಳದೆ, ಹಳೇ ಪ್ರವೇಶಪತ್ರದೊಂದಿಗೆ ಕಲಬುರಗಿ ಕೇಂದ್ರಕ್ಕೆ ಹಾಜರಾಗಿದ್ದರಿಂದ ಗೊಂದಲ ಉಂಟಾಗಿದೆ ಎಂದಿದೆ.
ಕೆಇಎಗೆ ಪಠ್ಯ ಮಾಹಿತಿ ಸಲ್ಲಿಸಿದ ಪಿಯು ಇಲಾಖೆ:ಪಿಯು ಇಲಾಖೆ ಪ್ರಸ್ತುತ ಬಳಸುತ್ತಿರುವ ಎನ್​ಸಿಇಆರ್​ಟಿ ಪಠ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಿದೆ. ರಾಜ್ಯದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಎನ್​ಸಿಇಆರ್​ಟಿ ಪಠ್ಯಪುಸ್ತಕ ಅಳವಡಿಸಿಕೊಳ್ಳಲಾಗುತ್ತಿದೆ. ಹಾಗೆಯೇ ಎನ್​ಸಿಇಆರ್​ಟಿ ಕಾಲಕಾಲಕ್ಕೆ ಪರಿಷ್ಕರಿಸುವ ಪಠ್ಯಪುಸ್ತಕಗಳನ್ನೇ ಬೋಧಿಸಲಾಗುತ್ತಿದೆ. ಆದ್ದರಿಂದ 2023-24ನೇ ಸಾಲಿನ ಸಿಇಟಿಗೆ ಪರಿಷ್ಕೃತ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ನಡೆಸಲಾಗುತ್ತಿದೆಯೇ ಅಥವಾ ಹಿಂದಿನ ಸಾಲಿನ ಪೂರ್ಣ ಪ್ರಮಾಣದ ಪಠ್ಯವಸ್ತು ಆಧರಿಸಿ ನಡೆಸಲಾಗುತ್ತದೆಯೋ ಎಂಬುದಕ್ಕೆ ಸ್ಪಷ್ಟೀಕರಣ ನೀಡುವಂತೆ ಶಿಕ್ಷಣ ಇಲಾಖೆ ಕೆಇಎಗೆ ಮನವಿ ಮಾಡಿತ್ತು. ಪ್ರಸಕ್ತ ಸಿಇಟಿಗಾಗಿ ಕೆಇಎಗೆ 2023-24ನೇ ಸಾಲಿನ ಪಠ್ಯಕ್ರಮ ಒದಗಿಸಲಾಗಿತ್ತು ಎಂದು ಪಿಯು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಎಬಿವಿಪಿ ಹೋರಾಟ ಎಚ್ಚರಿಕೆ:ಸಿಇಟಿ ಅವಾಂತರಕ್ಕೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹೇಳಿದೆ.
ಸಮನ್ವಯ ಕೊರತೆ…:ಸಿಇಟಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಳವಡಿಸಿಕೊಂಡಿರುವ ಪಠ್ಯಕ್ರಮದ ಆಧಾರದಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೆಇಎ ಮತ್ತು ಪಿಯು ಇಲಾಖೆಯು ಪರೀಕ್ಷೆಗೆ ಮೊದಲು ಸಮಗ್ರವಾಗಿ ರ್ಚಚಿಸಬೇಕಿತ್ತು. ಆದರೆ, ಪತ್ರ ವ್ಯವಹಾರ ಹೊರತುಪಡಿಸಿ ಭೌತಿಕವಾಗಿ ಯಾವುದೇ ಸಭೆ ನಡೆಸಿಲ್ಲ. ಎರಡೂ ಇಲಾಖೆಗಳ ಸಮನ್ವಯ ಕೊರತೆ ಸಮಸ್ಯೆಗೆ ಕಾರಣವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಸಿಇಟಿ ಅವಾಂತರಕ್ಕೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕರೇ ನೇರ ಹೊಣೆಗಾರರಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಲು ಕಾರಣರಾಗಿದ್ದಾರೆ.
| ಬಿ.ಎನ್. ಯೋಗಾನಂದ, ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ
ನಾವು ಓದಿಕೊಂಡಿದ್ದೇ ಬೇರೆ, ಪರೀಕ್ಷೆಯಲ್ಲಿ ಬಂದಿದ್ದೇ ಬೇರೆ ಪ್ರಶ್ನೆಗಳು. ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ. ಗ್ರೇಸ್ ಮಾರ್ಕ್ಸ್ ಬದಲು ಔಟ್ ಆಫ್ ಸಿಲಬಸ್​ನಿಂದ ಬಂದಿರುವ ಪ್ರಶ್ನೆಗಳನ್ನು ತೆಗೆದುಹಾಕಿ ಫಲಿತಾಂಶ ನೀಡಬೇಕು.
| ವಿನಯಕುಮಾರ ಕಸಬೆಗೌಡರ್, ಸಿಇಟಿ ವಿದ್ಯಾರ್ಥಿ, ಕಲಬುರಗಿ
ರಾಜ್ಯದ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದಷ್ಟು ಈ ದೇಶದ ಯಾವ ರಾಜ್ಯದಲ್ಲೂ ಇಲ್ಲ. ಬಿಜೆಪಿಯವರು ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.
| ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಕೇಸ್​: ನಟ ಧ್ರುವ ಸರ್ಜಾ ಸರ್ಕಾರಕ್ಕೆ ಹೇಳಿದ ಕಿವಿ ಮಾತೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
