ತುಮಕೂರು:ಜಿಲ್ಲೆಯಲ್ಲಿ ಉಂಟಾಗಿದ್ದ ಫ್ಲೆಕ್ಸ್ ಸಂಘರ್ಷ ಮುಂದುವರಿದಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪುನಃ ವಿನಾಯಕ ದಾಮೋದರ್ ಸಾವರ್ಕರ್​ ಅವರ ಫ್ಲೆಕ್ಸ್ ಅಳವಡಿಸಿದ್ದಾರೆ. ಈ ಮೂಲಕ ಸಾವರ್ಕರ್​ ಫ್ಲೆಕ್ಸ್ ಕಿತ್ತುಹಾಕಿದ್ದ ಕಿಡಿಗೇಡಿಗಳಿಗೆ ಎದಿರೇಟು ನೀಡಿದ್ದಾರೆ.
ತುಮಕೂರಿನ ಅಶೋಕ್ ರಸ್ತೆಯಲ್ಲಿ ಮೊನ್ನೆ ರಾತ್ರಿ ಅಳವಡಿಸಲಾಗಿದ್ದ ವೀರ ಸಾವರ್ಕರ್ ಅವರ ಫ್ಲೆಕ್ಸ್​​ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ತುಮಕೂರು ಮಹಾನಗರ ಪಾಲಿಕೆಯಿಂದ ರಸ್ತೆ ಬದಿ ಅಳವಡಿಸಿದ್ದ ಫ್ಲೆಕ್ಸ್​ಗಳನ್ನು ತೆರವುಗೊಳಿಸಲಾಗಿತ್ತು.
ಆದರೆ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಇಂದು ತುಮಕೂರಿನ ಟೌನ್​ಹಾಲ್​ ಸರ್ಕಲ್​ನಲ್ಲಿರುವ ಗಣಪತಿ ದೇವಸ್ಥಾನದ ಎದುರು ಇಂದು ಸಂಜೆ ಸಾರ್ವಕರ್​ ಫ್ಲೆಕ್ಸ್ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.
ಅಜಿತ್ ದೋವಲ್​ಗೆ ಭದ್ರತಾ ವೈಫಲ್ಯ, ಎನ್​ಎಸ್​​ಎ ಸೆಕ್ಯುರಿಟಿಯಿಂದ ಮೂವರು ಕಮಾಂಡೋಗಳ ಎತ್ತಂಗಡಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
