ಉಡುಪಿ:ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಹಿಜಾಬ್ ಕಿಚ್ಚು ಹೊತ್ತಿಸಿದ ಅದೇ ಆರು ವಿದ್ಯಾರ್ಥಿನಿಯರು ಪುನಃ ತಕರಾರು ತೆಗೆದಿದ್ದಾರೆ. ಮಾತ್ರವಲ್ಲ ಅವರೊಂದಿಗೆ ನೂರಾರು ಜನರು ಸೇರಿದ್ದು, ಶಕ್ತಿಪ್ರದರ್ಶನ ಮಾಡುವಂಥ ಪ್ರಯತ್ನವೂ ನಡೆದಿದೆ.
ಸಮವಸ್ತ್ರವನ್ನು ಪಾಲಿಸುವಂತೆ ಸರ್ಕಾರ ಹೊರಡಿಸಿರುವ ಆದೇಶವನ್ನೇ ಧಿಕ್ಕರಿಸಿ ಈ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿದಿದ್ದು, ಇವರೊಂದಿಗೆ ಮುಸ್ಲಿಂ ಸಮುದಾಯದ ನೂರಾರು ಮಹಿಳೆಯರು ಕೂಡ ಜೊತೆಯಾಗಿದ್ದಾರೆ.
ಉಡುಪಿಯ ಅಜ್ಜರಕಾಡು ಮೈದಾನದ ಬಳಿ ಇರುವ ಹುತಾತ್ಮ ಸ್ಮಾರಕದಲ್ಲಿ ಸಿಎಫ್​ಐ ಸಂಘಟನೆಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ.
ಹಿಜಾಬ್​ ಧರಿಸಿ ತರಗತಿಗೆ ಹಾಜರಾಗುವ ವಿಚಾರವಾಗಿ ದೇಶವ್ಯಾಪಿ ಚಳುವಳಿ ನಡೆಸುತ್ತೇವೆ. ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂಬ ಆಶಾಭಾವನೆ ಇದೆ. ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಆದೇಶ ಬಂದರೂ ಹೋರಾಟ ಮುಂದುವರಿಯುತ್ತದೆ ಎಂದು ಸಿಎಫ್ಐ ಮುಖಂಡೆ ನಜ್ಮಾ ಫಾತಿಮಾ ಹೇಳಿದ್ದಾರೆ.
ಹಿಜಾಬ್​ ವಿವಾದ: ಕುಂದಾಪುರ ಶಾಸಕರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹೈಕೋರ್ಟ್​ಗೆ ಅರ್ಜಿ

ಕೇಸರಿ-ಹಿಜಾಬ್ ಸಂಘರ್ಷ: ಕುಂದಾಪುರಕ್ಕೆ ಹೈದರಾಬಾದ್ ಮುಸ್ಲಿಮರ ಆಗಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 14 =
Remember me
