ಸಿದ್ಧಾಪುರ:ಅನಾರೋಗ್ಯ ಒಮ್ಮೊಮ್ಮೆ ಎಂಥವರನ್ನೂ ಹೈರಾಣಾಗಿಸಿ ಬೇಸತ್ತು ಹೋಗುವಂತೆ ಮಾಡುತ್ತದೆ. ಅಂಥ ಅನಾರೋಗ್ಯದಿಂದಾಗಿ ವೃದ್ಧ ಗಂಡ-ಹೆಂಡತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಕಾನಗೋಡ ಗುತ್ತಿಮನೆಯಲ್ಲಿ ಸೋಮವಾರ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ಕೃಷಿ ಕೆಲಸ ಮಾಡುತ್ತಿದ್ದ ದತ್ತ ರಾಮಾ ಶೇಟ್​ (69) ಹಾಗೂ ಅವರ ಪತ್ನಿ ಪದ್ಮಾವತಿ ದತ್ತ ಶೇಟ್​ (58) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಮಲಗಿದ್ದ ಇಬ್ಬರೂ ಬೆಳಗ್ಗೆ ಮಕ್ಕಳು ಎದ್ದು ನೋಡುವ ಹೊತ್ತಿಗೆ ಶವವಾಗಿದ್ದರು. ಇಬ್ಬರೂ ಮನೆಯ ಜಗುಲಿಯ ತೊಲೆಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದರು.
ಗಂಡ-ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ವಯೋಸಹಜ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಮಂಡಿನೋವು ಮುಂತಾದವು ಇಬ್ಬರನ್ನೂ ಬಾಧಿಸುತ್ತಿದ್ದವು. ಅದರಿಂದ ಬೇಸತ್ತಿದ್ದ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಮಕ್ಕಳು ಹೇಳಿಕೆ ನೀಡಿದ್ದಾರೆ. ಸಿದ್ಧಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮದ್ವೆಗೆ ಮನೆಯವ್ರು ಒಪ್ಲಿಲ್ಲ ಅಂತ ಪ್ರಿಯಕರ ನೇಣು ಹಾಕಿಕೊಂಡ; ಪ್ರೇಮಿ ಸತ್ತಿದ್ದಕ್ಕೆ ಊಟ ಬಿಟ್ಟ ಪ್ರೇಯಸಿ ಬೆಂಕಿ ಹಾಕಿಕೊಂಡು ಸತ್ತಳು..!

ಚಿಕ್ಕವಯಸ್ಸಲ್ಲೇ ಬಹಳ ಎತ್ತರಕ್ಕೇರಿದ್ದಾಳೆ ಈ ಬಾಲಕಿ!; ಏಷ್ಯಾದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಈಕೆ ಈಗ ಸಾಧಕಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
