ಬೆಂಗಳೂರು:ಬೆಂಗಳೂರಿನ ತೀವ್ರ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದಲ್ಲಿ ಕಾರು ತೊಳೆಯಲು, ತೋಟಗಾರಿಕೆ, ನಿರ್ಮಾಣ, ನೀರಿನ ಕಾರಂಜಿ, ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕುಡಿಯುವ ನೀರಿನ ಬಳಕೆಯನ್ನು ಶುಕ್ರವಾರ ನಿಷೇಧಿಸಿದೆ.
ಈ ಆದೇಶ ಉಲ್ಲಂಘಿಸಿದಲ್ಲಿ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ನಗರದಲ್ಲಿ ಸಾವಿರಾರು ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿದೆ.
ಕಳೆದ 2-3 ವಾರಗಳಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್ ನೀರಿನ ಬೆಲೆಗಳು ಮೂರು ಪಟ್ಟು ಹೆಚ್ಚಾಗಿದೆ. ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಬೆಂಗಳೂರು ನಗರ ಜಿಲ್ಲಾಡಳಿತವು ಗುರುವಾರ ಪ್ರತಿ ಲೋಡ್‌ಗೆ ಸರಬರಾಜು ಮಾಡುವ ಸಾಮರ್ಥ್ಯ ಮತ್ತು ದೂರದ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಿದೆ.
ಈ ಹೊಸ ಕಾರ್ಡ್ ದರ (ಇದು ಜಿಎಸ್‌ಟಿಯನ್ನು ಒಳಗೊಂಡಿರುತ್ತದೆ) ತಕ್ಷಣದಿಂದಲೇ ಜಾರಿಗೆ ಬಂದಿದೆ. 5 ಕಿ.ಮೀ ಒಳಗೆ ಸರಬರಾಜು ಮಾಡುವ 6,000 ಲೀಟರ್ ನೀರಿಗೆ 600 ರೂ.; 10 ಕಿ.ಮೀ ಒಳಗೆ ಪೂರೈಕೆ ಮಾಡಿದರೆ 750 ರೂ. ನಿಗದಿ ಮಾಡಲಾಗಿದೆ. 8,000 ಲೀಟರ್ ನೀರಿನ ಟ್ಯಾಂಕರ್‌ಗೆ 700 ರೂ. (5 ಕಿ.ಮೀ ಒಳಗೆ) ಮತ್ತು 850 ರೂ. 10 ಕಿಮೀ) ದರ ವಿಧಿಸಲಾಗಿದೆ. ದೊಡ್ಡ ನೀರಿನ ಟ್ಯಾಂಕರ್‌ಗಳಿಗೆ (12,000 ಲೀಟರ್) ಬೆಲೆ 1,000 ರಿಂದ 1,200 ರೂ. ಇದೆ. ದೊಡ್ಡ ಟ್ಯಾಂಕರ್‌ಗಳಲ್ಲಿ ಹೆಚ್ಚುವರಿ ಪ್ರತಿ ಕಿಲೋ ಲೀಟರ್‌ಗೆ 50 ರೂಪಾಯಿ ಸಂಗ್ರಹಿಸಲು ಆಡಳಿತ ಅವಕಾಶ ಕಲ್ಪಿಸಲಾಗಿದೆ.
ಬೆಲೆಗಳ ಮಿತಿಯನ್ನು ಕಾಯ್ದುಕೊಂಡಿರುವುದು ಸರ್ಕಾರದ ದಿಟ್ಟ ಕ್ರಮವಾಗಿದೆ. ಪ್ರತಿ ಟ್ಯಾಂಕರ್‌ಗೆ 2,000 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದ ಟ್ಯಾಂಕರ್ ಕಾರ್ಟೆಲ್‌ನಿಂದ ಸಾಮಾನ್ಯ ಜನರಿಗೆ ಕಿರುಕುಳವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಖಾಸಗಿ ನಿರ್ವಾಹಕರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
