
ಬೆಂಗಳೂರು:ವಿದ್ಯುತ್ ಬೇಡಿಕೆಯ ಒತ್ತಡ ನಿವಾರಣೆ ಮಾಡಲು ರೈತರ ಪಂಪ್ ಸೆಟ್ ಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಲು ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ.ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವ ರಾಜ್ಯಕ್ಕೆ ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಕೊರತೆ ಎದುರಾಗಿರಲಿಲ್ಲ. ಈ ಬಾರಿ ಮಳೆ ಇಲ್ಲದೆ ಜಲಾಶಯಗಳು ಅರ್ಧದಷ್ಟು ತುಂಬದೆ ಬರ ಎದುರಾಗಿದ್ದರಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಅತಿ ಹೆಚ್ಚಾಗಿ ಪಂಪ್ ಸೆಟ್ ಅವಲಂಭಿಸಿರುವ ಕಾರಣ ವಿದ್ಯುತ್ ಬೇಡಿಕೆಯೂ ಗಣನೀಯವಾಗಿ ಹೆಚ್ಚಳವಾಗಿದೆ.ರಾಜ್ಯದಲ್ಲಿ 36 ಲಕ್ಷ ರೈತರ ಪಂಪ್ ಸೆಟ್‌ಗಳಿರಬಹುದು ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಅರ್ಧದಷ್ಟು ರೈತರ ಪಂಪ್ ಸೆಟ್‌ಗಳಿಗೆ ಸೋಲಾರ್ ಅಳವಡಿಕೆ ಮಾಡುವಂತೆ ಪ್ರೋತ್ಸಾಹ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.ಒಂದು ಪಂಪ್ ಸೆಟ್‌ಗೆ ಸೋಲಾರ್ ಅಳವಡಿಸಿಕೊಳ್ಳಲು 4 ಲಕ್ಷ ರೂ ಬಂಡವಾಳ ತಗುಲುತ್ತದೆ. ಇದರಲ್ಲಿ ಸರ್ಕಾರ ಸದ್ಯ ಶೇ.70ರಷ್ಟು ಮಾತ್ರ ಸಬ್ಸಿಡಿ ರೂಪದಲ್ಲಿ ಭರಿಸುತ್ತಿದ್ದು, ಇನ್ನು ಶೇ.30ರಷ್ಟು ಮಾತ್ರ ಬಂಡವಾಳ ಹಾಕಬೇಕಾಗುತ್ತದೆ. ಈ ಯೋಜನೆಯನ್ನು ಇನ್ನಷ್ಟು ಉತ್ತೇಜನಕಾರಿಯಾಗಿ ಮಾಡಿ ರೈತರನ್ನು ಪ್ರೋತ್ಸಾಹ ಮಾಡಲು ಸರ್ಕಾರ ಮುಂದಾಗಿದೆ.ರೈತರು ತಮ್ಮ ಪಂಪ್ ಸೆಟ್‌ಗಳಿಗೆ ವಿದ್ಯುತ್ ಬಳಸುವಲ್ಲಿ ಸ್ವಾವಲಂಬಿಯಾದರೆ, ಅಷ್ಟು ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ. ಮತ್ತು ಬೇಡಿಕೆ ಪ್ರಮಾಣ ತಗ್ಗಲಿದೆ ಎನ್ನುವುದು ಇಂಧನ ಇಲಾಖೆಯ ಅಂದಾಜು.ಎಲ್ಲಾ ಎಸ್ಕಾಂಗಳಲ್ಲಿಯೂ ರೈತರ ಪಂಪ್ ಸೆಟ್ ಗಳಿಗೆ ಸೋಲಾರ್ ಅಳವಡಿಸಲು ಗುರಿ ನೀಡಲು ಇಲಾಖೆ ಕ್ರಮ ಕೈಗೊಂಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty + 9 =
Remember me
