ಬೆಂಗಳೂರು:ಸುಮಾರು ಎರಡೂವರೆ ತಿಂಗಳ ಬಳಿಕ ವಿಧಾನಸೌಧಕ್ಕೆ ಜೀವ ಕಳೆ ಬಂದಿದೆ. ಲೋಕಸಭೆ ಚುನಾವಣೆ ಬಳಿಕ ಸಂಪೂರ್ಣ ಸ್ಥಗಿತಗೊಂಡಿದ್ದ ವಿಧಾನಸೌಧದಲ್ಲಿ ರಾಜಕೀಯ ಚಟುವಟಿಕೆಗಳು ಈಗ ಮತ್ತೆ ಗರಿಗೆದರಿವೆ.
ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಾಲೀಮು ಆರಂಭಿಸಿದ್ದವು. ಬಿಜೆಪಿ ಸಭೆ, ಸಮಾರಂಭ, ರ‌್ಯಾಲಿ, ಸರ್ಕಾರದ ಗ್ಯಾರಂಟಿ ಜಾರಿ ವಿರುದ್ಧ ಹೋರಾಟಗಳನ್ನು ನಡೆಸಿದರೆ, ಕಾಂಗ್ರೆಸ್ ಗ್ಯಾರಂಟಿ ಸಮಾವೇಶಗಳನ್ನು ನಡೆಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದವು.ಮಾ.16 ರಂದು ಭಾರತ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ೋಷಣೆ ಮಾಡಿ ನೀತಿ ಸಂಹಿತೆ ಜಾರಿಗೊಳಿಸಿದ ಪರಿಣಾಮ ಆಡಳಿತ ಯಂತ್ರಕ್ಕೆ ಗರ ಬಡಿದಂತಾಯಿತು.
ರಾಜ್ಯ ಸಚಿವರು, ಶಾಸಕರು ವಿಧಾನಸೌಧದತ್ತ ಸುಳಿಯುವುದನ್ನು ನಿಲ್ಲಿಸಿದರು. ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳ ಸಭೆಗಳು ಕೂಡ ಸ್ಥಗಿತಗೊಂಡವು. ಬಹುತೇಕ ಆಡಳಿತ ಯಂತ್ರ ಚುನಾವಣಾ ಕಾರ್ಯದಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಭಾಗಿಯಾಗಿತ್ತು. ಪರಿಣಾಮವಾಗಿ ಸಾರ್ವಜನಿಕರೂ ಕೂಡ ವಿಧಾನಸೌಧದತ್ತ ಸುಳಿಯದಂತಾದರು.
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಚುನಾವಣಾ ಅಖಾಡಕ್ಕಿಳಿದಿದ್ದರು. ಆಗಂತೂ ವಿಧಾನಸೌಧ ಬಣಗುಡುತ್ತಿತ್ತು. ಅಧಿಕಾರಿಗಳದ್ದೇ ಕಾರುಬಾರಿತ್ತು. ಜನರ ಸುಳಿದಾಟವೂ ವಿಧಾನಸೌಧದತ್ತ ಇರಲಿಲ್ಲ. ಅಧಿಕಾರಿಗಳು ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಆಡಳಿತ ನಡೆಯುತ್ತಿತ್ತು.
ಜೂ.4ಕ್ಕೆ ಚುನಾವಣೆ ಲಿತಾಂಶ ಬಂದಾಯಿತು. ಜೂ.6 ರಿಂದ ಭಾರತ ಚುನಾವಣಾ ಆಯೋಗ ನೀತಿ ಸಂಹಿತೆ ತೆರವುಗೊಳಿಸಿತು. ಈ ನಡುವೆ ವಿಧಾನ ಪರಿಷತ್ತಿನ ಆರು ಸ್ಥಾನಗಳ ಚುನಾವಣೆ, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 11 ಸ್ಥಾನಗಳ ಚುನಾವಣೆ ಭರಾಟೆ ಜೋರಾಗಿಯೇ ಇತ್ತು.ಈಗ ಚುನಾಯಿತ ಪ್ರತಿನಿಧಿಗಳು ಚುರುಕುಗೊಂಡಿದ್ದಾರೆ. ಆಡಳಿತ ಯಂತ್ರದ ಯಂತ್ರ ಜೋರಾಗಿ ತಿರುಗತೊಡಗಿದೆ.
ಅನೇಕ ಯೋಜನೆಗಳಲ್ಲಿ ಗುರಿ ಸಾಧನೆ ಮಾಡಬೇಕಾಗಿರುವುದರಿಂದ ಸಚಿವರು ವಿಧಾನಸೌಧದತ್ತ ದೌಡಾಯಿಸಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಗುರಿ ನಿಗದಿ ಮಾಡುತ್ತಿದ್ದಾರೆ. ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವೇಗ ನೀಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಆರ್ಥಿಕ ಇಲಾಖೆ, ವಾಣಿಜ್ಯ, ಅಬಕಾರಿ, ಗಣಿ ಭೂಮ ವಿಜ್ಞಾನ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಮುಕ್ಕಾಲು ದಿನ ವಿಧಾನಸೌಧದಲ್ಲೇ ಕಳೆದರು.
ಮುಖ್ಯಮಂತ್ರಿಗಳು ಸಭೆ ನಡೆಸಿದ ಕಾರಣ ಸಂಬಂಧಿಸಿದ ಇಲಾಖೆಗಳ ಸಚಿವರು, ಅಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರ ದಂಡೇ ವಿಧಾನಸೌಧದಲ್ಲಿ ನೆರೆದಿತ್ತು. ಬಹುದಿನಗಳ ನಂತರ ಜನಜಂಗುಳಿ ವಾತಾವರಣ ನಿರ್ಮಾಣವಾಗಿತ್ತು. ಅಬಕಾರಿ ಇಲಾಖೆ ಆನ್ ಲೈನ್ ಸೇವೆಗಳ ನೂತನ ತಂತ್ರಾಂಶಗಳಿಗೆ ಸಿಎಂ ಚಾಲನೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಪೌರಾಡಳಿತ ಸಚಿವ ರಹೀಂ ಖಾನ್ ವಿಕಾಸಸೌಧದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನಸೌಧದಲ್ಲಿ ತಮ್ಮ ತಮ್ಮ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.ಸ್ಪೀಕರ್ ಯು.ಟಿ.ಖಾದರ್ ಅವರಿಂದ ಸುರಪುರ ಉಪ ಚುನಾವಣೆಯಲ್ಲಿ ವಿಜೇತರಾದ ರಾಜಾ ವೇಣುಗೋಪಾಲ ನಾಯಕ ಅವರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ಎಲ್ಲ ಕಾರ್ಯ ಚಟುವಟಿಕೆಗಳಿಂದ ವಿಧಾನಸೌಧ, ವಿಕಾಸಸೌಧಗಳು ಗಿಜಗುಡುತ್ತಿದ್ದವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + sixteen =
Remember me
