ಉಡುಪಿ:ಅಗ್ನಿವೀರರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅಗ್ನಿಪಥ ವಿರೋಧಿಸಿ ಅಗ್ನಿ ಕೊಡುವವರು ಗಲಾಟೆ ಆರಂಭಿಸಿದ್ದಾರೆ. ದೇಶದಲ್ಲಿ ಅಗ್ನಿ ವೀರರು ಕೂಡ ಸೃಷ್ಟಿಯಾಗುತ್ತಿದ್ದಾರೆ. ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷಗಳ ತರಬೇತಿ ನೀಡಲಾಗುತ್ತದೆ. ಅಗ್ನಿ ವೀರರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೀಸಲಾತಿ ನೀಡಲಾಗುವುದು.
ದೈಹಿಕ ಶಿಕ್ಷಕ ಹುದ್ದೆ ನೀಡಲು ಚಿಂತನೆ:ಅಲ್ಲದೇ ಅಗ್ನಿವೀರರಿಗೆ ದೈಹಿಕ ಶಿಕ್ಷಕ ಹುದ್ದೆ ನೀಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರಕ್ಕೆ ಟಿಪ್ಪಣಿ ಕೊಟ್ಟಿದ್ದೇನೆ. ಶೇಕಡ 75ರಷ್ಟು ಅಗ್ನಿವೀರರಿಗೆ ಮೀಸಲಿಡುವ ಯೋಚನೆ ಇದೆ ಎಂದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಮೀಸಲಾತಿಗೆ ಚಿಂತನೆ ಮಾಡಲಾಗಿದೆ. ಇತರ ಹುದ್ದೆಗಳಲ್ಲೂ ಆದ್ಯತೆ ನೀಡುವ ಚಿಂತನೆ ಇದ್ದು, ಕಡತವನ್ನು ಮಂಡಿಸಲು ಈಗಾಗಲೇ ಟಿಪ್ಪಣಿ ಕೊಡಲಾಗಿದೆ.
ವಾರ್ಡನ್ ಹುದ್ದೆ ಮೀಸಲಾತಿ:ಅದೇ ರೀತಿ ವಾರ್ಡನ್ ಹುದ್ದೆಯಲ್ಲೂ ಅಗ್ನಿ ವೀರರಿಗೆ ಅವಕಾಶ ನೀಡಲು ಯೋಜಿಸಲಾಗಿದೆ. ಸುಶಿಕ್ಷಿತ ಅಗ್ನಿ ವೀರರಿಗೆ ಸೂಕ್ತ ಹುದ್ದೆ ನೀಡಲು ಚಿಂತಿಸಲಾಗಿದೆ. ಅಗ್ನಿ ವೀರರನ್ನು ನೇಮಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಖಂಡಿತ ಅವರಿಗೆ ಮೀಸಲು ಇರುತ್ತದೆ ಎಂದು ತಿಳಿಸಿದರು.
ಸೇನಾ ತರಬೇತಿ ಕೇಂದ್ರ ಸ್ಥಾಪನೆ:ಅಗ್ನಿಪಥ್ ಯೋಜನೆಗೆ ಪೂರಕವಾಗಿ ಸೇನಾ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು. ಸೇನಾ ಸೇರ್ಪಡೆಗೆ ಪೂರ್ವ ತರಬೇತಿ ಕೇಂದ್ರಗಳ ಸ್ಥಾಪನೆ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಗೆ ಯೋಜನೆ ಮಾಡಲಾಗಿದೆ. ರಾಣಿ ಅಬ್ಬಕ್ಕ, ಕೋಟಿ-ಚೆನ್ನಯ್ಯ, ಹೆಂಜ ನಾಯ್ಕರ ಹೆಸರಲ್ಲಿ ಕೇಂದ್ರ ಸ್ಥಾಪನೆಗೆ ಈಗಲೇ ಆದೇಶ ಮಾಡಲಾಗಿದೆ. ತಿಂಗಳೊಳಗೆ ಕೇಂದ್ರದ ಚಟುವಟಿಕೆಗಳ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನ ಸ್ವಚ್ಛಗೊಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
