ಧಾರವಾಡ:ಅಗ್ನಿಪಥ ಮಹತ್ತರವಾದ ಯೋಜನೆ, ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಪ್ರತಿಭಟನೆ ಮಾಡುವ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದಿರುವುದು ತಪ್ಪು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ಹೇಳಿದ್ದಾರೆ.
ನಾಲ್ಕು ವರ್ಷದ ಸೇವೆ ಬಳಿಕ ಬೇಕಾದ ವೃತ್ತಿಯನ್ನು ಆರಿಸಿಕೊಳ್ಳಬಹುದು, ಅದರಲ್ಲಿ ಮೀಸಲಾತಿ ಸಹ ಇರುತ್ತೆ, ಹಾಗಾದರೆ ಪ್ರತಿಭಟನೆ ಮಾಡುವವರೆಲ್ಲಾ ಸೇನೆ ಸೇರಬಯಸುವವರು ಅಲ್ಲವೇ ಎಂದು ಕಾಂಗ್ರೆಸ್​ ನಾಯಕರಿಗೆ ಪ್ರಶ್ನಿಸಿದ್ದಾರೆ.
ಸೇನೆಗೆ ಸೇರುವ ಉದ್ದೇಶವೇ ದೇಶ ರಕ್ಷಣೆಯಾಗಿದೆ, ಯಾರಾದರೂ ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ. ಜನರಿಗೆ ತೊಂದರೆ ಕೊಟ್ಟು ದೇಶ ಕಾಯುವುದಕ್ಕೆ ಸಾಧ್ಯವೇ ಎಂದು ಹೇಳಿದ್ದಾರೆ.
ಇವೆಲ್ಲಾ ಕಿಡಿಗೇಡಿಗಳ ಕುತಂತ್ರವಾಗಿದ್ದು, ಕೆಲವರು ಉದ್ದೇಶಪೂರ್ವಕವಾಗಿಯೇ ಪ್ರಚೋದಿಸುತ್ತಿದ್ದಾರೆ. ಇದಕ್ಎಕ ಯುವಕರು ಬಲಿಯಾಗಬಾರದು. ಕಾಂಗ್ರೆಸ್​ ಪಕ್ಷ ಎಲ್ಲಾ ಕಡೆ ಅದೇ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿಗೆ ವಿಚಾರಣೆ ಕರೆದರೆ ಅದಕ್ಕೂ ಪ್ರತಿಭಟನೆ ಮಾಡಿದ್ದಾರೆ. ಹಿಂದೆ ಖರ್ಗೆ ಅವರಿಗೆ ಇಡಿ ವಿಚಾರಣೆ ಮಾಡಿದಾಗ ಒಬ್ಬರೂ ಪ್ರತಿಭಟಿಸಲಿಲ್ಲ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ದೇಶವಿರೋಧಿ ಚಟುವಟಿಕೆಗಳಲ್ಲಿ ಕಾಂಗ್ರೆಸ್​ ಕೈವಾಡವಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸಿಕಂದರಾಬಾದ್​​ ಹಿಂಸಾಚಾರದಲ್ಲಿ ಮಾಜಿ ಸೈನಿಕನ ಕೈವಾಡ ಬಯಲು! ಪೊಲೀಸರಿಂದ ಮಾಸ್ಟರ್​ ಮೈಂಡ್​ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nineteen =
Remember me
