ಬೆಂಗಳೂರು:ಲಿಂಗ ತಾರತಮ್ಯ ಅಳಿಸಿ, ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಅವಕಾಶ ನೀಡುವ ’ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್ ಬುಧವಾರ ಅಸ್ತು ಎಂದಿದೆ. ಹಾಗೆ, ಮಹಿಳೆಯರ ಸುರಕ್ಷತೆ, ನೇಮಿಸಿಕೊಂಡ ಸಂಸ್ಥೆಗಳಿಗೆ ಉತ್ತರದಾಯಿತ್ವ ನಿಗದಿ, ನಿರ್ದಾಕ್ಷಿಣ ಕ್ರಮದ ವಿಚಾರಗಳಲ್ಲಿ ಸರ್ಕಾರ ನಿಲುವು ಸ್ಪಷ್ಟವಾಗಿರಬೇಕು ಎಂಬ ಸಲಹೆ ನೀಡಿದೆ. ಕಾರ್ವಿುಕ ಸಚಿವ ಶಿವರಾಮ್ ಹೆಬ್ಬಾರ್ ವಿಧೇಯಕ ಮಂಡಿಸಿದರು.
ಭೂ ಪರಿವರ್ತನೆ ಪರಿಗಣನೆ:ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಳಿಗೆ ಬೇಕಾದ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಆದರೆ, ಭೂ ಉಪಯೋಗ ಪರಿವರ್ತನೆಯಲ್ಲಿ ವಿಳಂಬದಿಂದ ಯೋಜನೆ ಅನುಷ್ಠಾನ ವಿಳಂಬವಾಗುವುದನ್ನು ತಪ್ಪಿಸಲೆಂದು ಪರಿವರ್ತನೆ ಪರಿಗಣನೆ (ಡೀಮ್್ಡ ಕನ್ವರ್ಷನ್)ಗೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ರಚಿತ ’ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2020’ಕ್ಕೆ ಮೇಲ್ಮನೆ ಅಸ್ತು ಎಂದಿತು.
ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ, 2020ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.
ಕಾನೂನು ಏನು ಹೇಳುತ್ತೆ?:=ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಕಾರ್ಯವನ್ನು ನಿರ್ವಹಿಸುತ್ತಿರುವ ನೌಕರರಿಗೆ ಅಡಚಣೆ, ಅವರ ವಿರುದ್ಧ ಹಿಂಸಾಕೃತ್ಯ ಎಸಗುವುದನ್ನು ಪ್ರತಿಬಂಧಿಸಲು, ಖಾಸಗಿ ಸ್ವತ್ತಿಗೆ ಹಾನಿಯುಂಟು ಮಾಡುವುದನ್ನು ನಿಷೇಧಿಸಲು, ನಷ್ಟ ವಸೂಲು ಮಾಡಲು ಈ ಕಾನೂನು ತರಲಾಗುತ್ತಿದೆ. =ನಿಯಮ ಉಲ್ಲಂಘಿಸಿದರೆ, ಅಧಿಕಾರ- ನೌಕರರಿಗೆ ಅಡಚಣೆ ಉಂಟು ಮಾಡಿದರೆ ಅಪರಾಧ ನಿರ್ಣಯದ ಮೇಲೆ ಮೂರು ತಿಂಗಳಿಗೆ ಕಡಿಮೆ ಇಲ್ಲದ ಆದರೆ ಐದು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸ ಮತ್ತು ಐವತ್ತು ಸಾವಿರ ರೂ.ಗೆ ಕಡಿಮೆ ಇಲ್ಲದಂತೆ ಎರಡು ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ. ಹಿಂಸಾಕೃತ್ಯ ನಡೆಸಿದ್ದು ಸಾಬೀತಾದರೆ ಆರು ತಿಂಗಳಿಗೆ ಕಡಿಮೆ ಇಲ್ಲದಂತೆ ಏಳು ವರ್ಷಗಳ ಅವಧಿಗೆ ವಿಸ್ತರಿಸಬಹುದಾದ ಕಾರಾವಾಸ ಮತ್ತು 1-5 ಲಕ್ಷ ರೂ. ದಂಡಿಸಬಹುದಾದಂತೆ ಕಾನೂನು ಅವಕಾಶ ಮಾಡಿಕೊಡಲಾಗಿದೆ. =ಕಾನೂನು ಜಾರಿಯಲ್ಲಿರುವಾಗ ಸಾರ್ವಜನಿಕ ಅಥವಾ ಖಾಸಗಿ ಸ್ವತ್ತಿಗೆ ಹಾನಿ ಮಾಡಿದರೆ, ಹಾನಿ ಮಾಡಲು ಪ್ರಚೋದಿಸಿದರೆ 3 ತಿಂಗಳಿಂದ 5 ವರ್ಷದ ವರೆಗೆ ಜೈಲು ಶಿಕ್ಷೆ, 50 ಸಾವಿರದಿಂದ 2 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. =ರಾಜ್ಯದೊಳಗೆ ಯಾವುದೇ ಗುಂಪುಗೂಡಿಕೆ, ಆಚರಣೆ, ಆರಾಧನೆ ಅಥವಾ ಇತರ ಅಂಥ ಚಟುವಟಿಕೆಗಳಲ್ಲಿ ವ್ಯಕ್ತಿಯಿಂದ ಸಾಂಕ್ರಾಮಿಕ ರೋಗಗಳು ಸಾಕಷ್ಟು ಹರಡುತ್ತಿದೆ ಎಂದು ಸರ್ಕಾರ ಪರಿಗಣಿಸಿದ ಕೃತ್ಯ ನಿಷೇಧಿಸಲು ಅವಕಾಶ ಮಾಡಿಕೊಳ್ಳಲಾಗಿದೆ. =ಸಾರ್ವಜನಿಕ, ಖಾಸಗಿ ಸಾರಿಗೆ ಕಾರ್ಯಾಚರಣೆ ಮೇಲೆ ನಿರ್ಬಂಧ ವಿಧಿಸುವುದು, ರಾಜ್ಯದ ವಾಯುಮಾರ್ಗ, ರೈಲು, ರಸ್ತೆ, ಸಮುದ್ರ ಮಾರ್ಗ ಅಥವಾ ಯಾವುದೇ ಮಾರ್ಗಗಳಿಂದ ರಾಜ್ಯ ಪ್ರವೇಶಿಸುವ ವ್ಯಕ್ತಿಗಳನ್ನು ಪರೀಕ್ಷಿಸುವುದು, ಅತ್ಯಾವಶ್ಯಕ ಸೇವೆಗಳಲ್ಲಿ ಸೇವಾ ನೀಡಿಕೆ ಅವಧಿ ನಿರ್ಬಂಧಿಸುವುದಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ.
ಪುರಸಭೆ ತಿದ್ದುಪಡಿ ವಿಧೇಯಕ ಮಂಡನೆ
ಸಚಿವ ನಾರಾಯಣಗೌಡ ಅನುಪಸ್ಥಿತಿಯಲ್ಲಿ ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಡನೆ ಮಾಡಿದರು. ಪುರಸಭೆಗಳಿಗೆ 3 ಹಂತದಲ್ಲಿ ಸಮಿತಿ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಣೆ ನೀಡಿದ ಮೇಲೆ ಸದನ ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fourteen =
Remember me
